ಅಕ್ಕ-ತಂಗಿ ಜತೆ ಬೆಳೆದವರು ಹಕ್ಕಿ ಅಂತ ಹೇಳ್ತಾರಾ? ತ್ರಿವಿಕ್ರಮ್ ವಿರುದ್ಧ ಸಿಡಿದೆದ್ದ ಮೋಕ್ಷಿತಾ
ಬಿಗ್ ಬಾಸ್ ಮನೆಯಲ್ಲಿ ಹೊಸ ಟ್ವಿಸ್ಟ್ ನೀಡಲಾಗಿದೆ. ಬೆನ್ನ ಹಿಂದೆ ಮಾತನಾಡಿದವರ ವಿಡಿಯೋವನ್ನು ಎಲ್ಲರ ಎದುರು ಪ್ಲೇ ಮಾಡಲಾಗಿದೆ. ಮೋಕ್ಷಿತಾ ಬಗ್ಗೆ ತ್ರಿವಿಕ್ರಮ್ ಮಾತನಾಡಿರುವುದು ಬಹಿರಂಗ ಆಗಿದೆ. ಅದನ್ನು ನೋಡಿ ಮೋಕ್ಷಿತಾ ಅವರು ಕೆಂಡಾಮಂಡಲ ಆಗಿದ್ದಾರೆ. ಅದೇ ರೀತಿ ಬೇರೆಯವರ ಗುಸ ಗುಸು ಮಾತುಗಳು ಕೂಡ ಈಗ ಬಯಲಾಗಿವೆ.
‘ಒಂದು ಹಕ್ಕಿಯನ್ನು ಹೊಡೆದರೆ ಎರಡು ಹಕ್ಕಿ ಫ್ರೀ. ಇನ್ನೊಂದು ಹಕ್ಕಿ ಅಟಕ್ಕೆ ಉಂಟು ಲೆಕ್ಕಕ್ಕೆ ಇಲ್ಲ’ ಎಂದು ತ್ರಿವಿಕ್ರಮ್ ಅವರು ಮಾನಸಾ ಜತೆ ಕುಳಿತು ಮಾತನಾಡಿದ್ದರು. ಆ ವಿಡಿಯೋವನ್ನು ಪ್ಲೇ ಮಾಡಲಾಗಿದೆ. ಅದನ್ನು ನೋಡಿ ಮೋಕ್ಷಿತಾ ಅವರಿಗೆ ಕೋಪ ಬಂದಿದೆ. ‘ಅಕ್ಕ-ತಂಗಿ ಜೊತೆಯಲ್ಲಿ ಬೆಳೆದವರು ಹಕ್ಕಿ ಅಂತ ಮಾತಾಡ್ತಾರಾ? ಅವರ ತನ ಏನು ಎಂಬುದು ತೋರಿಸುತ್ತೆ. ಅವರಿಗೆ ಗೋಮುಖ ವ್ಯಾಘ್ರ ಅಂತ ಹೇಳಿದ್ದೆ. ಅದಕ್ಕೆ ನನಗೆ ವಿಷಾದ ಇಲ್ಲ’ ಎಂದು ಮೋಕ್ಷಿತಾ ಗರಂ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos