ಮನೆಯ ಮೇಲೆ ಹನುಮಧ್ವಜ ಯಾಕೆ ಹಾಕಬೇಕು ಗೊತ್ತೇ? ಇಲ್ಲಿದೆ ಅಧ್ಯಾತ್ಮಿಕ ಕಾರಣ
ಹನುಮಧ್ವಜವು ಮನೆಯ ಮೇಲೆ ಇದ್ದರೆ ಸಂಪೂರ್ಣ ರಕ್ಷಣೆ ಮತ್ತು ಶುಭವನ್ನು ತರುತ್ತದೆ. ಕುರುಕ್ಷೇತ್ರ ಯುದ್ಧದಲ್ಲಿ ಅರ್ಜುನನ ರಥಕ್ಕೆ ಹನುಮನ ಬಾವುಟವಿದ್ದ ಕಾರಣ ಯಾವುದೇ ಆಯುಧಗಳಿಂದ ಹಾನಿಯಾಗಲಿಲ್ಲ. ಆಧುನಿಕ ಯುಗದಲ್ಲಿಯೂ ಹನುಮಧ್ವಜವು ಪೀಡೆ, ಮಾಟ, ಮಂತ್ರ, ಅನಾರೋಗ್ಯ, ಮಾನಸಿಕ ಚಿತ್ರಹಿಂಸೆಗಳಿಂದ ಮನೆಯನ್ನು ರಕ್ಷಿಸಿ ಸಕಾರಾತ್ಮಕ ಶಕ್ತಿಯನ್ನು ನೀಡುತ್ತದೆ.
ನಂಬಿಕೆಯು ಮನುಷ್ಯನ ಜೀವನದಲ್ಲಿ ಧನಾತ್ಮಕ ಅದೃಷ್ಟ ಮತ್ತು ಭಗವಂತನ ಕೃಪೆಯನ್ನು ತರುತ್ತದೆ. ನಮ್ಮ ಮನೆ, ವಾಹನಗಳು, ಆಚಾರ-ವಿಚಾರಗಳು, ಕುಟುಂಬ ಮತ್ತು ವೃತ್ತಿ ಹೀಗೆ ಎಲ್ಲದರಲ್ಲೂ ನಂಬಿಕೆ ಮುಖ್ಯವಾಗಿದೆ. ಮನೆಯ ಮೇಲೆ ಹನುಮಧ್ವಜವನ್ನು ಇಡುವುದು ಒಂದು ಪ್ರಮುಖ ನಂಬಿಕೆಯಾಗಿದೆ. ಇದು ಕಟ್ಟಿದ ಮನೆ ಇರಲಿ, ಬಾಡಿಗೆ ಮನೆ ಇರಲಿ, ಅಥವಾ ಅಪಾರ್ಟ್‌ಮೆಂಟ್ ಆಗಿರಲಿ, ಹನುಮಧ್ವಜವು ಆ ಮನೆಗೆ ಸರ್ವಶ್ರೇಷ್ಠ ಶುಭವನ್ನು ತರುತ್ತದೆ. ತ್ರಿಕಾಲದಲ್ಲಿಯೂ, ವಿಶೇಷವಾಗಿ ಬ್ರಾಹ್ಮೀ ಕಾಲ ಮತ್ತು ದೈವ ಕಾಲದಲ್ಲಿ, ದೇವರ ಲಹರಿಗಳು ಭೂಮಿಯ ಮೇಲೆ ಸಂಚರಿಸುತ್ತವೆ. ಈ ಸಮಯದಲ್ಲಿ ಮನೆಯಲ್ಲಿ ಹನುಮಧ್ವಜ ಇದ್ದರೆ, ಅದು ಮನೆಗೆ ಪರಿಪೂರ್ಣ ರಕ್ಷಣೆಯನ್ನು ಒದಗಿಸುತ್ತದೆ. ಕುರುಕ್ಷೇತ್ರ ಯುದ್ಧದಲ್ಲಿ ಅರ್ಜುನನ ರಥಕ್ಕೆ ಹನುಮನ ಬಾವುಟವಿದ್ದ ಕಾರಣ ಯುದ್ಧದ ಅಂತ್ಯದವರೆಗೂ ರಥವು ಯಾವುದೇ ಹಾನಿಯಾಗದೆ ಉಳಿಯಿತು ಎಂಬುದನ್ನು ಒಂದು ಉದಾಹರಣೆಯಾಗಿ ಹೇಳಬಹುದು. ಧರ್ಮನಿರತರಿಗೆ ಹನುಮನ ರಕ್ಷಣೆ ಸದಾ ಇರುತ್ತದೆ ಎಂಬುದನ್ನು ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ವಿವರಿಸಿದ್ದಾರೆ.
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್

