ಸನಾತನ ಧರ್ಮದ ಬಗ್ಗೆ ಮಾತಾಡಲು ಉದಯನಿಧಿ ಸ್ಟಾಲಿನ್​ಗೆ ನೈತಿಕ ಹಕ್ಕಿದೆಯಾ? ಅವನೊಬ್ಬ ಹುಚ್ಚ: ಆರ್ ಅಶೋಕ, ಶಾಸಕ

ಅರುಣ್​ ಕುಮಾರ್​ ಬೆಳ್ಳಿ

Updated on: Sep 04, 2023 | 7:34 PM

ಸನಾತನ ಧರ್ಮದ ಬಗ್ಗೆ ಮಾತಾಡಲು ಇವನು ಯಾರು ಅಸಲಿಗೆ ಧರ್ಮದ ಬಗ್ಗೆ ಮಾತಾಡಲು ಅವನಿಗೆ ಯಾವ ನೈತಿಕ ಹಕ್ಕಿದೆ ಎಂದು ಅಶೋಕ ಹೇಳಿದರು. ಕಾಂಗ್ರೆಸ್ ನೇತೃತ್ವ ಇಂಡಿಯಾ ಮೈತ್ರಿ ಸಂಘಟನೆಯ ಹಿಡನ್ ಅಜೆಂಡಾವೇ ಅದು-ಹಿಂದೂಗಳನ್ನು ಅವಹೇಳನ ಮಾಡುವುದು ಖಂಡಿಸುವುದು, ಅದೀಗ ದೇಶದ ಮುಂದೆ ಬಯಲಾಗಿದೆ ಎಂದು ಅಶೋಕ ಹೇಳಿದರು.

ಬೆಂಗಳೂರು: ಸನಾತನ ಧರ್ಮದ (Sanatan Dharma) ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಮಗ ಉದಯನಿಧಿ ಸ್ಟಾಲಿನ್ ಅನ್ನು (Udhayanidhi Stalin) ಬಿಜೆಪಿ ಶಾಸಕ ಆರ್ ಆಶೋಕ (R Ashoka) ಉಗ್ರವಾಗಿ ಖಂಡಿಸಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮತಾಡಿದ ಅಶೋಕ, ಉದಯನಿಧಿಯನ್ನು ಏಕವಚನದಲ್ಲೇ ಜರಿದರು. ಅವನು ಹುಚ್ಚನಂತಾಡುತ್ತಿದ್ದಾನೆ, ಅಸಲಿಗೆ ಅವನು ಹಿಂದೂನಾ ಅಥವಾ ಅಲ್ಲವೋ ಅಂತ ತಿಳಿಸಬೇಕು. ಸನಾತನ ಧರ್ಮದ ಬಗ್ಗೆ ಮಾತಾಡಲು ಇವನು ಯಾರು ಅಸಲಿಗೆ ಧರ್ಮದ ಬಗ್ಗೆ ಮಾತಾಡಲು ಅವನಿಗೆ ಯಾವ ನೈತಿಕ ಹಕ್ಕಿದೆ ಎಂದು ಅಶೋಕ ಹೇಳಿದರು. ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿ ಸಂಘಟನೆಯ ಹಿಡನ್ ಅಜೆಂಡಾವೇ ಅದು-ಹಿಂದೂಗಳನ್ನು ಅವಹೇಳನ ಮಾಡುವುದು ಖಂಡಿಸುವುದು, ಅದೀಗ ದೇಶದ ಮುಂದೆ ಬಯಲಾಗಿದೆ ಎಂದು ಅಶೋಕ ಹೇಳಿದರು. ಹಿಂದೂ ಅನ್ನೋದು ಒಂದು ಪರಂಪರೆ ಮತ್ತು ಸನಾತನ ಧರ್ಮ ನಮ್ಮ ರಕ್ತದಲ್ಲಿ ಬೆರೆತಿವಂಥದ್ದು ಎಂದು ಅಶೋಕ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.