WWDC 2023: ಐಫೋನ್​ಗೆ ಹೊಸ iOS ಘೋಷಿಸಲಿದೆ ಆ್ಯಪಲ್

WWDC 2023: ಐಫೋನ್​ಗೆ ಹೊಸ iOS ಘೋಷಿಸಲಿದೆ ಆ್ಯಪಲ್

ಕಿರಣ್​ ಐಜಿ
|

Updated on: Apr 04, 2023 | 10:00 AM

ಸಮ್ಮೇಳನದಲ್ಲಿ ಹೊಸ ಓಎಸ್ ಸರಣಿಯನ್ನು ಘೋಷಿಸುವ ಆ್ಯಪಲ್, ಆ್ಯಪ್ ಡೆವಲಪರ್​ಗಳಿಗೆ ಓಎಸ್ ಬೀಟಾ ಡೆವಲಪರ್​ ಆವೃತ್ತಿಯನ್ನು ಒದಗಿಸುತ್ತದೆ. ಈ ಬಾರಿ ಆ್ಯಪಲ್, ಜೂನ್ 5ರಿಂದ ಜೂನ್ 9ರವರೆಗೆ WWDC 2023 ಸಮಾವೇಶ ಆಯೋಜಿಸಿದೆ.

ಆ್ಯಪಲ್, ಪ್ರತಿ ವರ್ಷ ಐಫೋನ್, ಐಪ್ಯಾಡ್ ಮತ್ತು ಮ್ಯಾಕ್​ಗೆ ಹೊಸ ಅಪ್​ಡೇಟೆಡ್ ಓಎಸ್​ಗಳನ್ನು ಬಿಡುಗಡೆ ಮಾಡುತ್ತದೆ. ಅದಕ್ಕಾಗಿ ಪ್ರತಿ ವರ್ಷ ಆ್ಯಪಲ್, ಜಾಗತಿಕ ಆ್ಯಪ್ ಡೆವಲಪರ್​ಗಳ ಸಮ್ಮೇಳನ ನಡೆಸುತ್ತದೆ. ಈ ಸಮ್ಮೇಳನದಲ್ಲಿ ಹೊಸ ಓಎಸ್ ಸರಣಿಯನ್ನು ಘೋಷಿಸುವ ಆ್ಯಪಲ್, ಆ್ಯಪ್ ಡೆವಲಪರ್​ಗಳಿಗೆ ಓಎಸ್ ಬೀಟಾ ಡೆವಲಪರ್​ ಆವೃತ್ತಿಯನ್ನು ಒದಗಿಸುತ್ತದೆ. ನಂತರದಲ್ಲಿ ಡೆವಲಪರ್​ಗಳು ಬೀಟಾ ಆವೃತ್ತಿಯನ್ನು ಪರಿಶೀಲಿಸಿ, ಅದರಲ್ಲಿನ ದೋಷಗಳನ್ನು ಸರಿಪಡಿಸುತ್ತಾರೆ. ನಂತರವಷ್ಟೇ ಸಾಮಾನ್ಯ ಬಳಕೆದಾರರಿಗೆ ನೂತನ ಓಎಸ್ ಅಪ್​ಡೇಟ್ ಲಭ್ಯವಾಗುತ್ತದೆ. ಈ ಬಾರಿ ಆ್ಯಪಲ್, ಜೂನ್ 5ರಿಂದ ಜೂನ್ 9ರವರೆಗೆ WWDC 2023 ಸಮಾವೇಶ ಆಯೋಜಿಸಿದೆ. ಹೊಸದಾಗಿ ಆ್ಯಪಲ್ ಐಓಎಸ್ 17 ಘೋಷಿಸಲಿದೆ. ಆ್ಯಪಲ್ ಈವೆಂಟ್​ನಲ್ಲಿ ಹೊಸ ಐಓಎಸ್ ಸರಣಿ ಘೋಷಣೆಯಾದರೂ, ಅವುಗಳ ಪರೀಕ್ಷಾರ್ಥ ಬಳಕೆ ಮುಗಿದ ಬಳಿಕ, ಸೆಪ್ಟೆಂಬರ್​ನಲ್ಲಿ ಸಾಮಾನ್ಯ ಬಳಕೆದಾರರಿಗೆ ಲಭ್ಯವಾಗಲಿದೆ. ನಂತರ, ಅವುಗಳನ್ನು ಡೌನ್​ಲೋಡ್ ಮಾಡಿಕೊಂಡು ಇನ್​ಸ್ಟಾಲ್ ಮಾಡಬೇಕಿದೆ.