ಯಡಿಯೂರಪ್ಪ, ಬೊಮ್ಮಾಯಿ, ಕುಮಾರಸ್ವಾಮಿ ನೇಮಕ ಮಾಡಿದ ವಕೀಲರೇ ಈಗಲೂ ಕಾವೇರಿ ನೀರಿಗಾಗಿ ವಾದಿಸುತ್ತಿದ್ದಾರೆ: ಡಿಕೆ ಶಿವಕುಮಾರ್

|

Updated on: Sep 22, 2023 | 5:12 PM

ಹಿಂದಿನ ಸರ್ಕಾರಗಳು ಯಾವ್ಯಾವ ಸಂದರ್ಭದಲ್ಲಿ ನೀರನ್ನು ತಮಿಳುನಾಡುಗೆ ಬಿಟ್ಟಿವೆ ಅಂತ ತಮ್ಮಲ್ಲಿ ದಾಖಲೆಗಳಿವೆ ಎಂದ ಅವರು ಬಿಜೆಪಿ ಸರ್ಕಾರ 10,000 ಕ್ಯೂಸೆಕ್ಸ್ ನೀರು ಬಿಡಲು ಅಫಿಡವಿಟ್ ಮಾಡಿಸಿದ ವರದಿಯ ಪೇಪರ್ ಕಟಿಂಗ್ ತೋರಿಸಿದರು.

ಬೆಂಗಳೂರು: ನಗರದಲ್ಲಿಂದು ಮಾಧ್ಯಮ ಪ್ರತಿನಧಿಗಳೊಂದಿಗೆ ಮಾತಾಡಿದ ಡಿಸಿಎಂ ಡಿಕೆ ಶಿವಕುಮಾರ್ (DK Shivakumar), ನಿನ್ನೆ ನಡೆದ ವಿಚಾರಣೆಯಲ್ಲಿ ಸುಪ್ರೀಮ್ ಕೋರ್ಟ್ ಕರ್ನಾಟಕ (Karnataka) ಮತ್ತು ತಮಿಳುನಾಡು (Tamil Nadu) ಎರಡೂ ರಾಜ್ಯಗಳ ಅಪೀಲನ್ನು ತಿರಸ್ಕರಿಸಿ ನಿರ್ವಹಣಾ ಪ್ರಾಧಿಕಾರ ನೀಡಿರುವ (CWMA) ಆದೇಶಕ್ಕೆ ಬದ್ಧರಾಗಿರಿ ಅಂತ ಹೇಳಿದೆ ಎಂದರು. ರಾಜ್ಯ ಸರ್ಕಾರದಿಂದ ನಿಯೋಜಿತ ವಕೀಲರು ಅದ್ಭುತವಾಗಿ ವಾದ ಮಾಡಿದರು ಎಂದು ಹೇಳಿದ ಶಿವಕುಮಾರ್ ವಿರೋಧ ಪಕ್ಷಗಳು ವಾದಮಂಡನೆ ದುರ್ಬಲವಾಗಿತ್ತು ಅಂತ ಆರೋಪ ಮಾಡಿದರೆ ಮಾಡಿಕೊಳ್ಳಲಿ, ಯಾಕೆಂದರೆ ಹಿಂದೆ ಬಿಎಸ್ ಯಡಿಯೂರಪ್ಪ, ಹೆಚ್ ಡಿ ಕುಮಾರಸ್ವಾಮಿ ಮತ್ತ ಬಸವರಾಜ ಬೊಮ್ಮಾಯಿ ಸರ್ಕಾರಗಳು ಯಾವ ವಕೀಲರನ್ನು ನೇಮಕ ಮಾಡಿದ್ದರೋ ಈಗಲು ಅವರೇ ಮುಂದುವರಿದಿದ್ದಾರೆ ಎಂದು ಶಿವಕುಮಾರ್ ಹೇಳಿದರು. ಹಿಂದಿನ ಸರ್ಕಾರಗಳು ಯಾವ್ಯಾವ ಸಂದರ್ಭದಲ್ಲಿ ನೀರನ್ನು ತಮಿಳುನಾಡುಗೆ ಬಿಟ್ಟಿವೆ ಅಂತ ತಮ್ಮಲ್ಲಿ ದಾಖಲೆಗಳಿವೆ ಎಂದ ಅವರು ಬಿಜೆಪಿ ಸರ್ಕಾರ 10,000 ಕ್ಯೂಸೆಕ್ಸ್ ನೀರು ಬಿಡಲು ಅಫಿಡವಿಟ್ ಮಾಡಿಸಿದ ವರದಿಯ ಪೇಪರ್ ಕಟಿಂಗ್ ತೋರಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on