AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀನು ಯಾವಾಗಲೂ ನನ್ನ ಗೆಳೆಯನಾಗಿರ್ತೀಯಾ: ದ್ವೇಷ ಮರೆತು ಸುದೀಪ್ ಎದುರು ಒಂದಾದ ವಿನಯ್-ಕಾರ್ತಿಕ್

Bigg Boss: ವಿನಯ್ ಗೌಡ ಹಾಗೂ ಕಾರ್ತಿಕ್ ಮಹೇಶ್ ಕೆಲ ವರ್ಷಗಳಿಂದಲೂ ಗೆಳೆಯರು ಆದರೆ ಬಿಗ್​ಬಾಸ್ ಮನೆಯಲ್ಲಿ ಅವರ ಗೆಳೆತನ ಹಾಳಾಗಿದೆ. ಆದರೆ ಈಗ ಸುದೀಪ್​ ದೆಸೆಯಿಂದ ಮತ್ತೆ ಗೆಳೆತನ ಚಿಗುರೊಡೆದಿದೆ.

ನೀನು ಯಾವಾಗಲೂ ನನ್ನ ಗೆಳೆಯನಾಗಿರ್ತೀಯಾ: ದ್ವೇಷ ಮರೆತು ಸುದೀಪ್ ಎದುರು ಒಂದಾದ ವಿನಯ್-ಕಾರ್ತಿಕ್
ವಿನಯ್-ಕಾರ್ತಿಕ್
 ಶ್ರೀಲಕ್ಷ್ಮೀ ಎಚ್
| Edited By: |

Updated on:Dec 10, 2023 | 8:02 PM

Share

ಹೊರ ಜಗತ್ತಿನಲ್ಲಿ ಎಷ್ಟೇ ಒಳ್ಳೆಯ ಗೆಳೆಯರಾಗಿದ್ದರೂ ಬಿಗ್ ಬಾಸ್​ನಲ್ಲಿ (Bigg Boss) ಅದೆಲ್ಲ ವರ್ಕೌಟ್ ಆಗಲ್ಲ. ಇದಕ್ಕೆ ಉತ್ತಮ ಉದಾಹರಣೆ ವಿನಯ್ ಗೌಡ ಹಾಗೂ ಕಾರ್ತಿಕ್ ಮಹೇಶ್. ಇವರು ಒಂದೇ ಇಂಡಸ್ಟ್ರಿಯಲ್ಲಿ ಇದ್ದಾರೆ. ಇಬ್ಬರ ಮಧ್ಯೆ ಒಳ್ಳೆಯ ಫ್ರೆಂಡ್​ಶಿಪ್ ಇದೆ. ಆದರೆ, ಬಿಗ್ ಬಾಸ್ ಮನೆಯಲ್ಲಿ ಅದು ಹಾಳಾಗಿತ್ತು. ಈಗ ಇಬ್ಬರೂ ಹಗ್ ಮಾಡಿಕೊಂಡು ಮತ್ತೆ ಫ್ರೆಂಡ್ಸ್ ಆಗಿದ್ದಾರೆ. ವೀಕೆಂಡ್ ಎಪಿಸೋಡ್ ಈ ಒಂದು ಸುಂದರ ಘಟನೆಗೆ ಸಾಕ್ಷಿ ಆಗಿದೆ.

ವಿನಯ್ ಅವರು ಹಲವು ಸಂದರ್ಭದಲ್ಲಿ ಅಗ್ರೆಸ್ಸಿವ್ ಆಗಿ ನಡೆದುಕೊಳ್ಳುತ್ತಾರೆ. ಸಂಗೀತಾ ಹಾಗೂ ವಿನಯ್ ಮಧ್ಯೆ ಯಾವಾಗಲೂ ಕಿರಿಕ್ ಆಗುತ್ತಲೇ ಇರುತ್ತದೆ. ಆದರೆ, ಸಂಗೀತಾ ಹಾಗೂ ಕಾರ್ತಿಕ್ ಒಳ್ಳೆಯ ಫ್ರೆಂಡ್ಸ್. ಇದು ಕಾರ್ತಿಕ್ ಹಾಗೂ ವಿನಯ್ ಅವರ ಫ್ರೆಂಡ್​ಶಿಪ್​ ಮೇಲೆ ಎಫೆಕ್ಟ್ ಆಗಿದೆ ಎಂದರೂ ಯಾವುದೇ ತಪ್ಪಿಲ್ಲ. ಕಳೆದ ವಾರವಂತೂ ಇದು ಮಿತಿ ಮೀರಿತ್ತು. ಕಾರ್ತಿಕ್ ಅವರನ್ನು ಎಂದಿಗೂ ಕ್ಷಮಿಸಲ್ಲ ಎಂದಿದ್ದರು ವಿನಯ್. ಅಷ್ಟೇ ಅಲ್ಲ ಕೈ ಕೈ ಮಿಲಾಯಿಸಿಕೊಳ್ಳುವ ಹಂತಕ್ಕೆ ಇವರ ಜಗಳ ಹೋಗಿತ್ತು. ಇಬ್ಬರೂ ಮತ್ತೆ ಒಂದಾಗಲ್ಲ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಹಾಗಾಗಿಲ್ಲ.

‘ನಾನು ಹಾಗೂ ಕಾರ್ತಿಕ್ ಹಲವು ಕೆಟ್ಟ ಕೆಲಸಗಳನ್ನು ಒಟ್ಟಿಗೆ ಮಾಡಿದ್ದೇವೆ’ ಎಂದು ಹೇಳಿದ್ದರು ವಿನಯ್. ಆದರೆ, ಬಿಗ್ ಬಾಸ್​ನಲ್ಲಿ ಇವರು ಬದ್ಧ ವೈರಿಗಳಂತೆ ನಡೆದುಕೊಂಡಿದ್ದರು. ಈಗ ಸುದೀಪ್ ಅವರ ನೇತೃತ್ವದಲ್ಲಿ ಇವರ ಮಧ್ಯೆ ರಾಜಿ ಆಗಿದೆ. ಇದನ್ನು ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.

ಇದನ್ನೂ ಓದಿ:ಟಾಸ್ಕ್ ಆಡುವಾಗ ಗಾಯ: ಬಿಗ್​ಬಾಸ್ ಮನೆಯಿಂದ ಸಂಗೀತಾ-ಪ್ರತಾಪ್ ಹೊರಗೆ

ಬಿಳಿ ರೋಸ್ ನೀಡಿ ಕ್ಷಮೆ ಕೇಳುವ ಅವಕಾಶವನ್ನು ಸುದೀಪ್ ನೀಡಿದರು. ವರ್ತೂರು ಸಂತೋಷ್ ಅವರು ಡ್ರೋನ್ ಪ್ರತಾಪ್​ಗೆ ಹೂವು ನೀಡಿದರು. ಟಾಸ್ಕ್​ನಲ್ಲಿ ಮುಖಕ್ಕೆ ನೀರು ಚೆಲ್ಲಿದ್ದಕ್ಕೆ ಕ್ಷಮೆ ಕೇಳಿದರು ಮತ್ತು ಇನ್ನು ಈ ರೀತಿ ಮಾಡುವುದಿಲ್ಲ ಎಂದರು ವರ್ತೂರು. ಆ ಬಳಿಕ ವಿನಯ್ ಅವರು ಕಾರ್ತಿಕ್​​​ಗೆ ಕ್ಷಮೆ ಳಿದರು.

‘ನಾನು ನೀನು ಬಹಳ ವರ್ಷಗಳಿಂದ ಫ್ರೆಂಡ್ಸ್. ಮೂರನೇ ವ್ಯಕ್ತಿಯಿಂದ ಮಿಸ್​ ಅಂಡರ್​​ಸ್ಟ್ಯಾಂಡಿಗ್ ಆಯ್ತು. ನಾನು ಸಾಕಷ್ಟು ರ್ಯೂಡ್ ಆಗಿ ನಡೆದುಕೊಂಡೆ. ಇದಾದಮೇಲೆ ನೀನು ನನ್ನ ಫ್ರೆಂಡ್ ಎಂದು ಟ್ರೀಟ್ ಮಾಡ್ತೀಯೋ ಗೊತ್ತಿಲ್ಲ. ನೀನು ಯಾವಾಗಲೂ ನನ್ನ ಫ್ರೆಂಡ್’ ಎಂದು ಹೇಳಿದ್ದಾರೆ ವಿನಯ್. ಸದ್ಯ ಕಲರ್ಸ್ ಕನ್ನಡ ಹಂಚಿಕೊಂಡಿರುವ ಪ್ರೋಮೋ ವೈರಲ್ ಆಗಿದೆ.

ವಿನಯ್ ಹಾಗೂ ಕಾರ್ತಿಕ್ ಮಧ್ಯೆ ಈ ಮೊದಲು ಹಲವು ಬಾರಿ ವೈಮನಸ್ಸು ಉಂಟಾಗಿತ್ತು. ಆ ಬಳಿಕ ಇಬ್ಬರೂ ಮತ್ತೆ ಒಂದಾಗಿದ್ದಾರೆ. ಈಗ ಮತ್ತೊಮ್ಮೆ ಇವರು ಒಂದಾಗಿದ್ದಾರೆ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಈ ಎಪಿಸೋಡ್ ಪ್ರಸಾರಕಾಣಲಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ನೋಡಲು ಅವಕಾಶ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:59 pm, Sun, 10 December 23

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?