Threads: ಟ್ವಿಟರ್​ಗೆ ಸ್ಪರ್ಧೆ ಒಡ್ಡಲು ಇನ್​ಸ್ಟಾಗ್ರಾಂ ಪರಿಚಯಿಸಿದೆ ಥ್ರೆಡ್ಸ್

|

Updated on: Jul 07, 2023 | 8:30 AM

ಹೊಸ ಅಪ್ಲಿಕೇಶನ್ ಆಂಡ್ರಾಯ್ಡ್ ಬಳಕೆದಾರರಿಗೆ ಗೂಗಲ್ ಪ್ಲೇ ಸ್ಟೋರ್​ನಲ್ಲಿ ಮತ್ತು ಐಫೋನ್ ಬಳಕೆದಾರರಿಗೆ ಆ್ಯಪ್ ಸ್ಟೋರ್‌ನಲ್ಲಿ ಉಚಿತವಾಗಿ ಡೌನ್‌ಲೋಡ್​ಗೆ ಲಭ್ಯವಿದೆ. ಅಮೆರಿಕಾ, ಬ್ರಿಟನ್, ಆಸ್ಟ್ರೇಲಿಯಾ, ಕೆನಡಾ, ಭಾರತ ಮತ್ತು ಜಪಾನ್ ಸೇರಿದಂತೆ 100 ಕ್ಕೂ ಹೆಚ್ಚು ದೇಶಗಳಲ್ಲಿ ಹೊಸ ಥ್ರೆಡ್ಸ್​ ಆ್ಯಪ್ ಲಭ್ಯ.

ಮಾರ್ಕ್ ಜುಕರ್​ಬರ್ಗ್ ಒಡೆತನದ ಮೆಟಾ ಕಂಪನಿ, ಟ್ವಿಟ್ಟರ್ ಪ್ರತಿಸ್ಪರ್ಧಿ ಥ್ರೆಡ್ಸ್ ಆ್ಯಪ್ ಅನ್ನು ಭಾರತ ಸಹಿತ ಜಾಗತಿಕವಾಗಿ ಬಿಡುಗಡೆ ಮಾಡಿದೆ. ಹೊಸ ಅಪ್ಲಿಕೇಶನ್ ಆಂಡ್ರಾಯ್ಡ್ ಬಳಕೆದಾರರಿಗೆ ಗೂಗಲ್ ಪ್ಲೇ ಸ್ಟೋರ್​ನಲ್ಲಿ ಮತ್ತು ಐಫೋನ್ ಬಳಕೆದಾರರಿಗೆ ಆ್ಯಪ್ ಸ್ಟೋರ್‌ನಲ್ಲಿ ಉಚಿತವಾಗಿ ಡೌನ್‌ಲೋಡ್​ಗೆ ಲಭ್ಯವಿದೆ. ಅಮೆರಿಕಾ, ಬ್ರಿಟನ್, ಆಸ್ಟ್ರೇಲಿಯಾ, ಕೆನಡಾ, ಭಾರತ ಮತ್ತು ಜಪಾನ್ ಸೇರಿದಂತೆ 100 ಕ್ಕೂ ಹೆಚ್ಚು ದೇಶಗಳಲ್ಲಿ ಹೊಸ ಥ್ರೆಡ್ಸ್​ ಆ್ಯಪ್ ಲಭ್ಯವಿದೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಥ್ರೆಡ್ಸ್ ಅಪ್ಲಿಕೇಶನ್ 1 ಕೋಟಿಗೂ ಅಧಿಕ ಡೌನ್​ಲೋಡ್ಸ್ ಕಂಡಿದೆ. ಇನ್​ಸ್ಟಾಗ್ರಾಂ ಲಾಗಿನ್ ಬಳಸಿಕೊಂಡು, ಹೊಸ ಥ್ರೆಡ್ಸ್ ಆ್ಯಪ್​ಗೆ ಸೈನ್​ ಇನ್ ಆಗಬಹುದು. ಇದರೊಂದಿಗೆ ಟ್ವಿಟರ್ ಜತೆಗಿನ ಫೇಸ್​ಬುಕ್ ಮೆಟಾ ಕಂಪನಿಯ ಸ್ಪರ್ಧೆ ಮತ್ತಷ್ಟು ಜೋರಾಗಿದೆ.