ಮೈಸೂರು: ಒಂದು ಕ್ಷಣ ಎದೆ ಧಗ್ ಎನ್ನುವ ದೃಶ್ಯ. ಸಾಮಾನ್ಯವಾಗಿ ಸಫಾರಿಗೆ ಹೋಗುವವರಿಗೆ ಹುಲಿ, ಆನೆ, ಸಿಂಹ ಸೇರಿದಂತೆ ಕಾಡು ಪ್ರಾಣಿಗಳನ್ನು ಹತ್ತಿರದಿಂದ ನೋಡುವ ಚಾನ್ಸ್ ಸಿಗುತ್ತೆ. ಹಾಗೂ ಕೆಲವೊಮ್ಮೆ ಆ ಪ್ರಾಣಿಗಳು ಅಟ್ಟಾಡಿಸಿಕೊಂಡು ಬರುವುದು, ಅಥವಾ ಭೇಟೆಗಾಗಿ ಮತ್ತೊಂದು ಪ್ರಾಣಿಯನ್ನು ಕೊಲ್ಲುವುದನ್ನು ಪ್ರವಾಸಿಗರು ನೋಡಿರುತ್ತಾರೆ. ಅದೇ ರೀತಿ ಸಫಾರಿಗೆ ಹೋಗಿದ್ದ ಮಂದಿಗೆ ಹುಲಿ ಕಾಡೆಮ್ಮೆಯನ್ನು ಚೇಸ್ ಮಾಡಿದ ಭಯಾನಕ ದೃಶ್ಯ ಹತ್ತಿರದಿಂದ ನೋಡುವ ಅವಕಾಶ ಸಿಕ್ಕಿದೆ. ಕಾಡೆಮ್ಮೆಯನ್ನು ಅಟ್ಟಿಸಿಕೊಂಡು ಬಂದ ಹುಲಿಯ ನೋಡಿ ಪ್ರವಾಸಿಗರು ಬೆಚ್ಚಿಬಿದ್ದಿದ್ದಾರೆ.
ಬೇಟೆಗಾಗಿ ಹುಲಿಯೊಂದು ಕಾಡೆಮ್ಮೆಯನ್ನು ಬೆನ್ನಟ್ಟಿದ್ದು ನಡುಕ ಹುಟ್ಟಿಸುವ ಅಪರೂಪದ ಚೇಸಿಂಗ್ ದೃಶ್ಯ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ. ಮೈಸೂರು ಜಿಲ್ಲೆ ಹೆಚ್ಡಿ ಕೋಟೆ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಕಾಡಿನಿಂದ ಸಫಾರಿ ರಸ್ತೆವರೆಗೂ ಹುಲಿ ಕಾಡೆಮ್ಮೆಯನ್ನು ಬೆನ್ನಟ್ಟಿ ಬಂದಿದೆ. ಆದ್ರೆ ಕ್ರೂರ ಮೃಗದ ಕೈಗೆ ಸಿಗದೆ ಚಾಕಚಕ್ಯತೆಯಿಂದ ಕಾಡೆಮ್ಮೆ ತಪ್ಪಿಸಿಕೊಂಡು ಜೀವ ಉಳಿಸಿಕೊಂಡಿದೆ. ಬೇಟೆ ಸಿಗದ ಹುಲಿ ನಿರಾಶೆಯಿಂದ ಕಾಡಿಗೆ ಮರಳಿದೆ. ಸಫಾರಿಗೆ ಹೋದವರ ಕ್ಯಾಮೆರಾದಲ್ಲಿ ಈ ದೃಶ್ಯಗಳು ಸೆರೆಯಾಗಿವೆ.
Published On - 8:15 am, Tue, 4 April 23