TV9 Sweet Home Real Estate Expo: ಮೈಸೂರಿನಲ್ಲಿ ರಾಜೇಂದ್ರ ಕಲಾ ಮಂದಿರದಲ್ಲಿ TV9 ಎಕ್ಸ್ ಪೋ

Updated on: Aug 22, 2026 | 12:50 PM

ಮೈಸೂರಿನ ರಾಜೇಂದ್ರ ಕಲಾ ಮಂದಿರದಲ್ಲಿ ಶರಣ್ಯ ಫಾರ್ಮ್ಸ್ ಪ್ರಸ್ತುತಪಡಿಸುತ್ತಿರುವ ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್ಪೋ ಆಯೋಜಿಸಲಾಗಿದೆ. ಡಿಐಜಿ ಡಾ. ಬೋರಲಿಂಗಯ್ಯ ಮತ್ತು ಅರುಣ್ ಯೋಗಿರಾಜ್ ಅವರಿಂದ ಉದ್ಘಾಟನೆಗೊಂಡ ಈ ಎಕ್ಸ್ಪೋದಲ್ಲಿ ಉಚಿತ ಪ್ರವೇಶ, ಉಚಿತ ಪಾರ್ಕಿಂಗ್, ಸಾಲ ಸೌಲಭ್ಯಗಳ ಮಾಹಿತಿ ಮತ್ತು ಆಕರ್ಷಕ ಉಡುಗೊರೆಗಳನ್ನು ಗೆಲ್ಲುವ ಅವಕಾಶವಿದೆ.

ಮೈಸೂರು, ಆಗಸ್ಟ್ 22: ಅರಮನೆ ನಗರಿ ಮೈಸೂರಿನಲ್ಲಿ, ಶರಣ್ಯ ಫಾರ್ಮ್ಸ್ ಪ್ರಸ್ತುತಪಡಿಸುತ್ತಿರುವ ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್ಪೋ ಅದ್ಧೂರಿಯಾಗಿ ಆಯೋಜಿಸಲಾಗಿದೆ. ಜೆಎಸ್‌ಎಸ್‌ ಆಸ್ಪತ್ರೆ ಸಮೀಪದ ರಾಜೇಂದ್ರ ಕಲಾ ಮಂದಿರದಲ್ಲಿ ಈ ಪ್ರಾಪರ್ಟಿ ಪ್ರದರ್ಶನವು ನಡೆಯುತ್ತಿದ್ದು, ಮೈಸೂರಿನ ಜನರಿಗೆ ತಮ್ಮ ಕನಸಿನ ಮನೆಯನ್ನು ಕಂಡುಕೊಳ್ಳಲು ಸುವರ್ಣಾವಕಾಶ ಒದಗಿಸಿದೆ. ಎಕ್ಸ್ಪೋಗೆ ದಕ್ಷಿಣ ವಲಯದ ಡಿಐಜಿ ಡಾ. ಬೋರಲಿಂಗಯ್ಯ ಹಾಗೂ ವಿಶ್ವ ವಿಖ್ಯಾತ ಶಿಲ್ಪಿ ಮತ್ತು ಕಲಾವಿದ ಅರುಣ್ ಯೋಗಿರಾಜ್ ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅನೇಕ ಗಣ್ಯರು ಉಪಸ್ಥಿತರಿದ್ದರು. ಸಾರ್ವಜನಿಕರಿಗೆ ಯಾವುದೇ ಅಡೆತಡೆಯಿಲ್ಲದೆ ಭೇಟಿ ನೀಡಲು ಅನುಕೂಲವಾಗುವಂತೆ ಪ್ರವೇಶ ಮತ್ತು ಪಾರ್ಕಿಂಗ್ ವ್ಯವಸ್ಥೆ ಸಂಪೂರ್ಣವಾಗಿ ಉಚಿತವಾಗಿದೆ.

ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವವರಿಗೆ ಮತ್ತು ಮನೆ ಖರೀದಿಸುವವರಿಗೆ ಇದು ಉತ್ತಮ ವೇದಿಕೆಯಾಗಿದೆ. ಇಲ್ಲಿ ಪ್ರತಿಷ್ಠಿತ ಬ್ಯಾಂಕ್‌ಗಳಿಂದ ಲಭ್ಯವಿರುವ ಪ್ರಾಪರ್ಟಿ ಲೋನ್‌ಗಳು ಮತ್ತು ಸಾಲ ಸೌಲಭ್ಯಗಳ ಕುರಿತು ಸಮಗ್ರ ಮಾಹಿತಿಯನ್ನು ಒಂದೇ ಸೂರಿನಡಿ ಪಡೆಯಬಹುದು. ಇದರ ಜೊತೆಗೆ, ಎಕ್ಸ್ಪೋಗೆ ಭೇಟಿ ನೀಡುವವರಿಗೆ ಆಕರ್ಷಕ ಉಡುಗೊರೆಗಳನ್ನು ಗೆಲ್ಲುವ ಅವಕಾಶವೂ ಲಭ್ಯವಿದೆ. ಇದು ರಿಯಲ್ ಎಸ್ಟೇಟ್ ಹೂಡಿಕೆದಾರರು, ಮನೆ ಖರೀದಿದಾರರು ಮತ್ತು ಪ್ರಾಪರ್ಟಿ ಕುರಿತು ಮಾಹಿತಿ ಪಡೆಯಲು ಬಯಸುವವರಿಗೆ ಒಂದು ಅತ್ಯುತ್ತಮ ಅವಕಾಶವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us