‘ಪ್ರೀತಿಸ್ತೀನಿ ಅಂದ್ರೆ ಏನು ಮಾಡ್ತೀರಿ?’; ನಮ್ರತಾ ನೇರ ಪ್ರಶ್ನೆಗೆ ಕಂಗಾಲಾದ ಸ್ನೇಹಿತ್

ಸ್ನೇಹಿತ್ ಅವರು ಕ್ಯಾಪ್ಟನ್ಸಿ ಟಾಸ್ಕ್​ನಿಂದ ಹೊರಗೆ ಇಟ್ಟಿದ್ದು ನಮ್ರತಾ ಗೌಡ ಅವರಿಗೆ ಸಾಕಷ್ಟು ಬೇಸರ ಮೂಡಿಸಿದೆ. ಬಿಗ್ ಬಾಸ್​ನಲ್ಲಿ ಯಾರೂ ಫ್ರೆಂಡ್ಸ್ ಅನ್ನೋದು ಇರಲ್ಲ ಎಂಬುದು ಸ್ಪಷ್ಟವಾಗಿದೆ. ಮುಂದಿನ ದಿನಗಳಲ್ಲಿ ಸ್ವಂತ ಆಟ ಪ್ರದರ್ಶಿಸಲು ಅವರು ನಿರ್ಧರಿಸಿದ್ದಾರೆ.

‘ಪ್ರೀತಿಸ್ತೀನಿ ಅಂದ್ರೆ ಏನು ಮಾಡ್ತೀರಿ?’; ನಮ್ರತಾ ನೇರ ಪ್ರಶ್ನೆಗೆ ಕಂಗಾಲಾದ ಸ್ನೇಹಿತ್
ನಮ್ರತಾ ಗೌಡ, ಸ್ನೇಹಿತ್​ ಗೌಡ
Follow us
 ಶ್ರೀಲಕ್ಷ್ಮೀ ಎಚ್
| Updated By: ಮದನ್​ ಕುಮಾರ್​

Updated on: Dec 10, 2023 | 11:27 AM

ಸ್ನೇಹಿತ್ ಗೌಡ (Snehith Gowda) ಅವರು ನಮ್ರತಾ ಅವರನ್ನು ಇಷ್ಟಪಡುತ್ತಿದ್ದಾರೆ. ಇದನ್ನು ಅವರು ಮುಚ್ಚಿಟ್ಟುಕೊಂಡಿಲ್ಲ. ಮನಸ್ಸಿನಲ್ಲಿ ಈ ವಿಚಾರ ಇಟ್ಟುಕೊಂಡು ಕೊರಗಿಲ್ಲ. ಬದಲಿಗೆ ಮನಸ್ಸಿಗೆ ಅನಿಸಿದ ಎಲ್ಲ ವಿಚಾರಗಳ ಬಗ್ಗೆ ನಮ್ರತಾ (Namratha Gowda) ಎದುರು ಹೇಳಿಕೊಂಡಿದ್ದಾರೆ. ಆದರೆ, ನಮ್ರತಾಗೆ ಈ ವಿಚಾರದಲ್ಲಿ ಆಸಕ್ತಿ ಇಲ್ಲ. ಹೀಗಾಗಿ, ಈ ವಿಚಾರ ಬಂದಾಗ ಅವರಿಂದ ನೋ ಎನ್ನುವ ಉತ್ತರವೇ ಬರುತ್ತಾ ಇತ್ತು. ಈಗ ಸ್ನೇಹಿತ್​ಗೆ ಅವರು ಒಂದು ಪ್ರಶ್ನೆ ಕೇಳಿದ್ದಾರೆ. ಇದನ್ನು ಕೇಳಿ ಸ್ನೇಹಿತ್ ನಾಚಿಕೊಂಡಿದ್ದಾರೆ.

ನಮ್ರತಾ ಗೌಡ ಅವರಿಗೆ ಈ ವಾರ ಸ್ನೇಹಿತ್​ ಅವರಿಂದ ಬೇಸರ ಆಗಿದೆ. ಕ್ಯಾಪ್ಟನ್ಸಿ ಟಾಸ್ಕ್​ನಿಂದ ನಮ್ರತಾ ಅವರನ್ನು ಹೊರಗೆ ಇಡುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು. ‘ನನ್ನನ್ನು ಕ್ಯಾಪ್ಟನ್ಸಿ ಟಾಸ್ಕ್​ನಿಂದ ಹೊರಗೆ ಇಟ್ಟಿದ್ದಕ್ಕೆ ಬೇಸರ ಇಲ್ಲ. ಆದರೆ, ಅವರು ಸರಿಯಾದ ಕಾರಣ ನೀಡಿಲ್ಲ. ತಾವು ಕೆಟ್ಟವರಲ್ಲ, ಪಕ್ಷಪಾತ ಮಾಡುತ್ತಿಲ್ಲ ಎಂಬುದನ್ನು ತೋರಿಸಲು ಈ ರೀತಿ ಮಾಡುತ್ತಿದ್ದಾರೆ’ ಎಂದು ನಮ್ರತಾ ನೇರವಾಗಿ ಹೇಳಿದ್ದಾರೆ. ಸ್ನೇಹಿತ್ ಬಳಿ ಮಾತನಾಡುವುದನ್ನೇ ನಿಲ್ಲಿಸಿದ್ದರು.

ಈ ಕಾರಣಕ್ಕೆ ನಮ್ರತಾ ಬಳಿ ಪದೇ ಪದೇ ಹೋಗಿ ಮಾತನಾಡಲು ಸ್ನೇಹಿತ್ ಪ್ರಯತ್ನಿಸಿದ್ದಾರೆ. ನಮ್ರತಾ ಅವರು ಇದಕ್ಕೆ ಸೊಪ್ಪು ಹಾಕಲಿಲ್ಲ. ಏನೇ ಆದರೂ ಅವರು ಮಾತನಾಡಲಿಲ್ಲ. ಸ್ನೇಹಿತ್ ಗೌಡ ಅವರು ನಾನಾ ರೀತಿಯಲ್ಲಿ ಮಾತನಾಡಲು ಪ್ರಯತ್ನಿಸಿದ್ದಾರೆ. ಕೊನೆಗೂ ನಮ್ರತಾ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ನಮ್ರತಾ ಅವರು ಬೆಡ್​ರೂಂನಲ್ಲಿ ಮಲಗಿದ್ದರು. ಈ ವೇಳೆ ಅಲ್ಲಿಗೆ ಬಂದರು ಸ್ನೇಹಿತ್ ಗೌಡ. ‘ನಿಮಗೆ ಏನು ಬೇಕು ಹೇಳಿ. ಪದೇ ಪದೇ ಬಂದು ಈ ರೀತಿ ಮಾತನಾಡಲು ಪ್ರಯತ್ನಿಸಿದ್ದೀರಲ್ಲ’ ಎಂದರು ನಮ್ರತಾ ಗೌಡ. ‘ಏನೂ ಬೇಡ’ ಎಂದರು ಸ್ನೇಹಿತ್. ‘ಹೇಳಿ ಈಗ ನಾನು ಪ್ರೀತಿ ಮಾಡ್ತೀನಿ ಅಂದ್ರೆ ಏನು ಮಾಡ್ತೀರಿ?’ ಎಂದು ನೇರವಾಗಿ ಪ್ರಶ್ನೆ ಎಸೆದರು. ಆದರೆ, ಈ ಪ್ರಶ್ನೆಗೆ ಏನು ಉತ್ತರಿಸಬೇಕು ಎಂಬುದೇ ಸ್ನೇಹಿತ್​ಗೆ ತಿಳಿಯಲಿಲ್ಲ. ಅವರು ನಕ್ಕು ಸುಮ್ಮನಾದರು.

ಇದನ್ನೂ ಓದಿ: ನಮ್ರತಾ ಗೌಡ ಈಗ ಮೊದಲಿನಂತಿಲ್ಲ ಹುಷಾರ್​.. ಬದಲಾಯ್ತು ಆಟ

‘ಹೇಳಿ ಈಗ ನಾನು ಪ್ರೀತಿಸುತ್ತೇನೆ ಎಂದರೆ ಏನು ಮಾಡ್ತೀರಾ. ಇಷ್ಟು ದಿನ ಸುಮ್ಮನೆ ಕಾಳು ಹಾಕಿದ್ರಾ’ ಎಂದು ಮರು ಪ್ರಶ್ನೆ ಹಾಕಿದರು. ‘ಬಿಗ್ ಬಾಸ್​ನಿಂದ ಹೊರಗೆ ಹೋದ ಬಳಿಕ ಮನೆಯವರ ಜೊತೆ ಮಾತನಾಡೋಣ. ಒಂದು ವರ್ಷ ಮದುವೆ ಆಗೋದು ಬೇಡ. ನಿಮ್ಮಿಷ್ಟದ ಜಾಗಕ್ಕೆ ಹೊಗೋಣ. ಸ್ವಿಜರ್​ಲೆಂಡ್​ಗೆ ಮೊದಲು ಹೋಗೋಣ’ ಎಂದರು ಸ್ನೇಹಿತ್. ಅವರ ಮಾತನ್ನು ಕೇಳಿ ನಮ್ರತಾ ನಕ್ಕರು.

ಸ್ನೇಹಿತ್ ಅವರು ಕ್ಯಾಪ್ಟನ್ಸಿ ಟಾಸ್ಕ್​ನಿಂದ ಹೊರಗೆ ಇಟ್ಟಿದ್ದು ನಮ್ರತಾ ಗೌಡ ಅವರಿಗೆ ಸಾಕಷ್ಟು ಬೇಸರ ಮೂಡಿಸಿದೆ. ಬಿಗ್ ಬಾಸ್​ನಲ್ಲಿ ಯಾರೂ ಫ್ರೆಂಡ್ಸ್ ಅನ್ನೋದು ಇರಲ್ಲ ಎಂಬುದು ಸ್ಪಷ್ಟವಾಗಿದೆ. ಮುಂದಿನ ದಿನಗಳಲ್ಲಿ ಸ್ವಂತ ಆಟ ಪ್ರದರ್ಶಿಸಲು ಅವರು ನಿರ್ಧರಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ