ಹೆಂಡತಿ ಜೊತೆಗಿನ ಫೋಟೋ ನೋಡಿ ತುಕಾಲಿ ಸಂತೋಷ್​ ಕಂಗಾಲು; ಅಂಥದ್ದೇನಾಯ್ತು?

Updated on: Jan 26, 2024 | 9:02 PM

ಬಿಗ್​ ಬಾಸ್​ ಮನೆಗೆ ಒಂದು ಫೋಟೋ ಕಳಿಸಲಾಗಿದೆ. ಹೆಂಡತಿ ಜೊತೆ ತಾವು ನಿಂತಿರುವ ಆ ಫೋಟೋವನ್ನು ನೋಡಿ ತುಕಾಲಿ ಸಂತೋಷ್​ಗೆ ಶಾಕ್​ ಆಗಿದೆ. ‘ಆ ಫೋಟೋವನ್ನು ಯಾಕೆ ಕಳಿಸಿದ್ದೀರಿ? ನಮ್ಮ ತಾಯಾಣೆಗೂ ಅದು ಚೆನ್ನಾಗಿಲ್ಲ. ನನ್ನ ಹೆಂಡತಿಗೆ ಗೊತ್ತಾಗಬಾರದಾ’ ಎಂದು ತುಕಾಲಿ ಸಂತೋಷ್​ ಅವರು ತಲೆ ಚಚ್ಚಿಕೊಂಡಿದ್ದಾರೆ.

ಕಾಮಿಡಿ ನಟ ತುಕಾಲಿ ಸಂತೋಷ್​ ಅವರು ಹೆಂಡತಿ (Tukali Santosh Wife) ಜೊತೆ ನಿಂತಿರುವ ಹಳೇ ಫೋಟೋವನ್ನು ಬಿಗ್ ಬಾಸ್​ ಮನೆಗೆ ಕಳಿಸಲಾಗಿದೆ. ಆ ಫೋಟೋ ಚೆನ್ನಾಗಿಲ್ಲ ಎಂದು ತುಕಾಲಿ ಸಂತೋಷ್​ (Tukali Santosh) ಅವರು ಬೇಸರ ಮಾಡಿಕೊಂಡಿದ್ದಾರೆ. ಆ ಫೋಟೋ ನೋಡಿ ಅವರಿಗೆ ಶಾಕ್​ ಆಗಿದೆ. ‘ಆ ಫೋಟೋವನ್ನು ಯಾಕೆ ಕಳಿಸಿದ್ದೀರಿ? ನಮ್ಮ ತಾಯಾಣೆಗೂ ಅದು ಚೂರೂ ಚೆನ್ನಾಗಿಲ್ಲ. ನನ್ನ ಹೆಂಡತಿಗೆ ಗೊತ್ತಾಗಬಾರದಾ’ ಎಂದು ತುಕಾಲಿ ಸಂತೋಷ್​ ಅವರು ತಲೆ ಚಚ್ಚಿಕೊಂಡಿದ್ದಾರೆ. ‘ಈ ಫೋಟೋವನ್ನು ಕರ್ನಾಟಕದ ಜನತೆ ನೋಡಬೇಕು’ ಎಂದು ಕಾರ್ತಿಕ್​ ಮಹೇಶ್ ಅವರು ಕ್ಯಾಮೆರಾಗೆ ಫೋಟೋ ತೋರಿಸಿದ್ದಾರೆ. ಈ ಸಂದರ್ಭದ ಪ್ರೋಮೋವನ್ನು ಕಲರ್ಸ್​ ಕನ್ನಡ ವಾಹಿನಿ ಹಂಚಿಕೊಂಡಿದೆ. ‘ಜಿಯೋ ಸಿನಿಮಾ’ ಒಟಿಟಿಯಲ್ಲಿ ಉಚಿತವಾಗಿ 24 ಗಂಟೆಯೂ ಬಿಗ್​ ಬಾಸ್ (Bigg Boss Kannada)​ ನೋಡಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More