ಸನಾತನ ಧರ್ಮದಲ್ಲಿ ಅರಿಶಿಣಕೊಂಬಿನ ಉಪಯೋಗದ ಮಹತ್ವ ತಿಳಿಯಿರಿ

Updated on: Sep 11, 2025 | 6:58 AM

ಅರಿಶಿನ ಕೊಂಬಿನ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ವಿಡಿಯೋದಲ್ಲಿ ವಿವರಿಸಲಾಗಿದೆ. ಪೂಜೆಗಳಲ್ಲಿ ಅದರ ಬಳಕೆಯ ಜೊತೆಗೆ, ದುಷ್ಟಶಕ್ತಿಗಳನ್ನು ಹೋಗಲಾಡಿಸುವ ಮತ್ತು ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುವ ಗುಣ ಹೊಂದಿದೆ. ಮದುವೆಗಳಲ್ಲಿ ಅರಿಶಿನ ಶಾಸ್ತ್ರದಲ್ಲಿ ಅರಿಶಿನ ಕೊಂಬಿನ ಪ್ರಾಮುಖ್ಯತೆ ಅಪಾರ. ಇಲ್ಲಿದೆ ವಿಡಿಯೋ ನೋಡಿ.

ಬೆಂಗಳೂರು, ಸೆಪ್ಟೆಂಬರ್​ 11: ಸನಾತನ ಧರ್ಮದಲ್ಲಿ ಅರಿಶಿನ ಕೊಂಬು ಅತ್ಯಂತ ಪವಿತ್ರವಾಗಿದೆ. ಪೂಜೆ ಮತ್ತು ಶುಭಕಾರ್ಯಗಳಲ್ಲಿ ಅದರ ಬಳಕೆ ವ್ಯಾಪಕವಾಗಿದೆ. ಅರಿಶಿನವನ್ನು ಹರಿದ್ರಾ ಎಂದು ಸಂಸ್ಕೃತದಲ್ಲಿ ಕರೆಯಲಾಗುತ್ತದೆ. ಅರಿಶಿನ ಕೊಂಬು ಕೇವಲ ಪೂಜೆಗೆ ಮಾತ್ರವಲ್ಲದೆ, ಮನೆಯ ರಕ್ಷಣೆ ಮತ್ತು ನಕಾರಾತ್ಮಕ ಶಕ್ತಿಗಳನ್ನು ತೊಡೆದುಹಾಕಲು ಕೂಡ ಬಳಸಲಾಗುತ್ತದೆ. ಹಿಂದಿನ ಕಾಲದಲ್ಲಿ, ತಾಳಿಗೆ ಬದಲಾಗಿ ಅರಿಶಿನ ಕೊಂಬನ್ನು ಧರಿಸುವುದು ವಾಡಿಕೆಯಾಗಿತ್ತು. ಮದುವೆಗಳಲ್ಲಿ ಅರಿಶಿನ ಶಾಸ್ತ್ರದಲ್ಲಿ ಅರಿಶಿನ ಕೊಂಬಿನ ಪ್ರಾಮುಖ್ಯತೆ ಅಪಾರ.