Video: ಚಾಲಾಕಿ ಕಳ್ಳ, ಪ್ರಯಾಣಿಕರನ್ನು ತುಂಬಿಕೊಂಡೇ ಆರ್​​​ಟಿಸಿ ಬಸ್ ಕದ್ದೊಯ್ದ! ಮಾರ್ಗ ಮಧ್ಯೆ ಡೀಸೆಲ್ ಖಾಲಿಯಾದಾಗ ಏನು ಮಾಡಿದ?

Updated on: Sep 12, 2023 | 2:38 PM

ಚಾಲಾಕಿ ಕಳ್ಳ, ಪ್ರಯಾಣಿಕರನ್ನು ತುಂಬಿಕೊಂಡೇ ಆರ್​​​ಟಿಸಿ ಬಸ್ ಕದ್ದೊಯ್ದ! ಕೆಲ ಪ್ರಯಾಣಿಕರು ಟಿಕೆಟ್ ಕೊಡುವಂತೆ ಬಸ್​ ಚಾಲಕನನ್ನು ಕೇಳಿದಾಗ. ಕಳ್ಳ ರೂಪದ ಆ ಡ್ರೈವರ್​ ಮಹಾಶಯ, ಕಂಡಕ್ಟರ್ ಮಾರ್ಗ ಮಧ್ಯೆ ಹತ್ತಿಕೊಳ್ಳುತ್ತಾನೆ, ಆಗ ಟಿಕೆಟ್ ತೆಗೆದುಕೊಳ್ಳಿ ಎಂದು ಹೇಳಿದ್ದಾನೆ. ತಂಗಲ್ಲಪಲ್ಲಿ ಮಂಡಲದ ಸಾರಂಪೆಲ್ಲಿ ನೇರೆಲ್ಲ ಗ್ರಾಮದ ಉಪನಗರದಲ್ಲಿ ಬಸ್ ನಲ್ಲಿ ಡೀಸೆಲ್ ಖಾಲಿಯಾದ ಕಾರಣ ಬಸ್ ಹಾಗೂ ಪ್ರಯಾಣಿಕರನ್ನು ನಡುರಸ್ತೆಯಲ್ಲೇ ಬಿಟ್ಟು ಓಡಿ ಹೋಗಿದ್ದಾನೆ!

ಕರೀಂನಗರ, ಸೆಪ್ಟೆಂಬರ್ 11: ಹತಾಶ ಕಳ್ಳರು ಎಂಥಹುದ್ದೇ ಅಪರಾಧ ಕೃತ್ಯವೆಸಗಲು ಹಿಂದೆ ಸರಿಯುವುದಿಲ್ಲ. ತಾಜಾ ಆಗಿ ತೆಲಂಗಾಣ ರಾಜ್ಯಕ್ಕೆರ ಸೇರಿದ ಸಾರಿಗೆ ಆರ್ ಟಿಸಿ ಬಸ್ ನ್ನು ಕಳ್ಳನೊಬ್ಬ ಕದ್ದೊಯ್ದಿದ್ದಾನೆ! ತೆಲಂಗಾಣದ ಸಿದ್ದಿಪೇಟ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಸಿದ್ದಿಪೇಟೆ ಡಿಪೋದಿಂದ ಆರ್ಟೆಸಿ ಬಸ್ ಕದ್ದ ಕಳ್ಳ ಅಲ್ಲಿಂದ ವೇಮುಲವಾಡ ತಲುಪಿದ್ದಾನೆ. ವೇಮುಲವಾಡ ಬಸ್ ನಿಲ್ದಾಣದಲ್ಲಿ ಹೈದರಾಬಾದ್ ಪಾಯಿಂಟ್‌ನಲ್ಲಿ ನಿಲ್ಲಿಸಿ ಈ ಬಸ್ ಹೈದರಾಬಾದ್‌ಗೆ ಹೋಗುತ್ತಿದೆ ಎಂದು ಹೇಳಿ ಕೆಲವು ಪ್ರಯಾಣಿಕರನ್ನು ಬಸ್‌ನಲ್ಲಿ ಹತ್ತಿಸಿಕೊಂಡಿದ್ದಾನೆ. ಅಲ್ಲಿಂದ ಹೈದರಾಬಾದ್‌ಗೂ ತೆರಳಿದ್ದಾನೆ. ಕೆಲ ಪ್ರಯಾಣಿಕರು ಟಿಕೆಟ್ ಕೊಡುವಂತೆ ಬಸ್​ ಚಾಲಕನನ್ನು ಕೇಳಿದಾಗ. ಕಳ್ಳ ರೂಪದ ಆ ಡ್ರೈವರ್​ ಮಹಾಶಯ, ಕಂಡಕ್ಟರ್ ಮಾರ್ಗ ಮಧ್ಯೆ ಹತ್ತಿಕೊಳ್ಳುತ್ತಾನೆ, ಆಗ ಟಿಕೆಟ್ ತೆಗೆದುಕೊಳ್ಳಿ ಎಂದು ಹೇಳಿದ್ದಾನೆ. ತಂಗಲ್ಲಪಲ್ಲಿ ಮಂಡಲದ ಸಾರಂಪೆಲ್ಲಿ ನೇರೆಲ್ಲ ಗ್ರಾಮದ ಉಪನಗರದಲ್ಲಿ ಬಸ್ ನಲ್ಲಿ ಡೀಸೆಲ್ ಖಾಲಿಯಾದ ಕಾರಣ ಬಸ್ ಹಾಗೂ ಪ್ರಯಾಣಿಕರನ್ನು ನಡುರಸ್ತೆಯಲ್ಲೇ ಬಿಟ್ಟು ಓಡಿ ಹೋಗಿದ್ದಾನೆ!

ಈ ಬಸ್ಸಿನಲ್ಲಿ ಡೀಸೆಲ್ ಖಾಲಿಯಾಗಿದೆ, ನೀವು ಬೇರೆ ಬಸ್ ಹತ್ತಿಕೊಂಡು ಪ್ರಯಾಣ ಮುಂದುವರಿಸಿ ಎಂದು ಬಸ್‌ಗಳಿಂದ ಪ್ರಯಾಣಿಕರನ್ನು ಇಳಿಸಿದ್ದಾನೆ ಚಾಲಾಕಿ ಕಳ್ಳ. ಏನೂ ಮಾಡಲಾಗದೆ ಪ್ರಯಾಣಿಕರು ಬೇರೆ ಬಸ್ಸಿಗೆ ಹೊರಟರು. ಇವರ ಜೊತೆಗೆ.. ಕಳ್ಳ ಚಾಲಕ ಕೂಡ ಬಸ್ ಅಲ್ಲೇ ಬಿಟ್ಟು ಓಡಿ ಹೋಗಿದ್ದಾನೆ.. ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕಾಗಮಿಸಿದ ಅಧಿಕಾರಿಗಳು.. ವಿಚಾರಣೆ ನಡೆಸಿದಾಗ ಬಸ್ ಸಿದ್ದಿಪೇಟೆ ಡಿಪೋಗೆ ಸೇರಿದ್ದು ಎಂದು ತಿಳಿದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಬಸ್ ಕಳ್ಳನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಕಳ್ಳನ ಬಂಧಿಸಲು ವಿಶೇಷ ತಂಡ ರಚಿಸಲಾಗಿದ್ದು, ಸುತ್ತಮುತ್ತಲ ಪ್ರದೇಶಗಳಲ್ಲಿ ಶೋಧ ನಡೆಸಲಾಗುತ್ತಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Read More