ಎರಡು ಚಿಕ್ಕಮಕ್ಕಳೊಂದಿಗೆ ಲಂಪಟ ಗಂಡನ ಮನೆಯಿಂದ ಹೊರದೂಡಲ್ಪಟ್ಟ ರಾಮನಗರದ ಮುಸ್ಕಾನ್ ಖಾನ್ ನ್ಯಾಯ ಯಾಚಿಸುತ್ತಿದ್ದಾಳೆ

|

Updated on: Oct 05, 2023 | 11:57 AM

ಜಿಲಾನ್ ಇತ್ತೀಚಿಗೆ ಮಧುಗಿರಿ ಯುವತಿಯೊಬ್ಬಳನ್ನು ಮದುವೆಯಾಗಿದ್ದು ಅದನ್ನು ಪ್ರಶ್ನಿಸಿದ ಮುಸ್ಕಾನ್ ಳನ್ನು ಮಕ್ಕಳೊಂದಿಗೆ ಹೊರಹಾಕಿದ್ದಾನೆ. ಆ ನರಕದಿಂದ ಹೊರಬರುವ ಉದ್ದೇಶದಿಂದ ಮುಸ್ಕಾನ್ ಡಿವೋರ್ಸ್ ಗೆ ಅರ್ಜಿ ಸಲ್ಲಿಸಿದ್ದರೂ, ಜಿಲಾನ್ ಫ್ಯಾಮಲಿ ಕೋರ್ಟ್ ಗೆ ಹಾಜರಾಗುತ್ತಿಲ್ಲ.

ತುಮಕುರು: ಜಿಲ್ಲೆಯ ತುರುವೇಕೆರೆ ಪಟ್ಟಣದ ನಿವಾಸಿಯಾಗಿರುವ ಮುಸ್ಕಾನ್ ಖಾನ್ (Muskan Khan) ಹೆಸರಿನ ಮಹಿಳೆಯ ಯಾತನೆಯನ್ನು ಕೇಳಿ. ಅಸಲಿಗೆ ರಾಮನಗರದ ಮುಸ್ಕಾನ್ ಖಾನ್​ಳನ್ನು 2018 ಡಿಸೆಂಬರ್ ನಲ್ಲಿ ತುರುವೇಕೆರೆ ನಿವಾಸಿ ಜಿಲಾನ್ ಖಾನ್ (Jilan Khan) ಎನ್ನುವವನ ಜೊತೆ ಎಲ್ಲ ವರೋಪಚಾರಗಳನ್ನು ನೀಡಿ ಬೆಂಗಳೂರಿನ ಅರಮನೆ ಮೈದಾನದಲ್ಲಿರುವ ವೈಟ್ ಪೆಟಲ್ಸ್ ನಲ್ಲಿ (Palace Grounds, White Petals) ಆದ್ದೂರಿಯಾಗಿ ಮದುವೆ ಮಾಡಿಕೊಡಲಾಗಿದೆ. ಮದುವೆಯಾದ ಕೆಲವೇ ದಿನಗಳ ಬಳಿಕ ಜಿಲಾನ್ ಒಬ್ಬ ಕಚ್ಚೆಹರುಕ ಅಂತ ಮುಸ್ಕಾನ್ ಗೆ ಗೊತ್ತಾಗಿ ಪ್ರಶ್ನಿಸಿದಾಗ ಅವನು ಆಕೆಯ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾನೆ. ಇದು 5 ವರ್ಷಗಳಿಂದ ಮುಂದುವರಿದುಕೊಂಡು ಬಂದಿದೆ. ಈ ಅವಧಿಯಲ್ಲಿ ಜಿಲಾನ್, ಮುಸ್ಕಾನ್ ಗೆ ಎರಡು ಮಕ್ಕಳನ್ನೂ ಕರುಣಿಸಿದ್ದಾನೆ. ಇದೆಲ್ಲ ಸಾಲದೆಂಬಂತೆ ಜಿಲಾನ್ ಇತ್ತೀಚಿಗೆ ಮಧುಗಿರಿ ಯುವತಿಯೊಬ್ಬಳನ್ನು ಮದುವೆಯಾಗಿದ್ದು ಅದನ್ನು ಪ್ರಶ್ನಿಸಿದ ಮುಸ್ಕಾನ್ ಳನ್ನು ಮಕ್ಕಳೊಂದಿಗೆ ಹೊರಹಾಕಿದ್ದಾನೆ. ಆ ನರಕದಿಂದ ಹೊರಬರುವ ಉದ್ದೇಶದಿಂದ ಮುಸ್ಕಾನ್ ಡಿವೋರ್ಸ್ ಗೆ ಅರ್ಜಿ ಸಲ್ಲಿಸಿದ್ದರೂ, ಜಿಲಾನ್ ಫ್ಯಾಮಲಿ ಕೋರ್ಟ್ ಗೆ ಹಾಜರಾಗುತ್ತಿಲ್ಲ. ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿರುವ ಮುಸ್ಕಾನ್ ನ್ಯಾಯ ಕೇಳುತ್ತಿದ್ದಾಳೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ