ಒಂದೇ ಸ್ಥಳದಲ್ಲಿ ನಿರಂತರ ಮಳೆ; ಕೊಡಗಿನಲ್ಲಿ ನಡೆದ ಪ್ರಕೃತಿ ವೈಚಿತ್ರ ನೋಡಲು ಮುಗಿಬಿದ್ದ ಜನ
ಮರವೊಂದರ ಎಲೆಗಳ ಸಂದಿನಿಂದ ನೀರಿನ ಹನಿಗಳು ತೂರಿ ಬಂದಿದ್ದು, ಮಡಿಕೇರಿ ತಾಲೂಕಿನ ಬೆಟ್ಟಗೇರಿ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ಇನ್ನು ಮಳೆ ವಿಸ್ಮಯ ನೋಡಲು ಗ್ರಾಮಸ್ಥರು ಮುಗಿಬಿದ್ದರು.
ರಾಜ್ಯದಲ್ಲಿ ಕೆಲವು ಕಡೆ ಮಳೆಯಾಗುತ್ತಿದ್ದು (Rain), ಅವಾಂತರ ಸೃಷ್ಟಿಯಾಗಿದೆ. ಈ ನಡುವೆ ಕೊಡಗು ಜಿಲ್ಲೆಯಲ್ಲಿ ಪ್ರಕೃತಿ (Nature) ವೈಚಿತ್ರ ನಡೆದಿದೆ. ಬಿರು ಬಿಸಿಲಿನ ನಡುವೆ ಜಿಲ್ಲೆಯಲ್ಲಿ ಒಂದು ಸ್ಥಳದಲ್ಲಿ ಮಾತ್ರ ನಿರಂತರ ಮಳೆಯಾಗಿದೆ. ಕೇವಲ ಐದು ಅಡಿ ಪರಿಧಿಯಲ್ಲಿ ಮಾತ್ರ ಮಳೆ ಬಿದ್ದಿದೆ. ಮರವೊಂದರ ಎಲೆಗಳ ಸಂದಿನಿಂದ ನೀರಿನ ಹನಿಗಳು ತೂರಿ ಬಂದಿದ್ದು, ಮಡಿಕೇರಿ ತಾಲೂಕಿನ ಬೆಟ್ಟಗೇರಿ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ಇನ್ನು ಮಳೆ ವಿಸ್ಮಯ ನೋಡಲು ಗ್ರಾಮಸ್ಥರು ಮುಗಿಬಿದ್ದರು. ಇದು ದೇವರ ವಿಸ್ಮಯ ಎಂದು ಗ್ರಾಮಸ್ಥರು ಭಾವಿಸಿದ್ದಾರೆ. ಸದ್ಯ ಗ್ರಾಮ ಪಂಚಾಯತಿಯಿಂದ ನೀರಿನ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.