ಈ ಯಜಮಾನರು ಪೋಲಿಸರನ್ನು ಕರೆಸಿ ನಂತರ ಅವರನ್ನೇ ದಬಾಯಿಸಿದರು!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 11, 2022 | 10:44 AM

ಯಜಮಾನರು ಪೊಲೀಸರಿಗೆ ಫೋನ್ ಮಾಡಿ ಅಲ್ಲಿಗೆ ಕರೆಸಿದಾಗ ಅವರು ಅಂಗಡಿಯನ್ನು ಕ್ಲೋಸ್ ಮಾಡಿಸಿದ್ದಾರೆ. ಅವರ ಕ್ರಮದಿಂದ ಮತ್ತಷ್ಟು ವ್ಯಗ್ರಗೊಂಡ ಹಿರಿಯರು ಅವನ ವಿರುದ್ಧ ಆ್ಯಕ್ಷನ್ ತೆಗೆದುಕೊಳ್ಳುವ ಬದಲು ಅಂಗಡಿ ಯಾಕೆ ಬಂದ್ ಮಾಡಿಸಿದಿರಿ ಅಂತ ರೇಗುತ್ತಿದ್ದಾರೆ.

Bengaluru:  ಇದೊಂದು ವಿಚಿತ್ರ ಪ್ರಕರಣ ಮಾರಾಯ್ರೇ. ಏನಾಗಿದೆ ಅಂದ್ರೆ ಬೆಂಗಳೂರಲ್ಲಿ (Bengaluru) ಶನಿವಾರ ಬೆಳಗ್ಗೆ ಪೋಲಿಸರ ಮೇಲೆ ರೇಗಾಡುತ್ತಿರುವ ಈ ಯಜಮಾನರು ತಮ್ಮ ವಾಕ್ ಮುಗಿಸಿ ಮನೆಗೆ ವಾಪಸ್ಸು ಹೋಗುವಾಗ ಪಾಪ್ ಕಾರ್ನ್ (popcorn) ಮಾರುವ ಯುವಕನೊಬ್ಬ ಎಣ್ಣೆ ಪೌಚನ್ನು (oil pouch) ಬಾಯಲ್ಲಿ ಕಚ್ಚಿ ಹರಿದು ಎಣೆಯನ್ನು ಬಾಟಲಿಗೆ ತುಂಬಿಸಿಕೊಂಡಿದ್ದಾನೆ ಮತ್ತು ಬಾಯೊಳಗೆ ಬಂದಿದ್ದ ಎಣ್ಣೆಯನ್ನು ಅದೇ ಬಾಟಲಿಯೊಳಗೆ ಉಗಿದಿದ್ದಾನೆ! ಇದನ್ನು ನೋಡಿ ವ್ಯಗ್ರರಾದ ಯಜಮಾನರು ಪೊಲೀಸರಿಗೆ ಫೋನ್ ಮಾಡಿ ಅಲ್ಲಿಗೆ ಕರೆಸಿದಾಗ ಅವರು ಅಂಗಡಿಯನ್ನು ಕ್ಲೋಸ್ ಮಾಡಿಸಿದ್ದಾರೆ. ಅವರ ಕ್ರಮದಿಂದ ಮತ್ತಷ್ಟು ವ್ಯಗ್ರಗೊಂಡ ಹಿರಿಯರು ಅವನ ವಿರುದ್ಧ ಆ್ಯಕ್ಷನ್ ತೆಗೆದುಕೊಳ್ಳುವ ಬದಲು ಅಂಗಡಿ ಯಾಕೆ ಬಂದ್ ಮಾಡಿಸಿದಿರಿ ಅಂತ ರೇಗುತ್ತಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.