ಕಾರಿನಲ್ಲೇ ಒಳಗೆ ನುಗ್ಗಿ ಗುಂಡಿನ ದಾಳಿ; ಧಗಧಗನೆ ಹೊತ್ತಿ ಉರಿದ ಅಮೆರಿಕದ ಚರ್ಚ್​

Updated on: Sep 29, 2025 | 12:33 PM

ಅಮೆರಿಕದ ಮಿಚಿಗನ್​​ನ ಗ್ರ್ಯಾಂಡ್ ಬ್ಲಾಂಕ್‌ನಲ್ಲಿ ಜೀಸಸ್ ಕ್ರೈಸ್ಟ್ ಆಫ್ ಲೇಟರ್-ಡೇ ಸೇಂಟ್ಸ್ ಚರ್ಚ್‌ನೊಳಗೆ ತನ್ನ ಕಾರಿನಲ್ಲಿ ನುಗ್ಗಿದ 40 ವರ್ಷದ ಥಾಮಸ್ ಜಾಕೋಬ್ ಸ್ಯಾನ್‌ಫೋರ್ಡ್ ಎಂಬ ವ್ಯಕ್ತಿ ಗುಂಡಿನ ದಾಳಿ ನಡೆಸಿದ್ದಾನೆ. ಒಬ್ಬನೇ ವ್ಯಕ್ತಿ ಭಾರೀ ಪ್ರಬಲವಾದ ಬಂದೂಕಿನಿಂದ ಗುಂಡು ಹಾರಿಸಿದ್ದು, ಇಡೀ ಚರ್ಚ್ ಹೊತ್ತಿ ಉರಿದಿದೆ. ಈ ಘಟನೆಯಲ್ಲಿ ಐವರು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ವಾಷಿಂಗ್ಟನ್, ಸೆಪ್ಟೆಂಬರ್ 28: ಭಾನುವಾರ ಪ್ರಾರ್ಥನೆ ಸಲ್ಲಿಸುತ್ತಿದ್ದ ವೇಳೆ ಅಮೆರಿಕದ ಮಿಚಿಗನ್​​ನ (Michigan Church) ಗ್ರ್ಯಾಂಡ್ ಬ್ಲಾಂಕ್‌ನಲ್ಲಿ ಜೀಸಸ್ ಕ್ರೈಸ್ಟ್ ಆಫ್ ಲೇಟರ್-ಡೇ ಸೇಂಟ್ಸ್ ಚರ್ಚ್‌ನೊಳಗೆ ತನ್ನ ಕಾರಿನಲ್ಲಿ ನುಗ್ಗಿದ 40 ವರ್ಷದ ಥಾಮಸ್ ಜಾಕೋಬ್ ಸ್ಯಾನ್‌ಫೋರ್ಡ್ ಎಂಬ ವ್ಯಕ್ತಿ ಗುಂಡಿನ ದಾಳಿ ನಡೆಸಿದ್ದಾನೆ. ಒಬ್ಬನೇ ವ್ಯಕ್ತಿ ಭಾರೀ ಪ್ರಬಲವಾದ ಬಂದೂಕಿನಿಂದ ಗುಂಡು ಹಾರಿಸಿದ್ದು, ಇಡೀ ಚರ್ಚ್ ಹೊತ್ತಿ ಉರಿದಿದೆ. ಈ ಘಟನೆಯಲ್ಲಿ ಐವರು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆ ಶೂಟರ್​ಗೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಆತ ಯಾವ ಕಾರಣಕ್ಕೆ ಈ ಗುಂಡಿನ ದಾಳಿ ನಡೆಸಿದ್ದಾನೆ ಎಂಬುದು ದೃಢಪಟ್ಟಿಲ್ಲ. ಇಡೀ ಚರ್ಚ್ ಬೆಂಕಿಯಿಂದ ಹೊತ್ತಿ ಉರಿಯುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More