Untimely rains batter Bengaluru again: ಬೆಂಗಳೂರಲ್ಲಿ ಮತ್ತೇ ಸುರಿದ ಮಳೆ, ವಾಹನ ಸವಾರರು, ರಸ್ತೆಬದಿ ವ್ಯಾಪಾರಿಗಳ ಪರದಾಟ

Updated on: May 08, 2023 | 6:54 PM

ಹವಾಮಾನ ಇಲಾಖೆಯ ಪ್ರಕಾರ ಮುಂದಿನ 5 ದಿನಗಳ ಕಾಲ ನಗರದಲ್ಲಿ ಮಳೆಯಾಗಲಿದೆ.

ಬೆಂಗಳೂರು: ಬೆಂಗಳೂರು ನಗರದಲ್ಲಿ ಇಂದು ಸಾಯಂಕಾಲ ಧಾರಾಕಾರವಾಗಿ ಮಳೆ (heavy rains) ಸುರಿಯಿತು, ಕೆಲಭಾಗಗಳಲ್ಲಿ ಇನ್ನೂ ಸುರಿಯತ್ತಿದೆ. ಶಾಂತಿನಗರ, ಕಲಾಸಿಪಾಳ್ಯ, ಮೆಜೆಸ್ಟಿಕ್, ರಾಜಾಜಿನಗರ (Rajajinagar), ಶ್ರೀನಗರ, ಜಯನಗರ, ವಿಜಯನಗರ, ಚಂದ್ರ ಲೇಔಟ್, ನಾಗರಬಾವಿ, ನಂದಿನಿ ಲೇಔಟ್, ಬಸವೇಶ್ವರನಗರ, ಕಾಮಾಕ್ಷಿಪಾಳ್ಯ, ಹೆಬ್ಬಾಳ, ಬನಶಂಕರಿ, ಬಸವನಗುಡಿ, ಕೆಂಗೇರಿ, ಗಿರಿನಗರ, ಆರ್ಟಿ ನಗರ, ರಾಜರಾಜೇಶ್ವರಿನಗರ, ಜಯನಗರ, ಮತ್ತಿಕೆರೆ ಮೊದಲಾದ ಭಾಗಗಳಲ್ಲಿ ಮಳೆಯಾಗಿದೆ. ದ್ವಿಚಕ್ರ ವಾಹನ ಸವಾರರು, ಬೇರೆ ವಾಹನ ಸವಾರರು ರಸ್ತೆಬದಿ ವ್ಯಾಪಾರಿಗಳು ಪರದಾಡುವ ಸ್ಥಿತಿಯನ್ನು ಮಳೆ ನಿರ್ಮಿಸುತ್ತು. ಹವಾಮಾನ ಇಲಾಖೆಯ (MET department) ಪ್ರಕಾರ ಮುಂದಿನ 5 ದಿನಗಳ ಕಾಲ ನಗರದಲ್ಲಿ ಮಳೆಯಾಗಲಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಶಿಕ್ಷಣ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More