ನಮಗೆ ಪ್ರಜಾಪ್ರಭುತ್ವದ ಬಗ್ಗೆ ಉಪನ್ಯಾಸ ನೀಡಬೇಡಿ: ಎಂಕೆ ಸ್ಟಾಲಿನ್​​​ಗೆ ಬಿಜೆಪಿ ನಾಯಕ ಅಣ್ಣಾಮಲೈ ತಿರುಗೇಟು

ರಾಜ್ಯದಲ್ಲಿ ವಂಶಾಡಳಿತದ ರಾಜಕಾರಣದ ಬಗ್ಗೆ ವಾಗ್ದಾಳಿ ನಡೆಸಿದ ಅಣ್ಣಾಮಲೈ, 'ರಾಜವಂಶ' ಎಂಬ ಪದ ಮತ್ತು ನಿಮ್ಮ ಉಪನಾಮ 'ಕರುಣಾನಿಧಿ'ಯಿಂದಾಗಿ ನೀವು ಈ ಸ್ಥಾನದಲ್ಲಿದ್ದೀರಿ. ದಯವಿಟ್ಟು ನಮಗೆ ಪ್ರಜಾಪ್ರಭುತ್ವದ ಬಗ್ಗೆ ಉಪನ್ಯಾಸ ನೀಡಬೇಡಿ ಎಂದು ಹೇಳಿದ್ದಾರೆ.

ನಮಗೆ ಪ್ರಜಾಪ್ರಭುತ್ವದ ಬಗ್ಗೆ ಉಪನ್ಯಾಸ ನೀಡಬೇಡಿ: ಎಂಕೆ ಸ್ಟಾಲಿನ್​​​ಗೆ ಬಿಜೆಪಿ ನಾಯಕ ಅಣ್ಣಾಮಲೈ ತಿರುಗೇಟು
ಅಣ್ಣಾಮಲೈ
Follow us
ರಶ್ಮಿ ಕಲ್ಲಕಟ್ಟ
|

Updated on: Jun 12, 2023 | 8:59 PM

ಕಳೆದ ಒಂಬತ್ತು ವರ್ಷಗಳಲ್ಲಿ ತಮಿಳುನಾಡಿನಲ್ಲಿ(Tamil nadu) ಕೇಂದ್ರದ ಸಾಧನೆಗಳನ್ನು ಪಟ್ಟಿ ಮಾಡುವಂತೆ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ (MK Stalin) ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರಿಗ ಸವಾಲೆಸಿದಿದ್ದು, ಈ ಬಗ್ಗೆ ರಾಜ್ಯ ಬಿಜೆಪಿ ಮುಖ್ಯಸ್ಥ ಕೆ ಅಣ್ಣಾಮಲೈ (K Annamalai) ಸೋಮವಾರ ಸ್ಟಾಲಿನ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸುದೀರ್ಘ ಟ್ವೀಟ್ ಮಾಡಿದ ಅಣ್ಣಾಮಲೈ ನೀವು ಈ ಸ್ಥಾನದಲ್ಲಿರಲು ಕಾರಣ ವಂಶಾಡಳಿತ ರಾಜಕಾರಣ. ದಯವಿಟ್ಟು ನಮಗೆ ಪ್ರಜಾಪ್ರಭುತ್ವದ ಬಗ್ಗೆ ಉಪನ್ಯಾಸ ನೀಡಬೇಡಿ ಎಂದಿದ್ದಾರೆ.

ಅಮಿತ್ ಶಾ ಚೆನ್ನೈ ಭೇಟಿಗೆ ಒಂದು ದಿನ ಮೊದಲು ಎಂಕೆ ಸ್ಟಾಲಿನ್ ಕೇಂದ್ರ ಸರ್ಕಾರವನ್ನು ಟೀಕಿಸಿದ್ದರು. ಕಳೆದ ಎರಡು ದಿನಗಳಿಂದ ಕೇಂದ್ರ ಗೃಹ ಸಚಿವರು ಚೆನ್ನೈಗೆ ಬರುತ್ತಿದ್ದಾರೆ ಎಂದು ಪತ್ರಿಕೆಗಳಲ್ಲಿ ಓದುತ್ತಿದ್ದೆ. ಇದೆಲ್ಲವೂ 2024ರ ಚುನಾವಣೆಗೆ ಅವರ ತಯಾರಿಯ ಭಾಗವಾಗಿದೆ. ಆದಾಗ್ಯೂ, ಕಳೆದ ಒಂಬತ್ತು ವರ್ಷಗಳಲ್ಲಿ ತಮಿಳುನಾಡಿಗೆ ಅನುಕೂಲವಾಗುವಂತೆ ಕೇಂದ್ರವು ಮಾಡಿರುವ ಕೆಲಸಗಳ ಪಟ್ಟಿಯನ್ನು ಅವರು ನನಗೆ ನೀಡಬಹುದೇ ಎಂದು ನಾನು ಕೇಳಲು ಬಯಸುತ್ತೇನೆ ಎಂದಿದ್ದರು ಅವರು.

ತಮಿಳುನಾಡಿನಲ್ಲಿ ಬಿಜೆಪಿ ಹಿಂದಿ ಮತ್ತು ಸಂಸ್ಕೃತವನ್ನು ಹೇರುತ್ತಿದೆ, ತಮಿಳು ಭಾಷೆಯನ್ನು ನಿರ್ಲಕ್ಷಿಸಿದೆ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯನ್ನು (NEET) ಜಾರಿಗೆ ತಂದಿದೆ ಎಂದು ಆರೋಪಿಸಿದ ಅವರು ಇದು ವಿದ್ಯಾರ್ಥಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ಅವರು ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಕೆ ಅಣ್ಣಾಮಲೈ, ನಿಮ್ಮ ಪಕ್ಷವು ತಮಿಳು ಭಾಷೆ ಮತ್ತು ಸಂಸ್ಕೃತಿ ಎಂದಿಗೂ ತಮಿಳುನಾಡಿನ  ಗಡಿಯನ್ನು ದಾಟದಂತೆ ನೋಡಿಕೊಂಡಿದೆ. ಇದು ವಿಶ್ವದ ಅತ್ಯಂತ ಹಳೆಯ ಭಾಷೆಯಾದ ನಮ್ಮ ತಮಿಳಿಗೆ ಅತ್ಯಂತ ದೊಡ್ಡ ಅಪಚಾರ ಎಂದು ನಾವು ನಂಬುತ್ತೇವೆ ಎಂದಿದ್ದಾರೆ.

ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು  ಇದನ್ನು ಇಡೀ ಜಗತ್ತಿನಾದ್ಯಂತ ಕೊಂಡೊಯ್ದಿದ್ದಾರೆ. ಕೊನೆಗೂ ನಮ್ಮ ಭಾಷೆಯು ನಿಜವಾಗಿಯೂ ಅರ್ಹವಾದ ಗಮನ ಮತ್ತು ಶ್ರೀಮಂತಿಕೆಯನ್ನು ಪಡೆಯುತ್ತಿದೆ. ಯಾರಾದರೂ ‘ತಮಿಳು’ ಬಗ್ಗೆ ಹೇಳುವುದಾದರೆ, ‘ವಿದೇಶಿ ಹೆಸರು’ ಇಟ್ಟುಕೊಂಡು ತಮಿಳಿನ ಬಗ್ಗೆ ಮಾತನಾಡುವ ಕೊನೆಯ ವ್ಯಕ್ತಿ ನೀವೇ ಆಗಿರುತ್ತೀರಿ.

ಇದನ್ನೂ ಓದಿ: ನಿಮಗೆ ಮೋದಿ ಮೇಲೆ ಯಾಕಿಷ್ಟು ಕೋಪ?: ಅಮಿತ್ ಶಾ ಹೇಳಿಕೆಗೆ ಸ್ಟಾಲಿನ್ ಪ್ರತಿಕ್ರಿಯೆ

ರಾಜ್ಯದಲ್ಲಿ ವಂಶಾಡಳಿತದ ರಾಜಕಾರಣದ ಬಗ್ಗೆ ವಾಗ್ದಾಳಿ ನಡೆಸಿದ ಅಣ್ಣಾಮಲೈ, ‘ರಾಜವಂಶ’ ಎಂಬ ಪದ ಮತ್ತು ನಿಮ್ಮ ಉಪನಾಮ ‘ಕರುಣಾನಿಧಿ’ಯಿಂದಾಗಿ ನೀವು ಈ ಸ್ಥಾನದಲ್ಲಿದ್ದೀರಿ. ದಯವಿಟ್ಟು ನಮಗೆ ಪ್ರಜಾಪ್ರಭುತ್ವದ ಬಗ್ಗೆ ಉಪನ್ಯಾಸ ನೀಡಬೇಡಿ. ನಿಮ್ಮ ಅರಿವಾಲಯಂ ಪಾರ್ಟಿಯಲ್ಲಿರಬೇಕಾದರೆ ನಿಮ್ಮ ಗೋಪಾಲಪುರಂನ ಮನೆಯಲ್ಲಿ ಹುಟ್ಟಬೇಕು ಎಂಬುದು ಮೂಲಭೂತ ಮಾನದಂಡವಾಗಿದೆ.ಅದಕ್ಕಾಗಿಯೇ ಗೌರವಾನ್ವಿತ ಗೃಹ ಸಚಿವರು ಅವರು ನಿಮ್ಮ ಕುಟುಂಬವನ್ನು 3G (3 ತಲೆಮಾರಿನ ರಾಜವಂಶ) ಮತ್ತು ನಿಮ್ಮ ಪಾಲುದಾರ ಕಾಂಗ್ರೆಸ್ನ್ನು 4G (4 ತಲೆಮಾರಿನ ರಾಜವಂಶ) ಎಂದು ಹೇಳಿರುವುದು ಎಂಬುದಾಗಿ ಅಣ್ಣಾಮಲೈ ಟ್ವೀಟ್ ಮಾಡಿದ್ದಾರೆ.

ಸ್ಟಾಲಿನ್ ವಿರುದ್ಧ ಅಮಿತ್ ಶಾ ವಾಗ್ದಾಳಿ

ಭಾನುವಾರ ವೆಲ್ಲೂರಿನಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅಮಿತ್ ಶಾ, ಎಂಕೆ ಸ್ಟಾಲಿನ್ ಅವರೇ, ಒಂಬತ್ತು ವರ್ಷಗಳಲ್ಲಿ ನಾವು ಮಾಡಿರುವ ಕೆಲಸಗಳ ಪಟ್ಟಿಯನ್ನು ನಿಮಗೆ ನೀಡಲು ನಾನು ಇಲ್ಲಿಗೆ ಬಂದಿದ್ದೇನೆ. ದಯವಿಟ್ಟು ನಿಮ್ಮ ಕಿವಿಗಳನ್ನು ತೆರೆದು ಅದನ್ನು ಆಲಿಸಿ. ಧೈರ್ಯವಿದ್ದರೆ ನಾಳೆ ಇದಕ್ಕೆ ಪ್ರತಿಕ್ರಿಯಿಸಿ ಎಂದಿದ್ದರು,

2004 ಮತ್ತು 2014 ರ ನಡುವೆ, ಸ್ಟಾಲಿನ್ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಭಾಗವಾಗಿದ್ದಾಗ, ತಮಿಳುನಾಡಿಗೆ 95,000 ಕೋಟಿ ರೂಪಾಯಿಗಳ ನಿಧಿ ಹಂಚಿಕೆಯಾಗಿದ್ದು, ಕಳೆದ ಒಂಬತ್ತು ವರ್ಷಗಳಲ್ಲಿ ಪಿಎಂ ಮೋದಿ ಸರ್ಕಾರದ ಅಡಿಯಲ್ಲಿ ಇದು 2,47,000 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ.

ಯುಪಿಎ ಅವಧಿಯಲ್ಲಿ ರಾಜ್ಯಕ್ಕೆ ನೀಡಲಾಗಿದ್ದ ನೆರವಿನ ಅನುದಾನ 58,000 ಕೋಟಿ ರೂ.ಗಳಾಗಿದ್ದು, ನಾಲ್ಕು ಪಟ್ಟು ಏರಿಕೆಯಾಗಿ 2,31,000 ಕೋಟಿ ರೂ.ಗೆ ತಲುಪಿದೆ. ನಿನ್ನೆ, ಮಧುರೈ ಏಮ್ಸ್ ಅನ್ನು ಇನ್ನೂ ಏಕೆ ನಿರ್ಮಿಸಿಲ್ಲ ಎಂದು ಸ್ಟಾಲಿನ್ ಕೇಳುವುದನ್ನು ನಾನು ಕೇಳಿದೆ. 18 ವರ್ಷಗಳ ಕಾಲ ಡಿಎಂಕೆ ಯುಪಿಎ ಭಾಗವಾಗಿತ್ತು. ಹೀಗಿರುವಾಗ ತಮಿಳುನಾಡಿನಲ್ಲಿ ಏಮ್ಸ್ ನಿರ್ಮಿಸಲು ಏಕೆ ಸಾಧ್ಯವಾಗಲಿಲ್ಲ ಎಂದು ಅವರು ಉತ್ತರಿಸಬೇಕು ಎಂದಿದ್ದಾರೆ ಅಮಿತ್ ಶಾ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ