ತುಕಾಲಿಯ ಡ್ಯಾನ್ಸ್​ ನೋಡಿ ಬೆಚ್ಚಿ ಬಿದ್ದ ಮನೆ ಮಂದಿ

Updated on: Dec 10, 2023 | 10:14 PM

Tukali Santhu: ಬಿಗ್​ಬಾಸ್ ಮನೆಯ ಕಮಿಡಿಯನ್ ತುಕಾಲಿ ಸಂತು, ಭಾನುವಾರದ ಎಪಿಸೋಡ್​ನಲ್ಲಿ ಸುದೀಪ್ ಮುಂದೆ ಡ್ಯಾನ್ಸ್ ಮಾಡಿದ್ದಾರೆ. ಆದರೆ ಅವರ ಡ್ಯಾನ್ಸ್ ನೋಡಿ ಮನೆ ಮಂದಿ ಬೆಚ್ಚಿ ಬಿದ್ದಿದ್ದಾರೆ.

ತುಕಾಲಿ ಸಂತೋಷ್ (Tukali Santhosh) ಬಿಗ್​ಬಾಸ್ (BiggBoss) ಮನೆಯ ಕಮಿಡಿಯನ್, ಆರಂಭದಲ್ಲಿ ಅವರ ಕಾಮಿಡಿ ತಪ್ಪು ಹಾದಿ ಹಿಡಿದಿತ್ತು, ಸುದೀಪ್ ಅವರು ಎಚ್ಚರಿಕೆ ಕೊಟ್ಟ ಬಳಿಕ ಅವರ ವರಸೆ ತುಸು ಬದಲಾಯಿಸಿಕೊಂಡಿದ್ದರು. ಹಾಗಿದ್ದರೂ ಸಹ ಪ್ರತಿ ವಾರ ವೀಕೆಂಡ್​ ಪಂಚಾಯ್ತಿಯಲ್ಲಿ ಸುದೀಪ್ ಬಂದಾಗಲು ತುಕಾಲಿ ಅವರು ಏನೋ ಮಾಡಲು ಹೋಗಿ ಏನೋ ಮಾಡಿ ಸಿಕ್ಕಿ ಹಾಕಿಕೊಳ್ಳುತ್ತಾರೆ. ಒಮ್ಮೊಮ್ಮೆಯಂತೂ ಅತಿಯಾಗಿ ಬುದ್ಧಿ ಪ್ರದರ್ಶಿಸಿಯೂ ಸುದೀಪ್ ಕೈಯಲ್ಲಿ ಬೈಸಿಕೊಳ್ಳುತ್ತಾರೆ. ಈ ಶನಿವಾರವೂ ಹಾಗೆಯೇ ಆಗಿತ್ತು. ಆದರೆ ಭಾನುವಾರದ ಎಪಿಸೋಡ್​ನಲ್ಲಿ ಒಳ್ಳೆಯ ಮೂಡ್​ನಲ್ಲಿದ್ದ ಸುದೀಪ್, ತುಕಾಲಿಯಿಂದ ಡ್ಯಾನ್ಸ್ ಮಾಡಿಸಿದರು. ಆ ಡ್ಯಾನ್ಸ್ ನೋಡಿ ಮನೆ ಮಂದಿಯೆಲ್ಲ ಬೆಚ್ಚಿಬಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More