Kabzaa Movie: ‘ಕಬ್ಜ’ ಸಿನಿಮಾದ ದೊಡ್ಡ ಪ್ಲಸ್​ ಪಾಯಿಂಟ್​ ಏನು? ವಿವರಣೆ ನೀಡಿದ ‘ರಿಯಲ್​ ಸ್ಟಾರ್’​ ಉಪೇಂದ್ರ

Updated on: Mar 12, 2023 | 3:48 PM

Upendra Kabzaa Interview: ಬಹುನಿರೀಕ್ಷಿತ ‘ಕಬ್ಜ’ ಸಿನಿಮಾದ ತೆರೆಹಿಂದೆ ಸಾಕಷ್ಟು ಅಚ್ಚರಿಯ ವಿಚಾರಗಳಿವೆ. ಆ ಬಗ್ಗೆ ಉಪೇಂದ್ರ ಮಾತನಾಡಿದ್ದಾರೆ. ‘ಟಿವಿ9 ಕನ್ನಡ’ ನಡೆಸಿದ ವಿಶೇಷ ಸಂದರ್ಶನ ಇಲ್ಲಿದೆ.

ಮಾರ್ಚ್​ 17ರಂದು ‘ಕಬ್ಜ’ ಸಿನಿಮಾ (Kabzaa Movie) ವಿಶ್ವಾದ್ಯಂತ ರಿಲೀಸ್​ ಆಗಲಿದೆ. ನಿರ್ದೇಶಕ ಆರ್​. ಚಂದ್ರು (R. Chandru) ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ‘ಕಬ್ಜ’ ತೆರೆಕಾಣುತ್ತಿದೆ. ‘ಪ್ರತಿಯೊಬ್ಬರು ಬೆರಗಾಗಿರುವುದು ನಮ್ಮ ಸಿನಿಮಾದ ಮೇಕಿಂಗ್​ನಿಂದ. ಆ ವಿಚಾರದಲ್ಲಿ ಇದು ಸಂಪೂರ್ಣ ಡಿಫರೆಂಟ್​ ಸಿನಿಮಾ. ಅದೇ ಈ ಚಿತ್ರದ ದೊಡ್ಡ ಪ್ಲಸ್​ ಪಾಯಿಂಟ್​’ ಎಂದು ಉಪೇಂದ್ರ (Upendra) ಹೇಳಿದ್ದಾರೆ. ‘ಈ ಸಿನಿಮಾದ ಫೋಟೋಶೂಟ್​ಗೆ ಹೋದ ಬಳಿಕ ಚಂದ್ರು ಅವರ ಆಲೋಚನೆ ಬಗ್ಗೆ ನನಗೆ ಅರಿವಾಯಿತು. ಹಾಗಾಗಿ ಅವರ ಕೆಲಸದಲ್ಲಿ ನಾನು ಮಧ್ಯೆ ಮಾತನಾಡಲು ಹೋಗಿಲ್ಲ’ ಎಂದಿದ್ದಾರೆ ಉಪೇಂದ್ರ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published on: Mar 12, 2023 03:48 PM
Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More