AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಚಾರ ನಿಯಮ ಉಲ್ಲಂಘಿಸಿದ ದಂಡಗಳ ಅರ್ಧದಷ್ಟು ಮಾತ್ರ ಪಾವತಿಸಿ ಬಾಕಿ ಚುಕ್ತಾ ಮಾಡಿಕೊಳ್ಳಲು ಅವಕಾಶ ನೀಡಿದ ಸಂಚಾರಿ ಪೊಲೀಸ್ ಇಲಾಖೆ

ಸಂಚಾರ ನಿಯಮ ಉಲ್ಲಂಘಿಸಿದ ದಂಡಗಳ ಅರ್ಧದಷ್ಟು ಮಾತ್ರ ಪಾವತಿಸಿ ಬಾಕಿ ಚುಕ್ತಾ ಮಾಡಿಕೊಳ್ಳಲು ಅವಕಾಶ ನೀಡಿದ ಸಂಚಾರಿ ಪೊಲೀಸ್ ಇಲಾಖೆ

ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ|

Updated on: Feb 03, 2023 | 5:42 PM

Share

ಆ ಮೊತ್ತವನ್ನು ಪಾವತಿಸಲು ಪೇಟಿಮ್, ಕರ್ನಾಟಕ ವನ್ ಮೊದಲಾದವು ಸೇರಿದಂತೆ ಹಲವಾರು ವಿಧಾನಗಳನ್ನು ಬಳಸಬಹುದು ಎಂದು ಪೊಲೀಸ್ ಅಧಿಕಾರಿ ಹೇಳಿದರು.

ಬೆಂಗಳೂರು:  ಸಂಚಾರ ನಿಯಮ ಪದೇಪದೆ ಉಲ್ಲಂಘಿಸಿ ಸಂಚಾರಿ ಪೊಲೀಸ್ ಇಲಾಖೆ (traffic police department) ವಿಧಿಸಿದ ದಂಡವನ್ನು ಪಾವತಿಸದೆ ಬಾಕಿ ಉಳಿಸಿಕೊಂಡವರಿಗೆ ಅದನ್ನು ಚುಕ್ತಾ ಮಾಡಿಕೊಳ್ಳಲು ಇಲಾಖೆ ಒಂದು ಸದವಕಾಶವನ್ನು ನೀಡಿದೆ. ಈ ಕುರಿತು ಇಂದು ಮಾಧ್ಯಮಗಳೊಂದಿಗೆ ಮಾತಾಡಿದ ಸಂಚಾರ ವಿಭಾಗದ ವಿಶೇಷ ಪೊಲೀಸ್ ಆಯುಕ್ತ ಎಮ್ ಎ ಸಲೀಂ (MA Saleem) ಅವರು, ಸಂಚಾರ ನಿಯಮ ಉಲ್ಲಂಘಿಸಿ (traffic rules violations) ದಂಡ ಪಾವತಿಸದೆ ಬಾಕಿ ಉಳಿಸಿಕೊಂಡವರು ಈಗ ಒಟ್ಟು ಪೆನಾಲ್ಟಿಯ ಶೇಕಡ 50 ರಷ್ಟು ಮಾತ್ರ ಕಟ್ಟಿ ಅದನ್ನು ಚುಕ್ತಾ ಮಾಡಿಕೊಳ್ಳಬಹುದು ಎಂದು ಹೇಳಿದರು. ಅದಕ್ಕನುಗುಣವಾಗಿಯೇ, ಎಲ್ಲ ವಾಹನಗಳ ಮೇಲಿದ್ದ ದಂಡಗಳ ಮೊತ್ತವನ್ನು ಸಿಸ್ಟಮ್ ಮೂಲಕ ಅಪ್ ಗ್ರೇಡ್ ಮಾಡಲಾಗಿದೆ. ವಾಹನಗಳ ಮಾಲಿಕರು ತಾವು ಕಟ್ಟಬೇಕಿರುವ ದಂಡವನ್ನು ಆನ್ಲೈನಲ್ಲಿ ಚೆಕ್ ಮಾಡಿದರೆ ಶೇಕಡ 50 ರಷ್ಟು ಕಡಿತಗೊಂಡ ಮೊತ್ತವೇ ಡಿಸ್ಪ್ಲೇಯಾಗುತ್ತದೆ. ಆ ಮೊತ್ತವನ್ನು ಪಾವತಿಸಲು ಪೇಟಿಮ್, ಕರ್ನಾಟಕ ವನ್ ಮೊದಲಾದವು ಸೇರಿದಂತೆ ಹಲವಾರು ವಿಧಾನಗಳನ್ನು ಬಳಸಬಹುದು ಎಂದು ಪೊಲೀಸ್ ಅಧಿಕಾರಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.