ಗಿಲ್ಲಿ-ರಘು ಗೆಳೆತನದಲ್ಲಿ ಬಿರುಕು; ಜಗಳ ತಪ್ಪಿಸಲು ಇಡೀ ಮನೆ ಬರಬೇಕಾಯ್ತು
ಬಿಗ್ ಬಾಸ್ ಮನೆಯಲ್ಲಿ ಜಗಳ ಕಾಮನ್. ವೈರಿಗಳ ಮಧ್ಯೆ ಕಿತ್ತಾಟ ನಡೆದರೆ ಅದು ಒಂದು ಲೆಕ್ಕ. ಆದರೆ, ಆಪ್ತರು ಎನಿಸಿಕೊಂಡವರ ಮಧ್ಯೆಯೇ ಕಿರಿಕ್ ಆಗಿಬಿಟ್ಟರೆ? ಈ ರೀತಿಯ ಘಟನೆ ನಡೆದಿದೆ. ರಘು ಹಾಗೂ ಗಿಲ್ಲಿ ಮಧ್ಯೆ ಕಿರಿಕ್ ಆಗಿದೆ. ಇದಕ್ಕೆ ಇಡೀ ಮನೆ ಸಾಕ್ಷಿ ಆಗಿದೆ. ಇವರನ್ನು ತಪ್ಪಿಸಲು ಎಲ್ಲರೂ ಬರಬೇಕಾದ ಪರಿಸ್ಥಿತಿ ಬಂತು.
ರಘು ಹಾಗೂ ಗಿಲ್ಲಿ ಮಧ್ಯೆ ಒಳ್ಳೆಯ ಬಾಂಡಿಂಗ್ ಬೆಳೆದಿತ್ತು. ಗಿಲ್ಲಿ ಮಾಡೋ ಕೀಟಲೆಗಳನ್ನು ರಘು ಸಹಿಸಿಕೊಂಡಿದ್ದರು. ಆದರೆ, ಈಗ ಎಲ್ಲವೂ ಬದಲಾಗಿದೆ. ಕಳೆದ ವಾರಾಂತ್ಯದಲ್ಲಿ ಗಿಲ್ಲಿ ಬಟ್ಟೆಯನ್ನು ರಘು ಎಸೆದಿದ್ದರು. ಈ ವಾರ ರ‍್ಯಾಂಕಿಂಗ್ ವಿಷಯದಲ್ಲಿ ಗಿಲ್ಲಿ ಹಾಗೂ ರಘು ಮಧ್ಯೆ ಕಿರಿಕ್ ಆಗಿದೆ. ಗಿಲ್ಲಿ ಮನೆಗೆಲಸ ಮಾಡೋದಿಲ್ಲ ಎಂದು ರಘು ದೂರಿದ್ದಾರೆ. ಈ ವಿಷಯ ಕಿತ್ತಾಟಕ್ಕೆ ಎಡೆಮಾಡಿಕೊಟ್ಟಿದೆ. ಈ ಜಗಳ ತಪ್ಪಿಸಲು ಇಡೀ ಮನೆ ಬರಬೇಕಾಯಿತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Dec 01, 2025 08:22 AM
Latest Videos
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್

