IND vs AUS: ಟಿಮ್ ಡೇವಿಡ್ ತೋಳ್ಬಲಕ್ಕೆ 129 ಮೀ. ದೂರ ಬಿದ್ದ ಚೆಂಡು..! ವಿಡಿಯೋ

Updated on: Nov 02, 2025 | 5:03 PM

Tim David 129m six: ಆಸ್ಟ್ರೇಲಿಯಾದ ಟಿಮ್ ಡೇವಿಡ್ ಹೋಬಾರ್ಟ್‌ನಲ್ಲಿ ಭಾರತದ ವಿರುದ್ಧ ನಡೆದ ಟಿ20 ಪಂದ್ಯದಲ್ಲಿ 129 ಮೀಟರ್ ಉದ್ದದ ಸಿಕ್ಸರ್ ಬಾರಿಸಿ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅಕ್ಷರ್ ಪಟೇಲ್ ಓವರ್‌ನಲ್ಲಿ ಮೂಡಿಬಂದ ಈ ಐತಿಹಾಸಿಕ ಸಿಕ್ಸರ್, ಕ್ರಿಕೆಟ್ ಇತಿಹಾಸದಲ್ಲೇ ಅತಿ ಉದ್ದದ ಸಿಕ್ಸರ್ ಆಗಿದೆ. ಇದಲ್ಲದೆ, ಡೇವಿಡ್ ಕೇವಲ 23 ಎಸೆತಗಳಲ್ಲಿ ಅರ್ಧಶತಕ ಗಳಿಸಿ ಅಭಿಮಾನಿಗಳನ್ನು ರಂಜಿಸಿದರು.

ಹೋಬಾರ್ಟ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಮೂರನೇ ಟಿ20 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಪರ ಸ್ಟಾರ್ ಆಲ್‌ರೌಂಡರ್ ಟಿಮ್ ಡೇವಿಡ್ ತಮ್ಮ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ. ಡೇವಿಡ್ ಕೇವಲ 23 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಇದರಲ್ಲಿ ಇನ್ನೊಂದು ಅದ್ಭುತವಾದ ವಿಷಯವೆಂದರೆ ಟಿಮ್ ಡೇವಿಡ್ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇದುವರೆಗೆ ಯಾರು ಬಾರಿಸಲಾಗದ ಅತಿ ಉದ್ದದ ಸಿಕ್ಸರ್ ಅನ್ನು ಬಾರಿಸಿ ವಿಶ್ವ ದಾಖಲೆ ಸೃಷ್ಟಿಸಿದ್ದಾರೆ.

ಭಾರತದ ಸ್ಪಿನ್ನರ್ ಅಕ್ಷರ್ ಪಟೇಲ್ ಅವರ ಓವರ್​ನಲ್ಲಿ ಟಿಮ್ ಡೇವಿಡ್ ಬರೋಬ್ಬರಿ 129 ಮೀಟರ್‌ ಉದ್ದದ ಸಿಕ್ಸ್ ಬಾರಿಸಿದರು, ಇದು ಅಂತರರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಅತಿ ಉದ್ದದ ಸಿಕ್ಸ್ ಆಗಿದೆ. ಮೆಲ್ಬೋರ್ನ್ ಟಿ20ಯಲ್ಲಿ, ಆಸ್ಟ್ರೇಲಿಯಾದ ನಾಯಕ ಮಿಚೆಲ್ ಮಾರ್ಷ್ 124 ಮೀಟರ್‌ಗಳ ಸಿಕ್ಸ್ ಬಾರಿಸಿ ಅತಿ ಉದ್ದದ ಸಿಕ್ಸರ್ ದಾಖಲೆಯನ್ನು ನಿರ್ಮಿಸಿದ್ದರು. ಇದೀಗ ಟಿಮ್ ಡೇವಿಡ್ ಅವರನ್ನೂ ಮೀರಿಸಿದ್ದಾರೆ.

ಆಸ್ಟ್ರೇಲಿಯಾದ ಇನ್ನಿಂಗ್ಸ್‌ನ ಏಳನೇ ಓವರ್‌ನಲ್ಲಿ, ಟಿಮ್ ಡೇವಿಡ್ ಅಕ್ಷರ್ ಪಟೇಲ್ ಅವರನ್ನು ಎದುರಿಸಿದರು. ಅಕ್ಷರ್ ಪಟೇಲ್ ಬೌಲಿಂಗ್ ಮಾಡಿದ ಫುಲ್​ ಲೆಂಗ್ತ್ ಎಸೆತವನ್ನು ಡೇವಿಡ್ ಬೌಲರ್ ತಲೆಯ ಮೇಲೆ ಹೊಡೆದರು. ಚೆಂಡು ಹೋಬಾರ್ಟ್ ಕ್ರೀಡಾಂಗಣದ ಮೇಲ್ಛಾವಣಿಗೆ ಬಡಿದು, ಕೆಳಗೆ ಬಿತ್ತು. ಬರೋಬ್ಬರಿ ಆ ಸಿಕ್ಸರ್ 129 ಮೀಟರ್ ದೂರ ಹೋಗಿ ಬಿದ್ದಿತು. ಅಕ್ಷರ್ ಪಟೇಲ್ ಅವರ ಓವರ್‌ನಲ್ಲಿ ಡೇವಿಡ್ ಎರಡು ಸಿಕ್ಸರ್‌ಗಳನ್ನು ಬಾರಿಸಿದರು. ಮುಂದಿನ ಓವರ್‌ನಲ್ಲಿ ಅಬ್ಬರಿಸಿದ ಡೇವಿಡ್, ಶಿವಂ ದುಬೆ ಅವರ ಓವರ್‌ನಲ್ಲಿ ಮೂರು ಬೌಂಡರಿಗಳನ್ನು ಬಾರಿಸಿ ಕೇವಲ 23 ಎಸೆತಗಳಲ್ಲಿ ಅರ್ಧಶತಕ ಪೂರೈದರು. ಡೇವಿಡ್ ಕೇವಲ 38 ಎಸೆತಗಳಲ್ಲಿ 74 ರನ್ ಬಾರಿಸಿ ದುಬೆ ಬೌಲಿಂಗ್​ನಲ್ಲಿ ವಿಕೆಟ್ ಒಪ್ಪಿಸಿದರು.

ಈ ಇನ್ನಿಂಗ್ಸ್‌ನಲ್ಲಿ ವಿಶೇಷ ದಾಖಲೆಯನ್ನೂ ನಿರ್ಮಿಸಿದ ಟಿಮ್ ಡೇವಿಡ್, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಸಿಕ್ಸರ್‌ಗಳನ್ನು ಪೂರೈಸಿದರು. ಹಾಗೆಯೇ ಕೇವಲ 931 ಎಸೆತಗಳಲ್ಲಿ 100 ಸಿಕ್ಸರ್‌ಗಳನ್ನು ಅರಿ ಕಡಿಮೆ ಎಸೆತಗಳಲ್ಲಿ ಪೂರೈಸಿದ ಆಸ್ಟ್ರೇಲಿಯಾ ಮೊದಲ ಬ್ಯಾಟ್ಸ್​ಮನ್ ಎನಿಸಿಕೊಂಡರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ