ಹೊಸ ಪ್ರಯೋಗಕ್ಕೆ ಮುಂದಾದ ಉಡುಪಿ ಪ್ರವಾಸೋದ್ಯಮ ಇಲಾಖೆ: ಪ್ರವಾಸಿ ತಾಣಗಳ ಪ್ರಚಾರಕ್ಕೆ ಬ್ಲಾಗರ್​​ಗಳಿಗೆ ಆಹ್ವಾನ

| Updated By: ಗಂಗಾಧರ​ ಬ. ಸಾಬೋಜಿ

Updated on: Feb 24, 2024 | 10:07 PM

ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿದೆ. ದೇಶದ ನಾನಾ ಭಾಗಗಳಿಂದ ಬ್ಲಾಗರ್‌ಗಳನ್ನು ಆಹ್ವಾನಿಸಿ ಉಡುಪಿ ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳ ಪ್ರಚಾರಕ್ಕೆ ಬಳಸಿಕೊಳ್ಳಲಾಗುತ್ತಿದೆ. ಉಡುಪಿ ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳ ಪ್ರಚಾರಕ್ಕೆ ಬಳಸಿಕೊಳ್ಳಲಾಗುತ್ತಿದೆ. ಜಿಲ್ಲೆಗೆ ಹೆಮ್ಮೆ ತಂದಿರುವ ಪ್ರವಾಸಿ ತಾಣಗಳ ಬಗ್ಗೆ ದೇಶಾದ್ಯಂತ ಪ್ರಚಾರಪಡಿಸುವ ಮೂಲಕ ಪ್ರವಾಸಿಗರನ್ನು ಸೆಳೆಯಲು ಮುಂದಾಗಿದೆ.

ಉಡುಪಿ, ಫೆಬ್ರವರಿ 24: ಜಿಲ್ಲೆಯ ಪ್ರವಾಸೋದ್ಯಮ (Tourism Department) ಕ್ಷೇತ್ರದಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿದೆ. ದೇಶದ ನಾನಾ ಭಾಗಗಳಿಂದ ಬ್ಲಾಗರ್‌ಗಳನ್ನು ಆಹ್ವಾನಿಸಿ ಉಡುಪಿ ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳ ಪ್ರಚಾರಕ್ಕೆ ಬಳಸಿಕೊಳ್ಳಲಾಗುತ್ತಿದೆ. ಜಿಲ್ಲೆಗೆ ಹೆಮ್ಮೆ ತಂದಿರುವ ಪ್ರವಾಸಿ ತಾಣಗಳ ಬಗ್ಗೆ ದೇಶಾದ್ಯಂತ ಪ್ರಚಾರಪಡಿಸುವ ಮೂಲಕ ಪ್ರವಾಸಿಗರನ್ನು ಸೆಳೆಯಲು ಮುಂದಾಗಿದೆ. ಸತತ ಎರಡು ವರ್ಷಗಳಿಂದ ಈ ಪ್ರಯೋಗ ನಡೆಸುತ್ತಿದ್ದು ಪ್ರಸಿದ್ಧ ಬ್ಲಾಗರ್​ಗಳು ಉಡುಪಿ ಜಿಲ್ಲಾ ಪ್ರವಾಸಿ ತಾಣಗಳ ಸಂಚಾರ ಕೈಗೊಳ್ಳಲಿದ್ದಾರೆ. ವಿಶ್ವ ಪ್ರಸಿದ್ಧ ಕಡಲ ತೀರ ಮಲ್ಪೆಯಲ್ಲಿ ಈ ಬ್ಲಾಗರ್ ಮೀಟ್​ಗೆ ಚಾಲನೆ ನೀಡಲಾಯಿತು. ಮುಂದಿನ ಮೂರು ದಿನಗಳ ಕಾಲ ಮಲ್ಪೆ, ಸೈಂಟ್ ಮೇರಿಸ್ ದ್ವೀಪ, ಮಣಿಪಾಲದ ಹೆರಿಟೇಜ್ ವಿಲೇಜ್, ಕಟಪಾಡಿ ಕಂಬಳ ಸೇರಿದಂತೆ ವಿವಿಧ ಪ್ರವಾಸಿ ತಾಣಗಳು ಹಾಗೂ ಆಚರಣೆಗಳಲ್ಲಿ ಬ್ಲಾಗರ್​​ಗಳು ಭಾಗವಹಿಸಲಿದ್ದಾರೆ. ಈ ಮೂಲಕ ಕರಾವಳಿಯ ಕಂಪನ್ನು ದೇಶಾದ್ಯಂತ ಪಸರಿಸಲಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.