ಆ ಒಂದು ಅಭ್ಯಾಸ ರೂಢಿಸಿಕೊಳ್ಳಿ ಅದರಿಂದಲೇ ನಾನು ಈ ಹಂತಕ್ಕೆ ಏರಿದ್ದು: ಉಪೇಂದ್ರ
Upendra: ಕಾಲೇಜು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟ ಉಪೇಂದ್ರ ವಿದ್ಯಾರ್ಥಿಗಳಿಗೆ ಕೆಲವು ಸ್ಪೂರ್ತಿ ತುಂಬುವ ಮಾತುಗಳನ್ನು ಹೇಳಿದರು. ಜೀವನದಲ್ಲಿ ಒಂದು ಅಭ್ಯಾಸವನ್ನು ಬೆಳೆಸಿಕೊಳ್ಳಿ ಎಂದು ಸಲಹೆ ನೀಡಿದರು.
ಕಾಲೇಜು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟ, ನಿರ್ದೇಶಕ ಉಪೇಂದ್ರ (Upendra) ತಮ್ಮ ವಾಕ್ಚಾತುರ್ಯದಿಂದ ಕಾಲೇಜು ವಿದ್ಯಾರ್ಥಿಗಳಲ್ಲಿ ಸ್ಪೂರ್ತಿ ತುಂಬುವ ಪ್ರಯತ್ನ ಮಾಡಿದರು. ಜೀವನದಲ್ಲಿ ನೋ ಎನ್ನುವುದನ್ನು ಕಲಿತುಕೊಳ್ಳಿ, ಎಸ್ ಬಾಸ್ ಎನ್ನುತ್ತಾ ಇರಬೇಡಿ ಎಂದರು. ನೋ ಎನ್ನುವುದನ್ನು ಕಲಿತವನು ಏನನ್ನಾದರೂ ಸಾಧಿಸಲು ಸಾಧ್ಯ. ಎಸ್ ಎನ್ನುತ್ತಾ ಇದ್ದರೆ ಇದ್ದಲ್ಲಿಯೇ ಇರುತ್ತಾರೆ ಎಂದರು. ಅಲ್ಲದೆ ತಾವು ತಮ್ಮ ಕಾಲೇಜು ಸಮಯದಲ್ಲಿ ನೋ ಎನ್ನುವುದನ್ನು ಕಲಿತುಕೊಂಡೆ ಅದರಿಂದಲೇ ಈ ಹಂತಕ್ಕೆ ಬರಲು ಸಾಧ್ಯವಾಯಿತು ಎಂದರು. ಅಲ್ಲದೆ ತಮ್ಮ ‘ಯುಐ’ ಸಿನಿಮಾ ಬಗ್ಗೆ ಮಾತನಾಡಿ, ‘ಆರ್ಟಿಫಿಷಿಯಲ್ ಇಂಟೆಲಿಜೆನ್ಸ್’ ಬಗ್ಗೆ ಸಿನಿಮಾ ಮಾಡಿದ್ದೇವೆ. ಟೀಸರ್ನಲ್ಲಿ ಕತ್ತಲು ಇತ್ತು ಆದರೆ ಸಿನಿಮಾ ಹಾಗಿರುವುದಿಲ್ಲ” ಎಂದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Nov 02, 2023 10:52 PM