‘ಯಾವನದ್ದೋ ಜತೆ ಓಡಿ ಹೋಗಿದ್ದಾಳೆ’: ಹೆಂಡತಿಯ ಅವಾಂತರ ವಿವರಿಸಿದ ತುಕಾಲಿ ಸಂತೋಷ್​

Updated on: Jan 19, 2024 | 10:55 PM

ಹಾಡಿನ ಮೂಲಕ ತುಕಾಲಿ ಸಂತೋಷ್​ ಅವರು ಹಾಸ್ಯದ ಹೊಳೆ ಹರಿಸಿದ್ದಾರೆ. ಈ ಸಂಚಿಕೆ ಜನವರಿ 19ರ ರಾತ್ರಿ ಪ್ರಸಾರ ಕಂಡಿದೆ. ಡ್ರೋನ್​ ಪ್ರತಾಪ್​ ಮತ್ತು ಸಂಗೀತಾ ಶೃಂಗೇರಿ ಟಾಸ್ಕ್​ ಮಾಡುವಾಗ ತುಕಾಲಿ ಸಂತೋಷ್​ ಅವರು ಎಲ್ಲರಿಗೂ ಮಸ್ತ್​ ಮನರಂಜನೆ ನೀಡಿದ್ದಾರೆ.

ಹಾಸ್ಯ ನಟ ತುಕಾಲಿ ಸಂತೋಷ್​ ಅವರಿಂದ ಬಿಗ್​ ಬಾಸ್​ (Bigg Boss Kannada) ಮನೆಯಲ್ಲಿ ಲವಲವಿಕೆ ತುಂಬಿದೆ. ಸಾಕಷ್ಟು ಸಂದರ್ಭದಲ್ಲಿ ಅವರು ಕಾಮಿಡಿ ಮೂಲಕ ಮನೆಮಂದಿಯನ್ನು ನಗಿಸಿದ್ದಾರೆ. ಈಗ ತುಕಾಲಿ ಸಂತೋಷ್ (Tukali Santhosh) ಅವರು ಹೆಂಡತಿಯ ಅವಾಂತರಗಳನ್ನು ವಿವರಿಸಿದ್ದಾರೆ. ಹೆಂಡತಿ ಎಂದರೆ ಅವರ ನಿಜವಾದ ಪತ್ನಿ ಅಲ್ಲ. ಹಾಡಿನ ಮೂಲಕ ಅವರು ಹಾಸ್ಯದ ಹೊಳೆ ಹರಿಸಿದ್ದಾರೆ. ಅದರ ಪ್ರೋಮೋವನ್ನು ‘ಕಲರ್ಸ್​ ಕನ್ನಡ’ ವಾಹಿನಿ ಹಂಚಿಕೊಂಡಿದೆ. ಈ ಸಂಚಿಕೆ ಜನವರಿ 19ರ ರಾತ್ರಿ ಪ್ರಸಾರ ಕಂಡಿದೆ. ‘ಜಿಯೋ ಸಿನಿಮಾ’ ಒಟಿಟಿ ಮೂಲಕ ದಿನದ 24 ಗಂಟೆಯೂ ಲೈವ್​ ಮತ್ತು ಎಪಿಸೋಡ್​ ನೋಡಬಹುದು. ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ ಶೋ ಈಗ ಕೊನೇ ಹಂತದಲ್ಲಿದೆ. ಕೆಲವೇ ದಿನಗಳಲ್ಲಿ ಫಿನಾಲೆ ಎದುರಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More