ಹಾಡಹಗಲೇ ತಹಶೀಲ್ದಾರ್ ಕಚೇರಿಯ 2 ಪ್ರಿಂಟರ್ಗಳನ್ನು ಕದ್ದೊಯ್ದ ಕಳ್ಳ: ಸಿಸಿಟಿವಿ ದೃಶ್ಯ ನೋಡಿ
ಹಾಡಹಗಲೇ ಕಚೇರಿಯಲ್ಲಿದ್ದ 2 ಪ್ರಿಂಟರ್ಗಳನ್ನು ಕದ್ದೊಯ್ದಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಹಶೀಲ್ದಾರ್ ಕಚೇರಿಯಲ್ಲಿ ನಡೆದಿದೆ. ಸಾರ್ವಜನಿಕ ಸೋಗಿನಲ್ಲಿ ತಹಶೀಲ್ದಾರ್ ಕಚೇರಿಗೆ ಆಗಮಿಸಿ ಕಳ್ಳತನ ಮಾಡಲಾಗಿದ್ದು, 2 ಪ್ರಿಂಟರ್ಗಳನ್ನು ಕದ್ದೊಯುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ತುಮಕೂರು, (ಜೂನ್ 02): ಜಿಲ್ಲೆಯ ಗುಬ್ಬಿ ತಹಶೀಲ್ದಾರ್ ಕಚೇರಿಯಲ್ಲಿ ಕಳ್ಳತನವಾವಿದೆ. ಹಾಡಹಗಲೇ ಕಚೇರಿಯಲ್ಲಿದ್ದ 2 ಪ್ರಿಂಟರ್ಗಳನ್ನು ಕದ್ದೊಯ್ದಿದ್ದಾರೆ. ಸಾರ್ವಜನಿಕ ಸೋಗಿನಲ್ಲಿ ತಹಶೀಲ್ದಾರ್ ಕಚೇರಿಗೆ ಆಗಮಿಸಿ ಹಾಡಹಗಲೇ ಶಿರಸ್ತೇದಾರ್ ವಿಭಾಗದಲ್ಲಿದ್ದ 2 ಪ್ರಿಂಟರ್ಗಳನ್ನ ಕದ್ದುಕೊಂಡು ಪರಾರಿಯಾಗಿದ್ದಾರೆ. ಎರಡು ಪ್ರಿಂಟರ್ ಗಳನ್ನ ಕದ್ದು ಬ್ಯಾಗ್ ನಲ್ಲಿ ಇಟ್ಟುಕೊಳ್ಳುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಳೆದ ಎರಡು ದಿನಗಳ ಹಿಂದಷ್ಟೇ ಗುಬ್ಬಿ ಪಟ್ಟಣದ ಎರಡು ದೊಡ್ಡ ಸೂಪರ್ ಮಾರ್ಕೆಟ್ ನಲ್ಲಿ ಕಳ್ಳತನವಾಗಿತ್ತು. ಈಗಿರುವ ತಹಶಿಲ್ದಾರ್ ಆರತಿ ಮನೆಯಲ್ಲೂ ಕೂಡ ಎರಡು ವರ್ಷದ ಹಿಂದೆ ಕಳ್ಳತನವಾಗಿತ್ತು. ಆ ಕಳ್ಳರನ್ನ ಇದುವರೆಗೂ ಪೊಲೀಸರಿಂದ ಬಂಧಿಸಲು ಆಗಿಲ್ಲ. ಸದ್ಯ ತಹಶಿಲ್ದಾರ್ ಕಚೇರಿಯ ಪ್ರಿಂಟರ್ ಕಳ್ಳತನದಿಂದ ಸಾರ್ವಜನಿಕರು ಆತಂಕಗೊಂಡಿದ್ದಾರೆ.