ಮೋಕ್ಷಿತಾ ಜೊತೆ ಮನಸ್ಸಿನ ಮಾತು ವಿನಿಮಯ ಮಾಡಿಕೊಂಡ ತ್ರಿವಿಕ್ರಮ್

Updated on: Nov 15, 2024 | 9:03 PM

ಬಿಗ್ ಬಾಸ್ ಆಟದಲ್ಲಿ ಯುವ ಜೋಡಿಗಳ ನಡುವೆ ಆಕರ್ಷಣೆ ಹುಟ್ಟುತ್ತದೆ. ಇಷ್ಟು ದಿನಗಳ ಕಾಲ ಸುಮ್ಮನಿದ್ದ ತ್ರಿವಿಕ್ರಮ್ ಅವರು ಈಗ ಮೋಕ್ಷಿತಾ ಎದುರು ತಮ್ಮ ಮನಸ್ಸಿನ ಮಾತು ಹೇಳಿಕೊಂಡಿದ್ದಾರೆ. ಅದೇ ರೀತಿ ಮೋಕ್ಷಿತಾ ಅವರು ಕೂಡ ತಮ್ಮ ಅನಿಸಿಕೆಗಳನ್ನು ನೇರವಾಗಿ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಇಬ್ಬರ ನಡುವಿನ ಬಂಧ ಗಟ್ಟಿಯಾಗುವ ಸಾಧ್ಯತೆ ಇದೆ.

‘ನಾನು ನಿಮ್ಮ ಜೊತೆ ಮಾತನಾಡಬೇಕು’ ಎಂದು ಮೋಕ್ಷಿತಾ ಜೊತೆ ತ್ರಿವಿಕ್ರಮ್ ಅವರು ಮಾತುಕಥೆ ಆರಂಭಿಸಿದ್ದಾರೆ. ‘ಬಿಗ್​ ಬಾಸ್ ಕನ್ನಡ ಸೀಸನ್​ 11’ ಶುರು ಆದಾಗಿನಿಂದ ಮೋಕ್ಷಿತಾ ಮತ್ತು ತ್ರಿವಿಕ್ರಮ್ ಅವರು ಹೆಚ್ಚು ಬೆರೆತಿಲ್ಲ. ಈಗ ಮೋಕ್ಷಿತಾ ಜೊತೆ ಹತ್ತಿರ ಆಗಬೇಕು ಎಂದು ತ್ರಿವಿಕ್ರಮ್ ಬಯಸಿದ್ದಾರೆ. ‘ನಿಮ್ಮ ವಿಷಯದಲ್ಲಿ ನನಗೆ ತುಂಬ ಗೊಂದಲ ಇದೆ. ಈ ವ್ಯಕ್ತಿ ಹೇಗೆ? ಓಕೆನಾ ಅಥವಾ ಇಲ್ಲವಾ ಎಂಬುದು ಗೊತ್ತಾಗಿಲ್ಲ’ ಎಂದು ಮೋಕ್ಷಿತಾ ಅವರು ಹೇಳಿದ್ದಾರೆ. ‘ನಾವಿಬ್ಬರೂ ಇನ್ನೂ ಕುಳಿತು ಮಾತನಾಡಿಲ್ಲ’ ಎಂದು ತ್ರಿವಿಕ್ರಮ್ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More