Rain impact in Kolar: ಕೋಲಾರದಲ್ಲೂ ಭಾರಿ ಮಳೆ, ನೆಲಕಚ್ಚಿದ ಬೀನ್ಸ್ ಬೆಳೆ ಮತ್ತು ನೆಲಕ್ಕುದುರಿದ ಮಾವು

|

Updated on: May 24, 2023 | 10:25 AM

ಇದೇ ಗ್ರಾಮದ ಇನ್ನೊಬ್ಬ ರೈತನ ಮಾವಿನ ತೋಪಿನಲ್ಲಿ ಬಹುತೇಕ ಕಾಯಿಗಳು ನೆಲಕ್ಕುದುರಿವೆ. ರೈತರಿಬ್ಬರೂ ಅಪಾರ ಹಾನಿ ಅನುಭವಿಸಿರುವರೆಂದು ಬೇರೆ ಹೇಳಬೇಕಿಲ್ಲ.

ಕೋಲಾರ: ಅಕಾಲಿಕ ಮಳೆ (untimely rains) ರಾಜ್ಯದ ನಾನಾಭಾಗಗಳಲ್ಲಿ ಸಾಮಾನ್ಯ ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ (adverse impact) ಬೀರುತ್ತಿದೆ. ಬೆಂಗಳೂರಲ್ಲಿ ನಡೆಯುತ್ತಿರುವ ಅನಾಹುತಗಳನ್ನು ನಾವು ವರದಿ ಮಾಡುತ್ತಿದ್ದೇವೆ. ನಿನ್ನೆ ಕೋಲಾರದಲ್ಲಿ (Kolar) ಸುರಿದ ಬಿರುಗಾಳಿ ಸಹಿತ ಮಳೆಯಿಂದ ಏನಾಗಿದೆ ಅಂತ ನೋಡಿ. ಕೋಲಾರ ತಾಲ್ಲೂಕಿನ ತೊಟ್ಲಿ ಗ್ರಾಮದ ರೈತ ಶ್ರೀರಾಮ್ (Sriram) ಒಂದು ಎಕರೆ ಜಮೀನಲ್ಲಿ ಬೆಳೆಯುತ್ತಿದ್ದ ಬೀನ್ಸ್ ಸಂಪೂರ್ಣವಾಗಿ ನೆಲಕಚ್ಚಿದೆ. ಶ್ರೀರಾಮ್ ಅವರ ಮುಖದಲ್ಲಿ ಮಡುಗಟ್ಟಿರುವ ನೋವು ಮತ್ತು ಹತಾಷೆಯನ್ನು ಗಮನಿಸಿ. ಹಾಗೆಯೇ, ಇದೇ ಗ್ರಾಮದ ಇನ್ನೊಬ್ಬ ರೈತನ ಮಾವಿನ ತೋಪಿನಲ್ಲಿ ಬಹುತೇಕ ಕಾಯಿಗಳು ನೆಲಕ್ಕುದುರಿವೆ. ರೈತರಿಬ್ಬರೂ ಅಪಾರ ಹಾನಿ ಅನುಭವಿಸಿರುವರೆಂದು ಬೇರೆ ಹೇಳಬೇಕಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on