AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mumbai: ಮುಂಬೈ ಜುಹು ಬಳಿ ಸಮುದ್ರದಲ್ಲಿ ಮುಳುಗಿದ 4 ಬಾಲಕರು; ಮುಂದುವರಿದ ಹುಡುಕಾಟ

ಮುಂಬೈಯ ಜುಹುವಿನ ಸಮುದ್ರದಲ್ಲಿ ನಾಲ್ವರು ಬಾಲಕರು ಮುಳುಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದು ಇವರಿಗಾಗಿ ತೀವ್ರ ಹುಡುಕಾಟ ಮುಂದುವರಿದಿದೆ.

Mumbai: ಮುಂಬೈ ಜುಹು ಬಳಿ ಸಮುದ್ರದಲ್ಲಿ ಮುಳುಗಿದ 4 ಬಾಲಕರು; ಮುಂದುವರಿದ ಹುಡುಕಾಟ
ಜುಹು ಬೀಚ್
ರಶ್ಮಿ ಕಲ್ಲಕಟ್ಟ
|

Updated on:Jun 12, 2023 | 8:07 PM

Share

ಬಿಪೋರ್​​ಜಾಯ್  ಚಂಡಮಾರುತದ (Cyclone Biparjoy) ಅಬ್ಬರದ ನಡುವೆಯೇ ಮುಂಬೈಯ (Mumbai) ಜುಹುವಿನ ಸಮುದ್ರದಲ್ಲಿ (Juhu Beach) ನಾಲ್ವರು ಬಾಲಕರು ಮುಳುಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇವರಿಗಾಗಿ ಹುಡುಕಾಟ ಮುಂದುವರಿದಿದೆ. ಒಟ್ಟು 5 ಬಾಲಕರು ಸಮುದ್ರದಲ್ಲಿ ಮುಳುಗಿದ್ದರು, ಇವರಲ್ಲಿ ಒಬ್ಬರನ್ನು ರಕ್ಷಿಸಲಾಗಿದೆ ಎಂದು ಇಂಡಿಯಾ ಟಿವಿ ನ್ಯೂಸ್ ಡಾಟ್ ಕಾಮ್ ವರದಿ ಮಾಡಿದೆ. ಸೋಮವಾರ ಮುಂಬೈನ ಜುಹು ಬೀಚ್‌ನಲ್ಲಿ ಐವರು ಮುಳುಗಿದ್ದು, ಈ ಪೈಕಿ ಒಬ್ಬರನ್ನು ಸ್ಥಳೀಯರು ರಕ್ಷಿಸಿದ್ದು, 4 ಮಂದಿ ನಾಪತ್ತೆಯಾಗಿದ್ದಾರೆ ಎಂದು ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೂಲಗಳ ಪ್ರಕಾರ, ಜುಹು ಕಡಲತೀರದಲ್ಲಿ 5 ಜನರು ವಾಕ್ ಮಾಡಲು ಹೋದಾಗ ಭಾರೀ ಅಲೆಗಳು ಅವರನ್ನು ಎಳೆದೊಯ್ದಿದೆ.

ಮುಂಬೈ ಪ್ರಸ್ತುತ ಬಿಪೋರ್​​ಜಾಯ್  ಚಂಡಮಾರುತದ ಪರಿಣಾಮಗಳನ್ನು ಎದುರಿಸುತ್ತಿದೆ. ಮಹಾರಾಷ್ಟ್ರದ ರಾಜಧಾನಿಯ ಮೇಲೆ ಚಂಡಮಾರುತದ ಪ್ರಭಾವವು ನಿಧಾನವಾಗಿ ಹೆಚ್ಚು ಸ್ಪಷ್ಟವಾಗುತ್ತಿದೆ. ವಾರಾಂತ್ಯದ ಆರಂಭದಿಂದಲೂ ಬಿರುಸಾದ ಗಾಳಿ ಅನುಭವಿಸುತ್ತಿರುವ ಕರಾವಳಿ ನಗರವು ಮುಂದಿನ ಒಂದು ಅಥವಾ ಎರಡು ದಿನಗಳವರೆಗೆ ಬಲವಾದ ಗಾಳಿ ಮತ್ತು  ಮಳೆಗೆ ಸಾಕ್ಷಿಯಾಗುವ ಸಾಧ್ಯತೆಯಿದೆ.

12 ರಿಂದ 15 ವರ್ಷ ವಯಸ್ಸಿನ ಹುಡುಗರು ತೀರದಿಂದ ಸುಮಾರು ಅರ್ಧ ಕಿಲೋಮೀಟರ್ ಸಮುದ್ರದಲ್ಲಿ ಮುಳುಗಿದರು. ಇದರಲ್ಲಿ ಒಬ್ಬನನ್ನು , ಸ್ಥಳೀಯ ಮೀನುಗಾರರಿಂದ ರಕ್ಷಿಸಿದ್ದಾರೆ

ಸಮುದ್ರದಲ್ಲಿ ಹೆಚ್ಚಿನ ಉಬ್ಬರವಿಳಿತವು ಶೋಧ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: CoWin ಪೋರ್ಟಲ್ ಸುರಕ್ಷಿತ, ಡೇಟಾ ಸೋರಿಕೆ ವರದಿ ಆಧಾರರಹಿತ: ಕೇಂದ್ರ ಸರ್ಕಾರ

ಪ್ರತಿ ಮುಂಬೈ ಬೀಚ್‌ನಲ್ಲಿ, ನಗರದ ನಾಗರಿಕ ಸಂಸ್ಥೆ ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಅಥವಾ BMC ಯಿಂದ ಜೀವರಕ್ಷಕರನ್ನು ನೇಮಿಸಲಾಗಿದೆ. ಕಡಲತೀರಗಳಲ್ಲಿ ಹಲವಾರು ಕೆಂಪು ಬಾವುಟ ನೆಟ್ಟಿದ್ದು  ಇದು ದೊಡ್ಡ ಅಲೆಗಳು ಮತ್ತು ಬಲವಾದ ಪ್ರವಾಹಗಳನ್ನು ಸೂಚಿಸುತ್ತದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:46 pm, Mon, 12 June 23

ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ