ಸೋಲುವ ಭೀತಿಯಿಂದ ದಿಕ್ಕುತಪ್ಪಿದಂತಾಗಿರುವ ಸಿದ್ದರಾಮಯ್ಯ ಕ್ಷೇತ್ರಗಳನ್ನು ಹುಡುಕಿಕೊಂಡು ಅಲೆದಾಡುತ್ತಿದ್ದಾರೆ: ಆರ್ ಅಶೋಕ, ಸಚಿವರು

Edited By: ಅರುಣ್​ ಕುಮಾರ್​ ಬೆಳ್ಳಿ

Updated on: Jan 12, 2023 | 2:27 PM

ಸಿದ್ದರಾಮಯ್ಯ ಚಾಮುಂಡೇಶ್ವರಿಯನ್ನು ಅಭಿವೃದ್ಧಿ ಮಾಡಿರುವುದಾಗಿ ಹೇಳಿದರೂ ಅಲ್ಲಿ ಅವಮಾನಕರ ಸೋಲು ಅನುಭವಿಸುತ್ತಾರೆ.

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು (Siddaramaiah) ದಿಕ್ಕು ಕಾಣದೆ ಕ್ಷೇತ್ರಗಳನ್ನು ಅರಸಿಕೊಂಡು ಓಡಾಡುತ್ತಿರುವ ಒಬ್ಬ ವಿಫಲ ರಾಜಕಾರಣಿ ಎಂದು ಕಂದಾಯ ಮಂತ್ರಿ ಆರ್ ಅಶೋಕ (R Ashoka) ಅವರು ಬೆಂಗಳೂರಲ್ಲಿ ಇಂದು ಹೇಳಿದರು. ಸಿದ್ದರಾಮಯ್ಯ ಚಾಮುಂಡೇಶ್ವರಿಯನ್ನು ಅಭಿವೃದ್ಧಿ ಮಾಡಿರುವುದಾಗಿ ಹೇಳಿದರೂ ಅಲ್ಲಿ ಅವಮಾನಕರ ಸೋಲು ಅನುಭವಿಸುತ್ತಾರೆ. ಬಾದಾಮಿಯಲ್ಲಿ ಅಭೂತಪೂರ್ವ ಸಾಧನೆ ಮಾಡಿದ್ದಾಗಿ ಹೇಳುತ್ತಾರೆ ಆದರೆ ಪುನರಾಯ್ಕೆಗೊಳ್ಳಲಾರೆ ಎಂಬ ಭೀತಿಯಿಂದ ಕೋಲಾರಕ್ಕೆ ಪಲಾಯನ ಮಾಡಿದ್ದಾರೆ. ಬೇರೆ ನಾಯಕರಾದ ಬಿಎಸ್ ಯಡಿಯೂರಪ್ಪ (BS Yediyurappa) ಮತ್ತು ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಸದಾ ಒಂದೇ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ. ಸಿದ್ದರಾಮಯ್ಯನವರಲ್ಲಿ ಆತ್ಮವಿಶ್ವಾಸದ ಕೊರತೆ ಎದ್ದುಕಾಣುತ್ತಿದೆ ಎಂದು ಸಚಿವರು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
TV9 Web

TV9 Kannada

Read More