12 ಭರ್ಜರಿ ಸಿಕ್ಸ್, 3 ಫೋರ್: ಟಿಮ್ ಡೇವಿಡ್ ತೂಫಾನ್, ಶತಕ ಜಸ್ಟ್ ಮಿಸ್

Updated on: Dec 01, 2025 | 8:24 AM

Abu Dhabi T10 League 2025: ಕ್ರೀಸ್ ಗೆ ಆಗಮಿಸುತ್ತಿದ್ದಂತೆ ಸಿಡಿಲಬ್ಬರ ಶುರು ಮಾಡಿದ ಟಿಮ್ ಡೇವಿಡ್ ಮೈದಾನದ ಮೂಲೆ ಮೂಲೆಗೆ ಸಿಕ್ಸ್ ಗಳನ್ನು ಸಿಡಿಸಿದರು. ಪರಿಣಾಮ ಟಿಮ್ ಡೇವಿಡ್ ಬ್ಯಾಟ್ ನಿಂದ 12 ಸಿಕ್ಸರ್ ಹಾಗೂ 3 ಫೋರ್ ಮೂಡಿಬಂದವು. ಈ ಸಿಡಿಲಬ್ಬರದೊಂದಿಗೆ ಕೇವಲ 30 ಎಸೆತಗಳಲ್ಲಿ ಅಜೇಯ 98 ರನ್ ಸಿಡಿಸಿ ಯುಎಇ ಬುಲ್ಸ್ ತಂಡದ ಸ್ಕೋರ್ ಅನ್ನು 10 ಓವರ್‌ಗಳಲ್ಲಿ 150 ಕ್ಕೆ ತಂದು ನಿಲ್ಲಿಸಿದರು.

ಆಸ್ಟ್ರೇಲಿಯಾ ದಾಂಡಿಗ ಅಕ್ಷರಶಃ ಅಬ್ಬರಿಸಿದ್ದಾರೆ. ಅದು ಕೂಡ ಅಬುಧಾಬಿ ಟಿ10 ಲೀಗ್‌ನ ಫೈನಲ್ ಪಂದ್ಯದಲ್ಲಿ. ಶೇಖ್ ಝಾಯೆದ್ ಸ್ಟೇಡಿಯಂನಲ್ಲಿ ನಡೆದ ಅಬುಧಾಬಿ ಟಿ10 ಲೀಗ್‌ನ ಫೈನಲ್ ಪಂದ್ಯದಲ್ಲಿ ಯುಎಇ ಬುಲ್ಸ್ ಹಾಗೂ ಅಸ್ಪಿನ್ ಸ್ಟಾಲಿನ್ಸ್ ತಂಡಗಳು ಮುಖಾಮುಖಿಯಾಗಿದ್ದವು.

ಈ ಪಂದ್ಯದಲ್ಲಿ ಟಾಸ್ ಗೆದ್ದ ಅಸ್ಪಿನ್ ಸ್ಟಾಲಿನ್ಸ್ ತಂಡವು ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಯುಎಇ ಬುಲ್ಸ್ ತಂಡ ಉತ್ತಮ ಆರಂಭ ಪಡೆದಿರಲಿಲ್ಲ. ಆದರೆ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಟಿಮ್ ಡೇವಿಡ್ ಇಡೀ ಪಂದ್ಯದ ಚಿತ್ರಣ ಬದಲಿಸಿಬಿಟ್ಟರು.

ಕ್ರೀಸ್ ಗೆ ಆಗಮಿಸುತ್ತಿದ್ದಂತೆ ಸಿಡಿಲಬ್ಬರ ಶುರು ಮಾಡಿದ ಟಿಮ್ ಡೇವಿಡ್ ಮೈದಾನದ ಮೂಲೆ ಮೂಲೆಗೆ ಸಿಕ್ಸ್ ಗಳನ್ನು ಸಿಡಿಸಿದರು. ಪರಿಣಾಮ ಟಿಮ್ ಡೇವಿಡ್ ಬ್ಯಾಟ್ ನಿಂದ 12 ಸಿಕ್ಸರ್ ಹಾಗೂ 3 ಫೋರ್ ಮೂಡಿಬಂದವು. ಈ ಸಿಡಿಲಬ್ಬರದೊಂದಿಗೆ ಕೇವಲ 30 ಎಸೆತಗಳಲ್ಲಿ ಅಜೇಯ 98 ರನ್ ಸಿಡಿಸಿ ಯುಎಇ ಬುಲ್ಸ್ ತಂಡದ ಸ್ಕೋರ್ ಅನ್ನು 10 ಓವರ್‌ಗಳಲ್ಲಿ 150 ಕ್ಕೆ ತಂದು ನಿಲ್ಲಿಸಿದರು.

151 ರನ್ ಗಳ ಕಠಿಣ ಗುರಿ ಬೆನ್ನತ್ತಿದ ಅಸ್ಪಿನ್ ಸ್ಟಾಲಿನ್ಸ್ ತಂಡವು 10 ಓವರ್‌ಗಳಲ್ಲಿ ಕೇವಲ 70 ರನ್ ಗಳಿಸಲಷ್ಟೇ ಶಕ್ತರಾದರು. ಈ ಮೂಲಕ 80 ರನ್ ಗಳ ಭರ್ಜರಿ ಜಯ ಸಾಧಿಸಿ ಯುಎಇ ಬುಲ್ಸ್ ತಂಡವು ಅಬುಧಾಬಿ ಟಿ10 ಲೀಗ್‌ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.