Viral Audio: ಕಷ್ಟದಲ್ಲಿರುವೆ ಅಂತ ಅವಲತ್ತುಕೊಂಡು ಅವನು ನಮ್ಮ ತೋಟದಲ್ಲಿ 3 ದಿನ ಕೂತಿದ್ದಕ್ಕೆ ಹಣ ನೀಡಿದೆ: ಕೆ ಎಮ್ ಶಿವಲಿಂಗೇಗೌಡ, ಶಾಸಕ

ಅರುಣ್​ ಕುಮಾರ್​ ಬೆಳ್ಳಿ

Updated on: Jan 25, 2023 | 9:47 AM

ಕಾರ್ಯಕರ್ತ ತಮ್ಮ ತೋಟದಲ್ಲಿ ಮೂರು ದಿನ ಕೂತು ತುಂಬಾ ಕಷ್ಟದಲ್ಲಿದ್ದೇನೆ ಅಂತ ಅವಲತ್ತುಕೊಂಡ ಕಾರಣಕ್ಕೆ ಅವನಿಗೆ ರೂ. 50,000 ನೀಡಿದೆ ಎಂದು ಅವರು ಹೇಳಿದ್ದಾರೆ.

ಹಾಸನ:  ಜೆಡಿಎಸ್ ಪಕ್ಷದ ಅರಸೀಕೆರೆ ಕೆ ಎಮ್ ಶಿವಲಿಂಗೇಗೌಡ (K M Shivalingegowda) ನೇರ ಮಾತಿನ ಶಿಸ್ತಿನ ಮತ್ತು ಪ್ರಾಮಾಣಿಕ ರಾಜಕಾರಣಿ ಅಂತಲೇ ಹೆಸರಾಗಿದ್ದಾರೆ. ಆದರೆ, ಅವರು ಜೆಡಿಎಸ್ ಪಕ್ಷದ ಕಾರ್ಯಕರ್ತನೊಬ್ಬನಿಗೆ (party worker) ರೂ 50,000 ಕೊಟ್ಟಿದ್ದು ಮತ್ತು ಅ ಕಾರ್ಯಕರ್ತರ ಶಾಸಕರೊಂದಿಗೆ ಫೋನಲ್ಲಿ ನಡೆಸಿದ ಆಡಿಯೋವೊಂದು (audio) ಇತ್ತೀಚಿಗೆ ವೈರಲ್ ಆಗಿದೆ. ಅರಸೀಕೆರೆ ತಾಲ್ಲೂಕು ಗಂಡಸಿ ಹ್ಯಾಂಡ್ ಪೋಸ್ಟ್ ನಲ್ಲಿನ ಲಾಳನಕೆರೆ ಗ್ರಾಮ ಪಂಚಾಯಿತಿಗೆ ನೂತನ ಆಧ್ಯಕ್ಷ ಮತ್ತು ಉಪಾಧ್ಯಾಕ್ಷರನ್ನು ಆಯ್ಕೆ ಮಾಡಿದ ಬಳಿಕ ಈ ವೈರಲ್ ಆಡಿಯೋ ಕ್ಲಿಪ್ಪಿಂಗ್ ಬಗ್ಗೆ ಶಾಸಕರು ಸ್ಪಷ್ಟನೆ ನೀಡಿದ್ದಾರೆ. ಕಾರ್ಯಕರ್ತ ತಮ್ಮ ತೋಟದಲ್ಲಿ ಮೂರು ದಿನ ಕೂತು ತುಂಬಾ ಕಷ್ಟದಲ್ಲಿದ್ದೇನೆ ಅಂತ ಅವಲತ್ತುಕೊಂಡ ಕಾರಣಕ್ಕೆ ಅವನಿಗೆ ರೂ. 50,000 ನೀಡಿದೆ ಎಂದು ಅವರು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.