Sign In

By signing in or creating an account, you agree with Associated Broadcasting Company's Terms & Conditions and Privacy Policy.

CoWin ಪೋರ್ಟಲ್ ಸುರಕ್ಷಿತ, ಡೇಟಾ ಸೋರಿಕೆ ವರದಿ ಆಧಾರರಹಿತ: ಕೇಂದ್ರ ಸರ್ಕಾರ

ಉನ್ನತ ರಾಜಕೀಯ ನಾಯಕರು ಸೇರಿದಂತೆ ಅನೇಕ ಭಾರತೀಯ ನಾಗರಿಕರ ಪ್ಯಾನ್ ಸಂಖ್ಯೆ ಮತ್ತು ಆಧಾರ್ ಸಂಖ್ಯೆಯಂತಹ ವೈಯಕ್ತಿಕ ಡೇಟಾವನ್ನು ಟೆಲಿಗ್ರಾಮ್‌ನಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ ಎಂದು ವರದಿಯಾಗಿತ್ತು. ಈ ವರದಿಯವನ್ನು ಉಲ್ಲೇಖಿಸಿದ ಭಾರತೀಯ ಆರೋಗ್ಯ ಸಚಿವಾಲಯವು ಅವುಗಳು 'ಚೇಷ್ಟೆ' ಮತ್ತು 'ಆಧಾರರಹಿತ' ಎಂದು ಕರೆದಿದೆ.

CoWin ಪೋರ್ಟಲ್ ಸುರಕ್ಷಿತ, ಡೇಟಾ ಸೋರಿಕೆ ವರದಿ ಆಧಾರರಹಿತ: ಕೇಂದ್ರ ಸರ್ಕಾರ
ಕೋವಿನ್
Follow us
ರಶ್ಮಿ ಕಲ್ಲಕಟ್ಟ
|

Updated on: Jun 12, 2023 | 6:05 PM

ಕೋವಿನ್ (CoWIN) ಪೋರ್ಟಲ್​​​​ನಲ್ಲಿ ನೋಂದಣಿ ಮಾಡಲಾದ ವ್ಯಕ್ತಿಗಳ ಮಾಹಿತಿ ಸೋರಿಕೆಯಾಗಿದ್ದು ಇದು ಟೆಲಿಗ್ರಾಮ್‌ನಲ್ಲಿ (Telegram) ಲಭ್ಯವಾಗಿದೆ ಎಂಬ ವರದಿಗಳ ಮಧ್ಯೆ CoWIN ಪೋರ್ಟಲ್ ‘ಸಂಪೂರ್ಣವಾಗಿ ಸುರಕ್ಷಿತವಾಗಿದೆ’ ಎಂದು ಭಾರತದ ಆರೋಗ್ಯ ಸಚಿವಾಲಯ ಅಧಿಕೃತ ಹೇಳಿಕೆಯನ್ನು ನೀಡಿದೆ. ಟೆಲಿಗ್ರಾಮ್‌ನಲ್ಲಿ CoWIN ಪೋರ್ಟಲ್‌ನಿಂದ ಹಲವು ಭಾರತೀಯ ನಾಗರಿಕರ ವಿವರಗಳನ್ನು ಒಳಗೊಂಡಿರುವ ಡೇಟಾ ಸೋರಿಕೆಯಾಗಿದೆ ಎಂದು ವರದಿ ಆಗಿತ್ತು.

ಉನ್ನತ ರಾಜಕೀಯ ನಾಯಕರು ಸೇರಿದಂತೆ ಅನೇಕ ಭಾರತೀಯ ನಾಗರಿಕರ ಪ್ಯಾನ್ ಸಂಖ್ಯೆ ಮತ್ತು ಆಧಾರ್ ಸಂಖ್ಯೆಯಂತಹ ವೈಯಕ್ತಿಕ ಡೇಟಾವನ್ನು ಟೆಲಿಗ್ರಾಮ್‌ನಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ ಎಂದು ವರದಿಯಾಗಿತ್ತು. ಈ ವರದಿಯವನ್ನು ಉಲ್ಲೇಖಿಸಿದ ಭಾರತೀಯ ಆರೋಗ್ಯ ಸಚಿವಾಲಯವು ಅವುಗಳು ‘ಚೇಷ್ಟೆ’ ಮತ್ತು ‘ಆಧಾರರಹಿತ’ ಎಂದು ಕರೆದಿದೆ.

ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ Twitter ನಲ್ಲಿನ ಕೆಲವು ಪೋಸ್ಟ್‌ಗಳು ಟೆಲಿಗ್ರಾಮ್ (ಆನ್‌ಲೈನ್ ಮೆಸೆಂಜರ್ ಅಪ್ಲಿಕೇಶನ್)ನಲ್ಲಿ, ಲಸಿಕೆ ಹಾಕಿಸಿಕೊಂಡ ವ್ಯಕ್ತಿಗಳ ವೈಯಕ್ತಿಕ ಡೇಟಾ ಲಭ್ಯವಾಗಿವೆ ಎಂದು ಹೇಳಿವೆ. ಫಲಾನುಭವಿಯ ಮೊಬೈಲ್ ಸಂಖ್ಯೆ ಅಥವಾ ಆಧಾರ್ ಸಂಖ್ಯೆಯನ್ನು ಸರಳವಾಗಿ ರವಾನಿಸುವ ಮೂಲಕ ವೈಯಕ್ತಿಕ ಡೇಟಾವನ್ನು ಪಡೆಯಲು BOT ಸಮರ್ಥವಾಗಿದೆ ಎಂದು ವರದಿಯಾಗಿದೆ ಎಂದು ಅಧಿಕೃತ ಹೇಳಿಕೆ ಉಲ್ಲೇಖಿಸಿದೆ.

ಸಚಿವಾಲಯದ ವರದಿಯು COWIN ಪೋರ್ಟಲ್‌ಗಾಗಿ ತೆಗೆದುಕೊಂಡ ಭದ್ರತಾ ಕ್ರಮಗಳ ಬಗ್ಗೆಯೂ ವಿವರಿಸಿದೆ. ಅದೇ ವೇಳೆ ಡೇಟಾ ಗೌಪ್ಯತೆಗಾಗಿ ಸಾಕಷ್ಟು ಸುರಕ್ಷತೆಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದೆ.

ಅಂತಹ ಎಲ್ಲಾ ವರದಿಗಳು ಯಾವುದೇ ಆಧಾರವಿಲ್ಲದೆ ಮತ್ತು ಚೇಷ್ಟೆಯ ಸ್ವರೂಪದಲ್ಲಿವೆ. ಆರೋಗ್ಯ ಸಚಿವಾಲಯದ ಕೋವಿನ್ ಪೋರ್ಟಲ್ ಡೇಟಾ ಗೌಪ್ಯತೆಗಾಗಿ ಸಾಕಷ್ಟು ಸುರಕ್ಷತೆಗಳೊಂದಿಗೆ ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಇದಲ್ಲದೆ, ವೆಬ್ ಅಪ್ಲಿಕೇಶನ್ ಫೈರ್‌ವಾಲ್, ಆಂಟಿ-ಡಿಡಿಒಎಸ್, ಎಸ್‌ಎಸ್‌ಎಲ್/ಟಿಎಲ್‌ಎಸ್, ನಿಯಮಿತ ದುರ್ಬಲತೆ ಮೌಲ್ಯಮಾಪನ, ಗುರುತು ಮತ್ತು ಪ್ರವೇಶ ನಿರ್ವಹಣೆ ಇತ್ಯಾದಿಗಳೊಂದಿಗೆ ಕೋವಿನ್ ಪೋರ್ಟಲ್‌ನಲ್ಲಿ ಭದ್ರತಾ ಕ್ರಮಗಳು ಜಾರಿಯಲ್ಲಿವೆ. ಡೇಟಾದ ಒಟಿಪಿ ದೃಢೀಕರಣ ಆಧಾರಿತ ಪ್ರವೇಶವನ್ನು ಮಾತ್ರ ಒದಗಿಸಲಾಗುತ್ತದೆ. CoWIN ಪೋರ್ಟಲ್‌ನಲ್ಲಿನ ಡೇಟಾದ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಮತ್ತು ತೆಗೆದುಕೊಳ್ಳಲಾಗುತ್ತಿದೆ ಎಂದು ಭಾರತ ಸರ್ಕಾರದ ಅಧಿಕೃತ ಪ್ರಕಟಣೆ ಹೇಳಿದೆ.

ಇದನ್ನೂ ಓದಿ: ಟೆಲಿಗ್ರಾಮ್‌ನಲ್ಲಿ CoWIN ಡೇಟಾ ಸೋರಿಕೆ?; ಕೇಂದ್ರ ಸರ್ಕಾರ ತನಿಖೆ ನಡೆಸಲಿದೆ: ಮೂಲಗಳು

ಕೇಂದ್ರ ಆರೋಗ್ಯ ಸಚಿವಾಲಯದ CoWIN ಪೋರ್ಟಲ್ ನಲ್ಲಿ ಕೋವಿಡ್ 19 ವಿರುದ್ಧ ಲಸಿಕೆಯನ್ನು ಪಡೆದ ಫಲಾನುಭವಿಗಳ ಮಾಹಿತಿ ಸಂಗ್ರಹವಿದೆ. ಈ ಸಮಸ್ಯೆಯನ್ನು ಪರಿಶೀಲಿಸಲು ಮತ್ತು ವರದಿಯನ್ನು ಸಲ್ಲಿಸಲು ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡಕ್ಕೆ (CERT-In) ತಿಳಿಸಲಾಗಿದೆ ಎಂದು ಭಾರತ ಸರ್ಕಾರ ಹೇಳಿದೆ. CoWIN ನ ಅಸ್ತಿತ್ವದಲ್ಲಿರುವ ಭದ್ರತಾ ಕ್ರಮಗಳನ್ನು ಪರಿಶೀಲಿಸಲು ಆಂತರಿಕ ತನಿಖೆಯನ್ನೂ ಪ್ರಾರಂಭಿಸಲಾಗಿದೆ ಎಂದು ಸರ್ಕಾರ ಹೇಳಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ