ಮಿಚಿಗನ್ ಚರ್ಚ್ನಲ್ಲಿ ಪ್ರಾರ್ಥನೆ ಮಾಡುತ್ತಿದ್ದವರ ಮೇಲೆ ಗುಂಡಿನ ದಾಳಿ; ಐವರು ಸಾವು
ಅಮೆರಿಕದಲ್ಲಿ ಭೀಕರ ಗುಂಡಿನ ದಾಳಿ ನಡೆದಿದೆ. ಭಾನುವಾರ ಜನರು ಚರ್ಚ್ನಲ್ಲಿ ಪ್ರಾರ್ಥನೆ ನಡೆಸುತ್ತಿದ್ದಾಗಲೇ ಈ ದಾಳಿ ನಡೆದಿದೆ. ಈ ದಾಳಿ ಬಗ್ಗೆ ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಪೊಲೀಸ್, ಅಗ್ನಿಶಾಮಕ ಮತ್ತು ತುರ್ತು ವೈದ್ಯಕೀಯ ಸೇವೆಗಳು ಸೇರಿದಂತೆ ವಿವಿಧ ಏಜೆನ್ಸಿಗಳು ಸ್ಥಳಕ್ಕೆ ಆಗಮಿಸಿದವು. ಗುಂಡು ಹಾರಿಸಿದ ವ್ಯಕ್ತಿಯಾದ ಥಾಮಸ್ ಜಾಕೋಬ್ ಸ್ಯಾನ್‌ಫೋರ್ಡ್ ಎಂಬಾತನನ್ನು ಪೊಲೀಸರು ಹತ್ಯೆ ಮಾಡಿದ್ದಾರೆ.

ವಾಷಿಂಗ್ಟನ್, ಸೆಪ್ಟೆಂಬರ್ 29: ಅಮೆರಿಕದ (United States) ಮಿಚಿಗನ್‌ನ ಗ್ರ್ಯಾಂಡ್ ಬ್ಲಾಂಕ್ನಲ್ಲಿನ ಚರ್ಚ್ ಮೇಲೆ 40 ವರ್ಷದ ವ್ಯಕ್ತಿಯೊಬ್ಬ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾನೆ. ಈ ಘಟನೆಯಲ್ಲಿ ಐವರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಮಿಚಿಗನ್‌ನ ದಿ ಚರ್ಚ್ ಆಫ್ ಜೀಸಸ್ ಕ್ರೈಸ್ಟ್ ಆಫ್ ಲೇಟರ್-ಡೇ ಸೇಂಟ್ಸ್ ಚರ್ಚ್‌ಗೆ ಕಾರಿನಲ್ಲಿ ಬಂದು ಡಿಕ್ಕಿ ಹೊಡೆದ ಶೂಟರ್ ಆ ಚರ್ಚ್ನಲ್ಲಿ ಪ್ರಾರ್ಥನೆ ಮಾಡುತ್ತಿದ್ದವರ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಈ ವೇಳೆ ಆ ಶೂಟರ್ನನ್ನು ಪೊಲೀಸರು ಗುಂಡಿ ಹಾರಿಸಿ ಕೊಂದಿದ್ದಾರೆ.
ಈ ಗುಂಡಿನ ದಾಳಿಯ ಹಿಂದಿನ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಘಟನೆಯಲ್ಲಿ ಮಕ್ಕಳು ಸೇರಿದಂತೆ 8 ಜನರಿಗೆ ಗಾಯವಾಗಿದೆ, ಐವರು ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ದೆಹಲಿ: ಜಾಗಿಂಗ್ಗೆ ಹೋಗಿದ್ದ ವ್ಯಕ್ತಿ ಮೇಲೆ ಹಲವು ಸುತ್ತಿನ ಗುಂಡಿನ ದಾಳಿ, ಸ್ಥಿತಿ ಗಂಭೀರ
ಗುಂಡಿನ ದಾಳಿ ನಡೆಸಿದ ಶೂಟರ್ ಬುರ್ಟೊನ್ ಮೂಲದ 40 ವರ್ಷದ ಥಾಮಸ್ ಜಾಕೋಬ್ ಸ್ಯಾನ್‌ಫೋರ್ಡ್ ಎಂದು ಗುರುತಿಸಲಾಗಿದ್ದು, ಆತ ಅಸಾಲ್ಟ್ ರೈಫಲ್ ಬಳಸಿದ್ದಾನೆ. ಪೊಲೀಸರು ಆತನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಗುಂಡು ಹಾರಿಸಿದ ವ್ಯಕ್ತಿ ಚರ್ಚ್ ಅನ್ನು ಗುರಿಯಾಗಿಸಿಕೊಂಡು ಕಟ್ಟಡಕ್ಕೆ ಬೆಂಕಿ ಹಚ್ಚಿದ್ದಾನೆ. ಈ ಘಟನೆಯಿಂದ 5 ಜನರು ಸಾವನ್ನಪ್ಪಿದ್ದಾರೆ, ಎಂಟು ಮಂದಿ ಗಾಯಗೊಂಡಿದ್ದಾರೆ.
ಇದನ್ನೂ ಓದಿ: ಮಣಿಪುರದಲ್ಲಿ ಅಸ್ಸಾಂ ರೈಫಲ್ಸ್ ವಾಹನದ ಮೇಲೆ ಅಪರಿಚಿತರಿಂದ ಗುಂಡಿನ ದಾಳಿ; ಇಬ್ಬರು ಸೈನಿಕರ ಸಾವು
ಗುಂಡು ಹಾರಿಸಿದ ವ್ಯಕ್ತಿ ಯಾರು?:
ಗ್ರಾಂಡ್ ಬ್ಲಾಂಕ್ ಟೌನ್‌ಶಿಪ್ ಪೊಲೀಸ್ ಮುಖ್ಯಸ್ಥರು, ಬಂದೂಕುಧಾರಿಯನ್ನು 40 ವರ್ಷದ ಥಾಮಸ್ ಜಾಕೋಬ್ ಸ್ಯಾನ್‌ಫೋರ್ಡ್ ಎಂದು ಗುರುತಿಸಲಾಗಿದೆ ಎಂದು ತಿಳಿಸಿದ್ದಾರೆ. ಆತ ಅಮೆರಿಕದ ನಿವೃತ್ತ ಯೋಧನಾಗಿದ್ದು ಇರಾಕ್‌ನಲ್ಲಿ ಸೇವೆ ಸಲ್ಲಿಸಿದ್ದ ಎನ್ನಲಾಗಿದೆ. ಉದ್ದೇಶಪೂರ್ವಕವಾಗಿ ಚರ್ಚ್‌ಗೆ ಬೆಂಕಿ ಹಚ್ಚಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




