‘ಕತ್ತರಿಗುಪ್ಪೆಯಲ್ಲಿ ನಾನು ಚುನಾವಣೆಗೆ ನಿಲ್ಲಬಹುದು’: ಏನಿದು ಉಪೇಂದ್ರ ಪ್ಲ್ಯಾನ್?

Updated on: Apr 01, 2026 | 10:45 PM

ನಟ ಉಪೇಂದ್ರ ಅವರು ಹೊಸ ಆಲೋಚನೆಗಳ ಮೂಲಕ ಹೆಸರಾದವರು. ಈಗ ಅವರು ಪ್ರಜಾಕೀಯದ ಮೂಲಕ ಮತ್ತೆ ಜನರ ಎದುರು ಬಂದಿದ್ದಾರೆ. ತಮ್ಮ ಪಕ್ಷದ ಹೊಸ ಆ್ಯಪ್ ಶುರು ಮಾಡಿದ್ದಾರೆ. ಆದರೆ ಈವರೆಗೂ ಅವರು ಚುನಾವಣೆಗೆ ಸ್ಪರ್ಧಿಸಿಲ್ಲ. ಆ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಅವರೇ ಮಾತನಾಡಿದ್ದಾರೆ.

ನಟ ಉಪೇಂದ್ರ ಅವರು ಹೊಸ ಆಲೋಚನೆಗಳ ಮೂಲಕ ಹೆಸರಾದವರು. ಈಗ ಅವರು ಪ್ರಜಾಕೀಯ (Prajakeeya) ಮೂಲಕ ಮತ್ತೆ ಜನರ ಎದುರು ಬಂದಿದ್ದಾರೆ. ತಮ್ಮ ಪಕ್ಷದ ಹೊಸ ಆ್ಯಪ್ ಶುರು ಮಾಡಿದ್ದಾರೆ. ಆದರೆ ಈವರೆಗೂ ಅವರು ಚುನಾವಣೆಗೆ ಸ್ಪರ್ಧಿಸಿಲ್ಲ. ಮುಂದಿನ ದಿನಗಳಲ್ಲಿ ಅವರು ಸ್ಪರ್ಧಿಸುವ ಸಾಧ್ಯತೆ ಹೆಚ್ಚಿದೆ. ಇಂದು (ಏಪ್ರಿಲ್ 1) ಆ್ಯಪ್ ಬಿಡುಗಡೆ ಬಳಿಕ ಅವರು ಸುದ್ದಿಗೋಷ್ಠಿ ನಡೆಸಿದರು. ‘ಮುಂದೆ ನಾನು ಕೂಡ ಕತ್ತರಿಗುಪ್ಪೆಯಿಂದ ಚುನಾವಣೆಗೆ ನಿಂತುಕೊಳ್ಳಬಹುದು. ಗೊತ್ತಿಲ್ಲ. ಸದ್ಯಕ್ಕೆ ಜಿಬಿಎ ಎಲೆಕ್ಷನ್ ಸುಲವಾಗಿ ಈ ಆ್ಯಪ್ ಆರಂಭಿಸಿದ್ದೇನೆ’ ಎಂದು ಉಪೇಂದ್ರ (Upendra) ಅವರು ಹೇಳಿದ್ದಾರೆ. ಈ ಆ್ಯಪ್ ತುಂಬಾ ಪಾರದರ್ಶಕವಾಗಿದೆ ಎಂದು ಅವರು ತಿಳಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More