Video: ರೀಲ್ಸ್​ ಮಾಡಲು ಹೋಗಿ ನೀರಿನಲ್ಲಿ ಕೊಚ್ಚಿ ಹೋದ ಯೂಟ್ಯೂಬರ್

Updated on: Aug 25, 2025 | 8:55 AM

ಒಡಿಶಾದ ಕೊರಾಪುಟ್‌ನಲ್ಲಿರುವ ದುಡುಮಾ ಜಲಪಾತದಲ್ಲಿ 22 ವರ್ಷದ ಯೂಟ್ಯೂಬರ್ ಕೊಚ್ಚಿ ಹೋಗಿದ್ದಾರೆ. ಮಾಹಿತಿಯ ಪ್ರಕಾರ, ಗಂಜಾಂ ಜಿಲ್ಲೆಯ ಬೆರ್ಹಾಂಪುರ್ ನಿವಾಸಿಯಾದ ಯೂಟ್ಯೂಬರ್ ಸಾಗರ್ ತುಡು ತನ್ನ ಸ್ನೇಹಿತ ಅಭಿಜೀತ್ ಬೆಹೆರಾ ಅವರೊಂದಿಗೆ ಕೊರಾಪುಟ್‌ಗೆ ಭೇಟಿ ನೀಡಿದ್ದರು. ವಿವಿಧ ಪ್ರವಾಸಿ ಸ್ಥಳಗಳ ವೀಡಿಯೊಗಳನ್ನು ಮಾಡಿ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡುತ್ತಿದ್ದರು.

ಒಡಿಶಾ, ಆಗಸ್ಟ್ 25:  ರೀಲ್ಸ್​ ಮಾಡಲು ಹೋಗಿ ಯೂಟ್ಯೂಬರ್ ಪ್ರಾಣವನ್ನೇ ಕಳೆದುಕೊಂಡಿರುವ ಘಟನೆ ಒಡಿಶಾದಲ್ಲಿ ನಡೆದಿದೆ. ಒಡಿಶಾದ ಕೊರಾಪುಟ್‌ನಲ್ಲಿರುವ ದುಡುಮಾ ಜಲಪಾತದಲ್ಲಿ 22 ವರ್ಷದ ಯೂಟ್ಯೂಬರ್ ಕೊಚ್ಚಿ ಹೋಗಿದ್ದಾರೆ. ಮಾಹಿತಿಯ ಪ್ರಕಾರ, ಗಂಜಾಂ ಜಿಲ್ಲೆಯ ಬೆರ್ಹಾಂಪುರ್ ನಿವಾಸಿಯಾದ ಯೂಟ್ಯೂಬರ್ ಸಾಗರ್ ತುಡು ತನ್ನ ಸ್ನೇಹಿತ ಅಭಿಜೀತ್ ಬೆಹೆರಾ ಅವರೊಂದಿಗೆ ಕೊರಾಪುಟ್‌ಗೆ  ಹೋಗಿದ್ದರು. ವಿವಿಧ ಪ್ರವಾಸಿ ಸ್ಥಳಗಳ ವೀಡಿಯೊಗಳನ್ನು ಮಾಡಿ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡುತ್ತಿದ್ದರು.

ಸಾಗರ್ ಜಲಪಾತದ ಬಳಿಯ ಬಂಡೆಯ ಮೇಲೆ ನಿಂತು ಡ್ರೋನ್ ಕ್ಯಾಮೆರಾದೊಂದಿಗೆ ರೀಲ್ ರೆಕಾರ್ಡ್ ಮಾಡುತ್ತಿದ್ದ. ನಂತರ ಆ ಪ್ರದೇಶದಲ್ಲಿ ಭಾರೀ ಮಳೆಯಾಗಿದ್ದರಿಂದ ಮಚಕುಂಡ ಅಣೆಕಟ್ಟಿನಿಂದ ನೀರನ್ನು ಬಿಡುಗಡೆ ಮಾಡಲಾಯಿತು. ನೀರಿನ ಬಿಡುಗಡೆಯಿಂದಾಗಿ, ಜಲಪಾತದಲ್ಲಿ ನೀರಿನ ಮಟ್ಟ ಇದ್ದಕ್ಕಿದ್ದಂತೆ ಹೆಚ್ಚಾಗಿ, ಬಲವಾದ ಹರಿವು ಪ್ರಾರಂಭವಾಯಿತು.

ಯೂಟ್ಯೂಬರ್ ಸಾಗರ್ ನಿಂತಿದ್ದ ಬಂಡೆಯು ನೀರಿನಿಂದ ಆವೃತವಾಗಿತ್ತು. ಅವರು ಸ್ವಲ್ಪ ಸಮಯದವರೆಗೆ ಸಮತೋಲನ ಕಾಯ್ದುಕೊಳ್ಳಲು ಪ್ರಯತ್ನಿಸಿದರು ಆದರೆ ಬಲವಾದ ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋದರು. ಅಲ್ಲಿದ್ದವರು ಅವರನ್ನು ರಕ್ಷಿಸಲು ಎಷ್ಟೇ ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ