ಬೆಂಗಳೂರು-ಮೈಸೂರು ದಶಪಥ ರಸ್ತೆ ಟೋಲ್ ದರ ಮತ್ತೆ ಹೆಚ್ಚಳ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆದೇಶ
ಬೆಂಗಳೂರು-ಮೈಸೂರು ದಶಪಥ ರಸ್ತೆಯ ಟೋಲ್ ದರ ಮತ್ತೆ ಹೆಚ್ಚಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆದೇಶ ಹೊರಡಿಸಿದೆ. ಜೂನ್ 1ರಿಂದಲೇ ದುಬಾರಿ ಶುಲ್ಕ ಅನ್ವಯವಾಗಿದೆ.
ರಾಮನಗರ: ಬೆಂಗಳೂರು-ಮೈಸೂರು ದಶಪಥ ರಸ್ತೆಯ (Bengaluru-Mysuru highway) ಟೋಲ್ ದರ ಮತ್ತೆ ಹೆಚ್ಚಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆದೇಶ ಹೊರಡಿಸಿದೆ. ಶೇ.22ರಷ್ಟು ಟೋಲ್ ದರವನ್ನು ಹೆದ್ದಾರಿ ಪ್ರಾಧಿಕಾರ ಏರಿಕೆ ಮಾಡಿದೆ. ಜೂನ್ 1ರಿಂದಲೇ ದುಬಾರಿ ಶುಲ್ಕ ಅನ್ವಯವಾಗಿದ್ದು, ಫಾಸ್ಟ್ ಟ್ಯಾಗ್ ಹಿನ್ನೆಲೆಯಲ್ಲಿ ಟೋಲ್ ದರ ಹೆಚ್ಚಳ ವಾಹನ ಸವಾರರ ಗಮನಕ್ಕೆ ಬಂದಿರಲಿಲ್ಲ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವಿಧಿಸಿರುವ ಟೋಲ್ ದರ ಹೀಗಿದೆ
- ಕಾರು, ವ್ಯಾನ್, ಜೀಪ್ ಏಕಮುಖ ಸಂಚಾರ ದರ 135-165ಕ್ಕೆ ಏರಿಕೆ ಮಾಡಿದ್ದು 30 ರೂಪಾಯಿ ಹೆಚ್ಚಳ
- ಲಘು ವಾಹನಗಳು, ಮಿನಿ ಬಸ್‌ಗಳ ಏಕಮುಖ ಟೋಲ್ ದರ 220-270ಕ್ಕೆ ಏರಿಕೆ (50 ರೂ. ಹೆಚ್ಚಳ)
- ಟ್ರಕ್, ಬಸ್, 2 ಆ್ಯಕ್ಸೆಲ್ ವಾಹನ ಏಕಮುಖ ಸಂಚಾರ ಟೋಲ್ ದರ ₹460-565ಕ್ಕೆ ಏರಿಕೆ (105 ಹೆಚ್ಚಳ)
- 3 ಆ್ಯಕ್ಸೆಲ್ ವಾಹನಗಳ ಏಕಮುಖ ಸಂಚಾರ ಟೋಲ್ ದರ ₹500-615ಕ್ಕೆ ಏರಿಕೆ (115 ರೂ. ಹೆಚ್ಚಳ)
- ಭಾರಿ ವಾಹನಗಳ ಏಕಮುಖ ಸಂಚಾರ ಟೋಲ್ ದರ ₹720ರಿಂದ ₹885ಕ್ಕೇರಿಕೆ (165 ರೂ.ಗೆ ಹೆಚ್ಚಳ)
- 7 ಅಥವಾ ಅದಕ್ಕಿಂತ ಹೆಚ್ಚಿನ ಆ್ಯಕ್ಸೆಲ್ ವಾಹನಗಳ ಟೋಲ್ ₹880-1,080ಕ್ಕೇರಿಕೆ (200 ಹೆಚ್ಚಳ)
ಇದನ್ನೂ ಓದಿ: Bengaluru-Mysuru Expressway: ಇಂದಿನಿಂದ ಟೋಲ್ ಸಂಗ್ರಹ ಆರಂಭ; ಇಲ್ಲಿದೆ ಟೋಲ್ ದರ ಪಟ್ಟಿ
ಈ ಹಿಂದೆ ಏಪ್ರಿಲ್ 1ರಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೋಲ್ ದರವನ್ನು ಹೆಚ್ಚಿಸಿತ್ತು. ಸಾರ್ವಜನಿಕರಿಂದ ಆಕ್ರೋಶ ಹಿನ್ನೆಲೆ ದರ ಹೆಚ್ಚಳ ಆದೇಶ ಹಿಂಪಡೆಯಲಾಗಿತ್ತು. ಆದರೆ ಇದೀಗ ಮತ್ತೆ ಟೋಲ್ ದರ ಹೆಚ್ಚಿಸಲಾಗಿದೆ.
8 ಸಾವಿರ ಕೋಟಿ ರೂ. ಸಿದ್ದವಾದಗೊಂಡ ಬೆಂಗಳೂರು-ಮೈಸೂರು ದಶಪಥ
ಸುಮಾರು 8 ಸಾವಿರ ಕೋಟಿ ರೂ. ಸಿದ್ದವಾದ ರಾಮನಗರ, ಬೆಂಗಳೂರು-ಮೈಸೂರು ನಡುವಿನ ದಶಪಥ ರಾಷ್ಟ್ರೀಯ ಹೆದ್ದಾರಿಯನ್ನು ಮಾರ್ಚ್ 11ರಂದು ಪ್ರಧಾನಿ ನರೇಂದ್ರ ಮೋದಿಯವರು ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಲೋಕಾರ್ಪಣೆ ಮಾಡಲಿದ್ದಾರೆ. ಇದು ರಾಜ್ಯದ ಮೊದಲ ಎಕ್ಸ್‌ಪ್ರೆಸ್ ಹೆದ್ದಾರಿಯಾಗಿದ್ದು, ಇದರ ಟೋಲ್ ಸಂಗ್ರಹವನ್ನು ಫೆ.27 ರಿಂದ ಪ್ರಾರಂಭಿಸಲಾಗಿದೆ.
ಇದನ್ನೂ ಓದಿ: Bangalore Mysore Expressway: ಸರ್ವೀಸ್ ರಸ್ತೆ ಗೊಂದಲಗಳಿಗೆ ತೆರೆ ಎಳೆದ ಕೇಂದ್ರ ಸಚಿವ ನಿತಿನ್ ಗಡ್ಕರಿ
ಬೆಂಗಳೂರು ಬಳಿಯ ಕಣಿಮಿಣಿಕೆ ಮತ್ತು ರಾಮನಗರ ಜಿಲ್ಲೆಯ ಶೇಷಗಿರಿ ಹಳ್ಳಿ ಬಳಿ ಟೋಲ್ ಸಂಗ್ರಹಿಸಲಾಗುತ್ತಿದೆ. ಮಂಡ್ಯ ಜಿಲ್ಲೆ ನಿಡಘಟ್ಟವರೆಗೆ 55.63 ಕಿಮೀ ಉದ್ದದ ರಸ್ತೆಗೆ ಶುಲ್ಕ ನಿಗದಿ ಮಾಡಲಾಗಿದ್ದು ಬೆಳಿಗ್ಗೆ 8 ಗಂಟೆಯಿಂದಲೇ ಟೋಲ್ ಸಂಗ್ರಹ ಆರಂಭವಾಗಿರುತ್ತದೆ.
ಟೋಲ್ ಎಷ್ಟು?
118 ಕಿಮೀ ಎಕ್ಸ್‌ಪ್ರೆಸ್‌ವೇ ಎರಡು ಟೋಲ್-ಕಲೆಕ್ಷನ್ ಪಾಯಿಂಟ್‌ಗಳನ್ನು ಹೊಂದಿದೆ. ಇದು ಆರು ವರ್ಗದ ವಾಹನಗಳಿಗೆ ಟೋಲ್ ವಿಧಿಸುತ್ತದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಪ್ರಕಾರ, 24 ಗಂಟೆಗಳ ಒಳಗೆ ಹಿಂದಿರುಗುವ ಪ್ರಯಾಣಕ್ಕೆ ಟೋಲ್ ಶುಲ್ಕ ವಿಧಿಸಲಾಗುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:36 pm, Mon, 12 June 23