ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್​ವೇನಲ್ಲಿ ಕಾರ್ಯಾಚರಣೆಗಿಳಿದ ಪೊಲೀಸ್, ಕೆಲ ದ್ವಿಚಕ್ರ ವಾಹನ ಸವಾರರ ಮೇಲೆ ಭಾರೀ ದಂಡ!

|

Updated on: Aug 01, 2023 | 4:21 PM

ಪೊಲೀಸರ ಕಣ್ಣ ಮುಂದೆಯೇ ಹಲವಾರು ದ್ವಿಚಕ್ರ ವಾಹನ ಸವಾರರು ಭುರ್ರ್ ಅಂತ ಹೋಗುತ್ತಿದ್ದಾರೆ. ಅವರನ್ನು ತಡೆಯುವ ಪ್ರಯತ್ನವನ್ನೇನೂ ನಡೆಯುತ್ತಿಲ್ಲ.

ರಾಮನಗರ: ಬೆಂಗಳೂರು-ಮೈಸೂರರು ಎಕ್ಸ್ ಪ್ರೆಸ್ ವೇನಲ್ಲಿ (Bengaluru Mysuru Expressway) ಇಂದಿನಿಂದ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳು ಓಡಾಡುವಂತಿಲ್ಲ. ಹೆದ್ದಾರಿಯಲ್ಲಿ ಹೆಚ್ಚುತ್ತಿರುವ ಅಪಘಾತಗಳನ್ನು ತಡೆಗಟ್ಟಲು ರಾಷ್ಟ್ರೀಯ ಹೆದ್ದಾರಿ  ಪ್ರಾಧಿಕಾರ (NHAI) ಈ ಕ್ರಮವನ್ನು ಜಾರಿಗೊಳಿಸಿದೆ. ಆದರೆ, ಈಗಾಗಲೇ ವರದಿ ಮಾಡಿರುವಂತೆ ಬೈಕರ್ ಗಳು ಪ್ರಾಧಿಕಾರದ ಆದೇಶವನ್ನು ಗಾಳಿಗೆ ತೂರಿ ಅನಿರ್ಬಂಧಿತವಾಗಿ ಈ ರಸ್ತೆಯಲ್ಲಿ ಜೂಮ್ ಅಂತ ಓಡಾಡುತ್ತಿದ್ದಾರೆ. ಪ್ರಾಯಶಃ ಮಾಧ್ಯಮ ವರದಿಗಳ ನಂತರ ಎಚ್ಚೆತ್ತ ಟ್ರಾಫಿಕ್ ಪೊಲೀಸ್ (traffic police), ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸಹಯೋಗದೊಂದಿಗೆ ದ್ವಿಚಕ್ರ ವಾಹನಗಳನ್ನು ತಡೆದು ಭಾರಿ ಮೊತ್ತದ ದಂಡ ವಿಧಿಸಲಾರಂಭಿಸಿದರು. ರಾಮನಗರದ ಟ್ರಾಫಿಕ್ ಪೊಲೀಸರು ಬೈಕರ್ ಗಳನ್ನು ತಡೆದು ದಂಡ ವಿಧಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹದು. ಅದರೆ, ನೀವು ಗಮನಿಸುತ್ತಿರುವಂತೆ, ಪೊಲೀಸರಿಗೆ ಸಿಕ್ಕಿಬಿದ್ದವರು ಮಾತ್ರ ನತದೃಷ್ಟರು! ಯಾಕೆಂದರೆ ಪೊಲೀಸರ ಕಣ್ಣ ಮುಂದೆಯೇ ಹಲವಾರು ದ್ವಿಚಕ್ರ ವಾಹನ ಸವಾರರು ಭುರ್ರ್ ಅಂತ ಹೋಗುತ್ತಿದ್ದಾರೆ. ಅವರನ್ನು ತಡೆಯುವ ಪ್ರಯತ್ನವನ್ನೇನೂ ನಡೆಯುತ್ತಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ