PM Modi in Belagavi: ಕನ್ನಡ ನಾಡಿನ ಸಂಸ್ಕೃತಿಯಿಂದ ಪ್ರಭಾವಿತರಾಗಿರುವ ಪ್ರಧಾನಿ ಮೋದಿಯವರನ್ನು ರಂಗೋಲಿ ಕಲೆಯೂ ದಂಗಾಗಿಸಿತು!

|

Updated on: Feb 27, 2023 | 6:29 PM

ನಮ್ಮ ಸಂಸ್ಕೃತಿಯ ಒಂದು ಭಾಗವಾಗಿರುವ ರಂಗೋಲಿ ಕೂಡ ಬೆಳಗಾವಿಯಲ್ಲಿ ಇಂದು ಪ್ರಧಾನಿ ಮೋದಿಯವರನ್ನು ಇಂಪ್ರೆಸ್ ಮಾಡಿತು.

ಬೆಳಗಾವಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ನಮ್ಮ ನಾಡಿ ಭಾಷೆ, ಸಂಸ್ಕೃತಿ ಮತ್ತು ಶ್ರೀಮಂತ ಪರಂಪರೆಯಿಂದ (heritage) ಪ್ರಭಾವಿತರಾಗಿರುವುದು ಸರ್ವವಿದಿತ, ರಾಜ್ಯಕ್ಕೆ ಭೇಟಿ ನೀಡಿದಾಗೆಲ್ಲ ಅವರು ಕನ್ನಡ ನಾಡಿನ ಸಂಸ್ಕೃತಿಯನ್ನು ಕೊಂಡಾಡುತ್ತಾರೆ, ಭಾಷಣವನ್ನು ಕನ್ನಡದಲ್ಲಿ (Kannada) ಆರಂಭಿಸುತ್ತಾರೆ, ಇಲ್ಲಿಯ ಸಾಹಿತಿ-ವಿದ್ವಾಂಸರನ್ನು ಆದರದಿಂದ ಉಲ್ಲೇಖಿಸುತ್ತಾರೆ. ನಮ್ಮ ಸಂಸ್ಕೃತಿಯ ಒಂದು ಭಾಗವಾಗಿರುವ ರಂಗೋಲಿ (Rangoli) ಕೂಡ ಬೆಳಗಾವಿಯಲ್ಲಿ ಇಂದು ಪ್ರಧಾನಿ ಮೋದಿಯವರನ್ನು ಇಂಪ್ರೆಸ್ ಮಾಡಿತು. ವೇದಿಕೆಯ ಮುಂಭಾಗದಲ್ಲಿ ಕೇಂದ್ರ ಸರ್ಕಾರದ ಹಲವಾರು ಯೋಜನೆಗಳನ್ನು ರಂಗೋಲಿಯಲ್ಲಿ ಬಿಡಿಸಿದ್ದನ್ನು ಕಂಡು ಅವರು ಮೂಕವಿಸ್ಮಿತರಾದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ