Upendra: ‘ಕಬ್ಜ 2’ ಸಿನಿಮಾದಲ್ಲಿ ಯಾರೆಲ್ಲ ನಟಿಸಬೇಕು? ಆರ್​. ಚಂದ್ರು ಎದುರು ನಟರ ಲಿಸ್ಟ್​ ನೀಡಿದ ಉಪೇಂದ್ರ

Updated on: Mar 15, 2023 | 7:15 AM

R. Chandru | Kabzaa 2: ‘ಕಬ್ಜ’ ಸಿನಿಮಾದ ಬಿಡುಗಡೆ ಹೊಸ್ತಿಲಿನಲ್ಲಿ ಅದರ ಸೀಕ್ವೆಲ್​ ಬಗ್ಗೆ ಉಪೇಂದ್ರ ಮಾತನಾಡಿದ್ದಾರೆ. ‘ಕಬ್ಜ 2’ ಪಾತ್ರವರ್ಗ ಹೇಗಿರಬೇಕು ಎಂಬುದನ್ನೂ ಅವರು ಸೂಚಿಸಿದ್ದಾರೆ.

ನಿರ್ದೇಶಕ ಆರ್​. ಚಂದ್ರು (R Chandru) ಅವರ ಶ್ರಮದ ಫಲವಾಗಿ ‘ಕಬ್ಜ’ ಸಿನಿಮಾ ಮೂಡಿಬಂದಿದೆ. ಮಾರ್ಚ್​ 17ರಂದು ಈ ಚಿತ್ರ ರಿಲೀಸ್​ ಆಗಲಿದೆ. ಮಂಗಳವಾರ (ಮಾರ್ಚ್​ 14) ನಡೆದ ಪ್ರೀ-ರಿಲೀಸ್​ ಇವೆಂಟ್​ನಲ್ಲಿ ‘ಕಬ್ಜ 2’ (Kabzaa 2) ಬಗ್ಗೆ ಪ್ರಸ್ತಾಪ ಆಯಿತು. ಹಾಗಾದರೆ ಆ ಸಿನಿಮಾದಲ್ಲಿ ಯಾರೆಲ್ಲ ನಟಿಸಬೇಕು? ಈ ಕುರಿತು ಉಪೇಂದ್ರ (Upendra) ಮಾತನಾಡಿದರು. ‘ಕಬ್ಜ ಪಾರ್ಟ್​ 2 ಚಿತ್ರದಲ್ಲಿ ನನ್ನನ್ನು ಅತಿಥಿ ಪಾತ್ರವಾಗಿ ಇಟ್ಟುಕೊಳ್ಳಿ. ಶಿವಣ್ಣ, ಸುದೀಪ್​, ಡಾಲಿ ಧನಂಜಯ್​, ಪ್ರೇಮ್​ ಇವರೆಲ್ಲ ಮುಖ್ಯಪಾತ್ರದಲ್ಲಿ ಇರಲಿ’ ಎಂದರು ಉಪೇಂದ್ರ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More