ಬಿಗ್ಬಾಸ್: ಸ್ಪರ್ಧಿಗಳ ವಿಚಾರಣೆ ಶುರುವಿಟ್ಟುಕೊಂಡ ಕಿಚ್ಚ ಸುದೀಪ್
Bigg Boss: ಈ ವಾರ ಮನೆಯ ಹಲವು ಸ್ಪರ್ಧಿಗಳು ಮಾನವೀಯತೆ ಮೀರಿ ವರ್ತಿಸಿದ್ದಾರೆ, ಅವರ ವರ್ತನೆಯನ್ನು ಸುದೀಪ್ ಹೇಗೆ ವಿಮರ್ಶಿಸುತ್ತಾರೆ, ಯಾರನ್ನು ಟೀಕಿಸುತ್ತಾರೆ, ಯಾರಿಗೆ ಭೇಷ್ ಎನ್ನುತ್ತಾರೆ. ನ್ಯಾಯ ವಿತರಣೆ ಹೇಗೆ ಮಾಡುತ್ತಾರೆ ಎಂದು ನೋಡಲು ಕಾದಿದ್ದರು. ಅಂತೆಯೇ ವಾರಾಂತ್ಯದ ಪಂಚಾಯ್ತಿಗೆ ಬಂದ ಸುದೀಪ್ ತುಸುವೂ ತಡ ಮಾಡದೆ ಸ್ಪರ್ಧಿಗಳ ವಿಚಾರಣೆ ಆರಂಭಿಸಿದ್ದಾರೆ.

ಈ ವಾರಾಂತ್ಯದ ಕಿಚ್ಚನ ಪಂಚಾಯ್ತಿಗಾಗಿ ಎಲ್ಲ ಬಿಗ್ಬಾಸ್ (Bigg Boss) ವೀಕ್ಷಕರು ಎದುರು ನೋಡುತ್ತಿದ್ದರು. ಈ ವಾರ ಮನೆಯ ಹಲವು ಸ್ಪರ್ಧಿಗಳು ಮಾನವೀಯತೆ ಮೀರಿ ವರ್ತಿಸಿದ್ದಾರೆ, ಅವರ ವರ್ತನೆಯನ್ನು ಸುದೀಪ್ ಹೇಗೆ ವಿಮರ್ಶಿಸುತ್ತಾರೆ, ಯಾರನ್ನು ಟೀಕಿಸುತ್ತಾರೆ, ಯಾರಿಗೆ ಭೇಷ್ ಎನ್ನುತ್ತಾರೆ. ನ್ಯಾಯ ವಿತರಣೆ ಹೇಗೆ ಮಾಡುತ್ತಾರೆ ಎಂದು ನೋಡಲು ಕಾದಿದ್ದರು. ಅಂತೆಯೇ ವಾರಾಂತ್ಯದ ಪಂಚಾಯ್ತಿಗೆ ಬಂದ ಸುದೀಪ್ ತುಸುವೂ ತಡ ಮಾಡದೆ ಸ್ಪರ್ಧಿಗಳ ವಿಚಾರಣೆ ಆರಂಭಿಸಿದ್ದಾರೆ.
ಹಾಲ್ನ ಮಧ್ಯೆ ಪ್ರತ್ಯೇಕವಾಗಿ ಕುರ್ಚಿಯೊಂದನ್ನು ಹಾಕಿಸಿ, ಪ್ರತಿಯೊಬ್ಬ ಸ್ಪರ್ಧಿಯನ್ನೂ ಕುರ್ಚಿಗೆ ಕರೆದು ಈ ವಾರ ಮನೆಯಲ್ಲಿ ನಡೆದ ಘಟನೆಗಳ ಬಗ್ಗೆ ಅವರವರ ಅಭಿಪ್ರಾಯ ಕೇಳಿದ್ದಾರೆ. ‘ಈ ದಿನ ಮೊದಲಿಗೆ ನಾನು ಮಾತನಾಡುವುದಿಲ್ಲ, ನಿಮ್ಮ ಮಾತುಗಳನ್ನು ಕೇಳುತ್ತೇನೆ’ ಎಂದು, ಸಾಲಾಗಿ ಎಲ್ಲ ಸ್ಪರ್ಧಿಗಳನ್ನೂ ಕರೆದು ಅವರವರ ದೃಷ್ಟಿಕೋನದಲ್ಲಿ ವಾರದ ಕತೆಯನ್ನು ಕೇಳಿದ್ದಾರೆ.
ಮೊದಲಿಗೆ ಕಾರ್ತಿಕ್ ಅನ್ನು ಕರೆದರು ಸುದೀಪ್, ಕುರ್ಚಿಯಲ್ಲಿ ಕುಳಿತ ಕಾರ್ತಿಕ್, ತಮ್ಮ ಪ್ರಕಾರ ನಡೆದ ಘಟನೆಗಳನ್ನು ವಿವರಿಸಿದರು. ತಾನು ವಿನಯ್ಗೆ ಸಿಕ್ಕಿದ್ದ ಆನೆಯನ್ನು ಡಸ್ಟ್ಬೀನ್ಗೆ ಹಾಕಿದ್ದೆ ಅದು ಟಾಸ್ಕ್ನ ಭಾಗವಾಗಿತ್ತು, ಆದರೆ ಟಾಸ್ಕ್ ಮುಗಿದ ಕೂಡಲೇ ನಾನೇ ಅದನ್ನು ತೊಳೆದು ಟೇಬಲ್ ಮೇಲಿಟ್ಟೆ ಎಂದರು. ಬಳಿಕ ತಮಗೂ ವಿನಯ್ಗೂ ಆದ ಜಗಳ ಹಾಗೂ ತನ್ನ ತಪ್ಪಿಲ್ಲದಿದ್ದರೂ ವಿನಯ್ ಉದ್ದೇಶಪೂರ್ವಕವಾಗಿ ಜಗಳ ಮಾಡಿದರು. ನಾನು ಆಡದ ಮಾತನ್ನು ಆಡಿದ್ದೀಯ ಎಂದು ನನ್ನ ಕುಟುಂಬ ಸದಸ್ಯರನ್ನು ಎಳೆದು ತಂದರು ಎಂದರು.
ಇದನ್ನೂ ಓದಿ:ಈ ವಾರ ಬಿಗ್ಬಾಸ್ ಮನೆಯಲ್ಲಿ ಅತಿ ಹೆಚ್ಚು ಮತ ಗಳಿಸಿರುವುದು ಯಾರು? ಡ್ರೋನ್ ಪ್ರತಾಪ್ಗೆ ಎಷ್ಟನೆ ಸ್ಥಾನ?
ಬಳಿಕ ಬಂದ ವಿನಯ್, ಕಾರ್ತಿಕ್ ಹೇಳಿದ ಮಾತುಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ತಿಕ್ ಮಾಡಿದ ಆರೋಪಗಳಿಗೆ ಸ್ಪಷ್ಟನೆ ಕೊಟ್ಟರು. ತನ್ನದು ತಪ್ಪಿಲ್ಲವೆಂದು, ಕಾರ್ತಿಕ್ ಬೇಕೆಂದೇ ನನ್ನನ್ನು ಪ್ರವೋಕ್ ಮಾಡಿ, ನನ್ನಿಂದ ಮಾಡಿಸಿದರು. ನನ್ನ ಆನೆಯನ್ನು ಹಾಳು ಮಾಡಿದರು ಎಂದು ಆರೋಪ ಮಾಡಿದರು.
ಬಳಿಕ ಬಂದ ತುಕಾಲಿ ಸಂತೋಷ್, ಬಹುತೇಕ ತಮ್ಮ ತಂಡದ ಪರವಾಗಿಯೇ ಮಾತನಾಡಿದರು. ಕಾರ್ತಿಕ್ ಹಾಗೂ ಅವರ ತಂಡದ್ದೇ ತಪ್ಪು ಎನ್ನುವಂತೆ ಮಾತನಾಡಿದರು. ತುಕಾಲಿ, ಮಾತನಾಡಿದ ಬಳಿಕ ಮಾತನಾಡಿದ ಸುದೀಪ್, ನಿಮಗೆ ಮಾತನಾಡಲು ಅವಕಾಶ ಕೊಟ್ಟಿದ್ದು ಸೂಕ್ಷ್ಮಗಳನ್ನು ಹೇಳುತ್ತೀರೆಂದೇ ಹೊರತು, ನಡೆದ ಘಟನೆಗಳನ್ನು ಹೇಳಲೋ ಅಥವಾ ಯಾರದ್ದು ತಪ್ಪು, ಯಾರದ್ದು ಸರಿಯೋ ಎಂದು ನನಗೆ ಒಪ್ಪಿಸಿ ಎಂದಲ್ಲ ಎಂದರು. ತುಕಾಲಿ ಸಂತು, ತಮ್ಮ ತಪ್ಪಿನ ಅರಿವಾಗಿ ಕ್ಷಮೆ ಕೇಳಿದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ