ಬಿಗ್ ಬಾಸ್​ ಅಲ್ಲಿ ಈ ಬಾರಿ ಒಂದಲ್ಲ ಎರಡು ಫಿನಾಲೆ; ಮೂರನೇ ವಾರದ ಬಗ್ಗೆ ದೊಡ್ಡ ಅಪ್​ಡೇಟ್

Updated on: Sep 30, 2025 | 8:18 AM

‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಎಕ್ಸ್​ಪೆಕ್ಟ್​ ದಿ ಅನ್​ ಎಕ್ಸ್​ಪೆಕ್ಟ್’ ಎಂಬ ಮಾತನ್ನು ಹೇಳಲಾಗಿದೆ. ಯಾರೂ ಊಹಿಸದೇ ಇರುವುದನ್ನು ಇಲ್ಲಿ ಮಾಡಲಾಗುತ್ತಿದೆ. ಹೀಗಿರುವಾಗಲೇ ಈ ಬಾರಿ ಎರಡು ಫಿನಾಲೆ ನಡೆಯಲಿದೆ ಎಂದು ಘೋಷಿಸಲಾಗಿದೆ. ಇದನ್ನು ಕೇಳಿ ಅನೇಕರಿಗೆ ಶಾಕ್ ಆಗಿದೆ.

ಈ ಬಾರಿಯ ಬಿಗ್ ಬಾಸ್ ನಿರೀಕ್ಷೆಗಳಿಗೂ ಮೀರಿ ಇರುತ್ತದೆ ಎಂದು ಮೊದಲೇ ಘೋಷಿಸಲಾಗಿತ್ತು. ಈಗ ಹಾಗೆಯೇ ಆಗಿದೆ. ಬಿಗ್ ಬಾಸ್​ನಲ್ಲಿ ಮೊದಲ ದಿನವೇ ರಕ್ಷಿತಾ ಶೆಟ್ಟಿ ಎಲಿಮಿನೇಟ್ ಆಗಿದ್ದಾರೆ. ಈಗ ಮತ್ತೊಂದು ಶಾಕ್ ಎದುರಾಗಿದೆ. ಈ ಬಾರಿ ಎರಡು ಫಿನಾಲೆ ಇರಲಿದೆಯಂತೆ. ಮೂರನೇ ವಾರವೇ ಒಂದು ಫಿನಾಲೆ ನಡೆಯಲಿದೆ. ಅದರಲ್ಲಿ ಸ್ಪರ್ಧಿಗಳು ಗುಂಪು ಗುಂಪಾಗಿಯೂ ಎಲಿಮಿನೇಟ್ ಆಗಬಹುದು ಎಂದು ಬಿಗ್ ಬಾಸ್ ಎಚ್ಚರಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.