Bengaluru-Mysuru Expressway: ಇಂದಿನಿಂದ ಟೋಲ್ ಸಂಗ್ರಹ ಆರಂಭ; ಇಲ್ಲಿದೆ ಟೋಲ್ ದರ ಪಟ್ಟಿ
ಬೆಂಗಳೂರು-ಮೈಸೂರು ನಡುವಿನ ದಶಪಥ ರಾಷ್ಟ್ರೀಯ ಹೆದ್ದಾರಿಯ ಟೋಲ್ ಸಂಗ್ರಹ ಇಂದಿನಿಂದ (ಫೆ.27) ಪ್ರಾರಂಭವಾಗಿದ್ದು, ಇಲ್ಲಿದೆ ದರ ವಿವರ
ಬೆಂಗಳೂರು: ಸುಮಾರು 8 ಸಾವಿರ ಕೋಟಿಯಲ್ಲಿ ಸಿದ್ದವಾದ ರಾಮನಗರ, ಬೆಂಗಳೂರು-ಮೈಸೂರು (Bengaluru-Myosore) ನಡುವಿನ ದಶಪಥ ರಾಷ್ಟ್ರೀಯ ಹೆದ್ದಾರಿಯನ್ನು (Bengaluru-Mysuru 10 line Expressway) ಮಾರ್ಚ್ 11ರಂದು ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಲೋಕಾರ್ಪಣೆ ಮಾಡಲಿದ್ದಾರೆ. ಇದು ರಾಜ್ಯದ ಮೊದಲ ಎಕ್ಸ್‌ಪ್ರೆಸ್ ಹೆದ್ದಾರಿಯಾಗಿದ್ದು, ಇದರ ಟೋಲ್ ಸಂಗ್ರಹ ಇಂದಿನಿಂದ (ಫೆ.27) ಪ್ರಾರಂಭವಾಗಿದೆ. ಬೆಂಗಳೂರು ಬಳಿಯ ಕಣಿಮಿಣಿಕೆ ಮತ್ತು ರಾಮನಗರ ಜಿಲ್ಲೆಯ ಶೇಷಗಿರಿ ಹಳ್ಳಿ ಬಳಿ ಟೋಲ್ ಸಂಗ್ರಹಿಸಲಾಗುತ್ತಿದೆ. ಮಂಡ್ಯ ಜಿಲ್ಲೆ ನಿಡಘಟ್ಟವರೆಗೆ 55.63 ಕಿಮೀ ಉದ್ದದ ರಸ್ತೆಗೆ ಶುಲ್ಕ ನಿಗದಿ ಮಾಡಲಾಗಿದ್ದು ಇಂದು ಬೆಳಿಗ್ಗೆ 8 ಗಂಟೆಯಿಂದಲೇ ಟೋಲ್ ಸಂಗ್ರಹ ಆರಂಭವಾಗಿದೆ.
ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಟೋಲ್ ದರ
ಸರ್ವಿಸ್ ರಸ್ತೆ ಹೊರತುಪಡಿಸಿ, ಉಳಿದ ಆರು ಪಥಗಳಲ್ಲಿ ಏಕಮುಖ ಸಂಚಾರಕ್ಕೆ ದರ ನಿಗದಿ ಮಾಡಲಾಗಿದೆ.
ವಾಹನ | ಏಕಮುಖ ಸಂಚಾರ | ಅದೇ ದಿನ ಮರು ಸಂಚಾರ | ಸ್ಥಳೀಯ ವಾಹನ | 1 ತಿಂಗಳ 50 ಸಂಚಾರದ ಪಾಸ್ |
ಕಾರು, ಜೀಪು, ವ್ಯಾನ್ | 135 | 205 | 70 | 4525 |
ಲಘು ವಾಣಿಜ್ಯ/ ಸರಕು ವಾಹನ/ ಮಿನಿ ಬಸ್ | 220 | 320 | 110 | 7315 |
ಬಸ್/ಟ್ರಕ್ (ಡಬಲ್ ಆಕ್ಸೆಲ್) | 460 | 690 | 230 | 15325 |
ವಾಣಿಜ್ಯ ವಾಹನ (ಮೂರು ಆಕ್ಸೆಲ್) | 500 | 750 | 250 | 16715 |
ಭಾರಿ ನಿರ್ಮಾಣ ಯಂತ್ರ, ಭೂ ಅಗೆತ ಸಾಧನಗಳು, ಬಹು ಆಕ್ಸೆಲ್ (6 ರಿಂದ 8) | 720 | 1080 | 360 | 24030 |
ಭಾರೀ ಗಾತ್ರದ ವಾಹನ (7ಕ್ಕೂ ಹೆಚ್ಚಿನ ಆಕ್ಸೆಲ್ | 880 | 1315 | 440 | 29255 |
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:15 am, Mon, 27 February 23