Video: ಲಕ್ಷಾಂತರ ಜೇನುನೊಣಗಳನ್ನು ಸಾಗಿಸುತ್ತಿದ್ದ ಟ್ರಕ್ ಪಲ್ಟಿ
ಅಮೆರಿಕದ ವಾಷಿಂಗ್ಟನ್ನಲ್ಲಿ ಲಕ್ಷಾಂತರ ಜೇನುನೊಣಗಳನ್ನು ಸಾಗಿಸುತ್ತಿದ್ದ ಟ್ರಕ್ ಪಲ್ಟಿಯಾದ ಪರಿಣಾಮ ಜೇನು ನೊಣಗಳು ಹಾರಿ ಹೋಗಿವೆ. ಜೇನುನೊಣಗಳ ಹಿಂಡುಗಳ ಅಪಾಯವಿರುವ ಕಾರಣ ಜನರು ಈ ಪ್ರದೇಶದಿಂದ ದೂರವಿರಬೇಕೆಂದು ತಿಳಿಸಲಾಗಿದೆ. 31,730 ಕೆಜಿ ತೂಕದ ಜೇನುಗೂಡುಗಳನ್ನು ಸಾಗಿಸಲಾಗುತ್ತಿತ್ತು. ಕೆನಡಾದ ಗಡಿಯ ಬಳಿ ಟ್ರಕ್ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿತ್ತು.. 24 ರಿಂದ 48 ಗಂಟೆಗಳ ಒಳಗೆ ಜೇನುನೊಣಗಳು ತಮ್ಮ ಜೇನುಗೂಡುಗಳಿಗೆ ಮರಳುತ್ತವೆ ಎಂದು ಅಧಿಕಾರಿಗಳು ಭರವಸೆ ವ್ಯಕ್ತಪಡಿಸಿದರು.
ವಾಷಿಂಗ್ಟನ್, ಜೂನ್ 1: ಅಮೆರಿಕದ ವಾಷಿಂಗ್ಟನ್ನಲ್ಲಿ ಲಕ್ಷಾಂತರ ಜೇನುನೊಣಗಳನ್ನು ಸಾಗಿಸುತ್ತಿದ್ದ ಟ್ರಕ್ ಪಲ್ಟಿಯಾದ ಪರಿಣಾಮ ಜೇನು ನೊಣಗಳು ಹಾರಿ ಹೋಗಿವೆ. ಜೇನುನೊಣಗಳ ಹಿಂಡುಗಳ ಅಪಾಯವಿರುವ ಕಾರಣ ಜನರು ಈ ಪ್ರದೇಶದಿಂದ ದೂರವಿರಬೇಕೆಂದು ತಿಳಿಸಲಾಗಿದೆ. 31,730 ಕೆಜಿ ತೂಕದ ಜೇನುಗೂಡುಗಳನ್ನು ಸಾಗಿಸಲಾಗುತ್ತಿತ್ತು. ಕೆನಡಾದ ಗಡಿಯ ಬಳಿ ಟ್ರಕ್ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿತ್ತು.. 24 ರಿಂದ 48 ಗಂಟೆಗಳ ಒಳಗೆ ಜೇನುನೊಣಗಳು ತಮ್ಮ ಜೇನುಗೂಡುಗಳಿಗೆ ಮರಳುತ್ತವೆ ಎಂದು ಅಧಿಕಾರಿಗಳು ಭರವಸೆ ವ್ಯಕ್ತಪಡಿಸಿದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ