AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕ್ಯಾಪ್ಟನ್​ ನೀವಾ, ನಮ್ರತಾನಾ?’; ‘ಮನೆ ದಾರಿ ತಪ್ಪಲು ನೀವೆ ಮೂಲ ಕಾರಣ’ ಎಂದ ಸುದೀಪ್

ಸ್ನೇಹಿತ್​ಗೆ ಈ ವಾರದ ತಂಡ ಮಾಡೋ ಅಧಿಕಾರ ನೀಡಲಾಗಿತ್ತು. ಆದರೆ, ಈ ಅಧಿಕಾರವನ್ನು ಅವರು ದುರ್ಬಳಕೆ ಮಾಡಿಕೊಂಡರು. ಅವರು ತಂಡ ಮಾಡಿದ್ದು ಯಾರಿಗೂ ಖುಷಿ ನೀಡಲಿಲ್ಲ. ಈ ವಿಚಾರವನ್ನು ಸುದೀಪ್ ಎತ್ತಿದ್ದಾರೆ.

‘ಕ್ಯಾಪ್ಟನ್​ ನೀವಾ, ನಮ್ರತಾನಾ?’; ‘ಮನೆ ದಾರಿ ತಪ್ಪಲು ನೀವೆ ಮೂಲ ಕಾರಣ’ ಎಂದ ಸುದೀಪ್
ಸ್ನೇಹಿತ್-ಸುದೀಪ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Dec 09, 2023 | 10:54 PM

ಈ ವಾರ ಬಿಗ್ ಬಾಸ್ ಮನೆಯಲ್ಲಿ ಸ್ನೇಹಿತ್ ಗೌಡ (Snehith Gowda) ಅವರು ಕ್ಯಾಪ್ಟನ್ ಆಗಿದ್ದರು. ಅವರು ತೆಗೆದುಕೊಂಡ ಪಕ್ಷಪಾತ ನಿರ್ಧಾರಗಳಿಂದ ಮನೆಗೆ ಸಾಕಷ್ಟು ತೊಂದರೆ ಆಗಿದೆ. ಈ ವಿಚಾರದಲ್ಲಿ ಸುದೀಪ್ ಅವರು ಕ್ಲಾಸ್ ತೆಗೆದುಕೊಳ್ಳಬಹುದು ಎಂದು ವೀಕ್ಷಕರು ಊಹಿಸಿದ್ದರು. ಅದರಂತೆ ಆಗಿದೆ. ಸುದೀಪ್ ಅವರು ಬೈದ ರೀತಿಗೆ ಸ್ನೇಹಿತ್​ಗೆ ಮಾತೇ ಬಾರದಂತೆ ಆಗಿದೆ. ಶನಿವಾರ (ಡಿಸೆಂಬರ್ 9) ಜಿಯೋ ಸಿನಿಮಾ ಹಾಗೂ ಕಲರ್ಸ್ ಕನ್ನಡದಲ್ಲಿ ಎಪಿಸೋಡ್ ಪ್ರಸಾರ ಕಂಡಿದೆ.

ಸ್ನೇಹಿತ್​ಗೆ ಈ ವಾರದ ತಂಡ ಮಾಡೋ ಅಧಿಕಾರ ನೀಡಲಾಗಿತ್ತು. ಆದರೆ, ಈ ಅಧಿಕಾರವನ್ನು ಅವರು ದುರ್ಬಳಕೆ ಮಾಡಿಕೊಂಡರು. ಅವರು ತಂಡ ಮಾಡಿದ್ದು ಯಾರಿಗೂ ಖುಷಿ ನೀಡಲಿಲ್ಲ. ಈ ವಿಚಾರವನ್ನು ಸುದೀಪ್ ಎತ್ತಿದ್ದಾರೆ. ‘ಈ ವಾರ ಬ್ಯಾಲೆನ್ಸ್​ ಟೀಂ ಮಾಡೋ ಅವಕಾಶವನ್ನು ಬಿಗ್ ಬಾಸ್ ನೀಡಿದ್ದರು. ಆದರೆ, ನೀವು ಮಾಡಿದ್ದು ಏನು? ಡಿಸ್ಕಷನ್​ ಮಾಡಿ ಟೀಂ ಮಾಡಿ ಎಂದು ಬಿಗ್ ಬಾಸ್ ನಿಮಗೆ ಯಾವಾಗ ಹೇಳಿದ್ದರು ಹೇಳಿ’ ಎಂದು ಸುದೀಪ್ ಕೇಳಿದರು.

‘ನೀವು ಮಾಡಿರೋ ಕ್ಯಾಪ್ಟನ್ಸಿಗೆ ಇಂಗ್ಲಿಷ್​ನಲ್ಲಿ ಬಯಾಸ್ಡ್​ ಎನ್ನುತ್ತಾರೆ. ಇಂಥವರು ಲೀಡರ್ ಆಗೋಕೆ ಹೇಗೆ ಸಾಧ್ಯ? ಬಯಾಸ್ಡ್​ ಆಗಿದ್ರಿ ಯಾಕೆ’ ಎಂದು ಸುದೀಪ್ ಕೇಳಿದರು. ಇದಕ್ಕೆ ಸ್ನೇಹಿತ್ ನೇರವಾಗಿ ಉತ್ತರಿಸಿದ್ದಾರೆ. ‘ವಿನಯ್, ನಮ್ರತಾ ಅಥವಾ ಮೈಕಲ್ ಕ್ಯಾಪ್ಟನ್ ಆಗಬೇಕು ಅನ್ನೋದು ನನ್ನ ಆಸೆ ಆಗಿತ್ತು’ ಎಂದರು ಸ್ನೇಹಿತ್.

ನಂತರ ಸಂಗೀತಾಗೆ ಕ್ಲಾಸ್ ತೆಗೆದುಕೊಂಡರು ಸುದೀಪ್. ‘ಸಂಗೀತಾ ಅವರೇ ನಿಮ್ಮ ತಪ್ಪೂ ಇದೆ. ನಮ್ಮ ಟೀಂಗೆ ಅನ್ಯಾಯ ಆಗುತ್ತದೆ ಎಂದು ಹೇಳುತ್ತಲೇ ಬಂದ್ರಿ. ಒಳಗೆ ಆ್ಯಂಗರ್ ಕೂರುತ್ತದೆ. ಹಳೆಯದಲ್ಲ ನೆನಪಾಗುತ್ತದೆ. ಇದು ಎರಡನೇ ಫೌಂಡೇಷನ್’ ಎಂದರು ಸುದೀಪ್. ನಂತರ ಇಡೀ ಮನೆಯವರಿಗೆ ಕ್ಲಾಸ್ ತೆಗೆದುಕೊಂಡರು ಸುದೀಪ್.

ಬಿಗ್ ಬಾಸ್ ಮನೆಯ ದಿಕ್ಕು ತಪ್ಪಲು ಪ್ರತಿ ಹಂತದಲ್ಲೂ ಸ್ನೇಹಿತ್ ಅವರು ಕಾರಣ ಆಗುತ್ತಾ ಬಂದರು. ಸ್ನೇಹಿತ್ ಅವರು ಇದನ್ನು ಒಪ್ಪಿಕೊಂಡಿದ್ದಾರೆ. ಆದರೆ, ಇಡೀ ಮನೆಗೆ, ಸ್ಪರ್ಧಿಗಳಿಗೆ ಆದ ನಷ್ಟವನ್ನು ಮರಳಿ ಕೊಡೋರು ಯಾರು ಎನ್ನುವ ಪ್ರಶ್ನೆ ಅನೇಕರಲ್ಲಿ ಮೂಡಿದೆ.

ಇದನ್ನೂ ಓದಿ: ಬಿಗ್​ಬಾಸ್ ಕ್ಯಾಪ್ಟನ್ ಮನೆಗೆ ಬೀಗ ಹಾಕಿಸಿದ ಕಿಚ್ಚ ಸುದೀಪ್: ಕಾರಣವೇನು?

ಇನ್ನು, ಸುದೀಪ್ ಅವರು ವಿನಯ್​ಗೂ ಕ್ಲಾಸ್ ತೆಗೆದುಕೊಂಡಿದ್ದಾರೆ. ಹಿಟ್ಟು ತೆಗೆದುಕೊಂಡು ಕಾರ್ತಿಕ್​ಗೆ ಹೊಡೆದ ವಿನಯ್​ಗೆ ಸುದೀಪ್ ಬೈದಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾತ್ರಿ 9:30ಕ್ಕೆ ಎಪಿಸೋಡ್ ಪ್ರಸಾರ ಕಾಣುತ್ತದೆ. ಜಿಯೋ ಸಿನಿಮಾದಲ್ಲಿ ಎಪಿಸೋಡ್ ಜೊತೆ 24 ಗಂಟೆ ಲೈವ್ ಕೂಡ ವಿಕ್ಷಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ