ಮಣಿಪುರದಲ್ಲಿ ಅಸ್ಸಾಂ ರೈಫಲ್ಸ್ ವಾಹನದ ಮೇಲೆ ಅಪರಿಚಿತರಿಂದ ಗುಂಡಿನ ದಾಳಿ; ಇಬ್ಬರು ಸೈನಿಕರ ಸಾವು
ಮಣಿಪುರದ ಬಿಷ್ಣುಪುರದಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಗಳು ಸೇನಾ ವಾಹನದ ಮೇಲೆ ದಾಳಿ ಮಾಡಿದ ನಂತರ 2 ಅಸ್ಸಾಂ ರೈಫಲ್ಸ್ ಯೋಧರು ಸಾವನ್ನಪ್ಪಿದ್ದಾರೆ, ಹಲವರು ಗಾಯಗೊಂಡಿದ್ದಾರೆ. ಇಂದು ಸಂಜೆ 6 ಗಂಟೆಗೆ ದಾಳಿ ನಡೆದಾಗ ಅಸ್ಸಾಂ ರೈಫಲ್ಸ್ ಸಿಬ್ಬಂದಿ ಟಾಟಾ ವಾಹನದಲ್ಲಿ ಪ್ರಯಾಣಿಸುತ್ತಿದ್ದರು. ಜನನಿಬಿಡ ರಸ್ತೆಯಲ್ಲಿ ಸೈನಿಕರನ್ನು ಕರೆದೊಯ್ಯುತ್ತಿದ್ದ ವಾಹನದ ಮೇಲೆ ದಾಳಿ ಮಾಡಿದ ನಂತರ ಭಯೋತ್ಪಾದಕರು ಬಿಳಿ ವ್ಯಾನ್‌ನಲ್ಲಿ ಪರಾರಿಯಾಗಿದ್ದಾರೆ ಎಂದು ಹಿರಿಯ ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಿಷ್ಣುಪುರ, ಸೆಪ್ಟೆಂಬರ್ 19: ಮಣಿಪುರದ ಬಿಷ್ಣುಪುರದಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಗಳು ಅರೆಸೈನಿಕ ವಾಹನದ ಮೇಲೆ ದಾಳಿ ಮಾಡಿದ ಹಿನ್ನೆಲೆಯಲ್ಲಿ ಇಬ್ಬರು ಅಸ್ಸಾಂ ರೈಫಲ್ಸ್ ಯೋಧರು ಸಾವನ್ನಪ್ಪಿದ್ದಾರೆ. ಮಣಿಪುರದ ನಂಬೋಲ್ ಸಬಲ್ ಲೈಕೈ ಬಳಿ ರಾಷ್ಟ್ರೀಯ ಹೆದ್ದಾರಿ 2ರಲ್ಲಿ ಚಲಿಸುತ್ತಿದ್ದಾಗ ಸೈನಿಕರನ್ನು ಕರೆದೊಯ್ಯುತ್ತಿದ್ದ ವಾಹನದ ಮೇಲೆ ಭಯೋತ್ಪಾದಕರು (Terrorist Attack) ದಾಳಿ ನಡೆಸಿದರು. ಈ ಘಟನೆ ಸಂಜೆ 5.50ರ ಸುಮಾರಿಗೆ ಕತ್ತಲೆಯಾದ ಸಮಯದಲ್ಲಿ ಹೆಚ್ಚು ಜನವಸತಿ ಪ್ರದೇಶದಲ್ಲಿ ಸಂಭವಿಸಿದೆ.
ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಅಸ್ಸಾಂ ರೈಫಲ್ಸ್ ಸಿಬ್ಬಂದಿ ಸಾವನ್ನಪ್ಪಿದರು. ಇತರ 5 ಮಂದಿ ಗಾಯಗೊಂಡರು. ಅವರನ್ನು ತಕ್ಷಣವೇ ಪ್ರಾದೇಶಿಕ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (RIMS) ಸ್ಥಳಾಂತರಿಸಲಾಯಿತು. ಅಲ್ಲಿ ಅವರ ಸ್ಥಿತಿ ಸ್ಥಿರವಾಗಿದೆ ಎನ್ನಲಾಗಿದೆ. ಜನನಿಬಿಡ ರಸ್ತೆಯಲ್ಲಿ ಸೈನಿಕರನ್ನು ಸಾಗಿಸುತ್ತಿದ್ದ ವಾಹನದ ಮೇಲೆ ದಾಳಿ ಮಾಡಿದ ನಂತರ ಭಯೋತ್ಪಾದಕರು ಬಿಳಿ ವ್ಯಾನ್‌ನಲ್ಲಿ ಪರಾರಿಯಾಗಿದ್ದಾರೆ ಎಂದು ಹಿರಿಯ ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಾಗರಿಕರಿಗೆ ಹಾನಿಯಾಗದಂತೆ ಭದ್ರತಾ ಪಡೆಗಳು ಎಚ್ಚರಿಕೆಯಿಂದ ಪ್ರತಿಕ್ರಿಯಿಸಿವೆ.
#WATCH | Manipur | Ambush on security forces in Nambol Sabal area of Bishnupur; Details awaited
(Visuals deferred by unspecified time) pic.twitter.com/pbdhVs5oJp
— ANI (@ANI) September 19, 2025
ಇದನ್ನೂ ಓದಿ: ಆಪರೇಷನ್ ಸಿಂಧೂರ್ ಬಳಿಕ ಮೊದಲ ಬಾರಿಗೆ ಗಡಿ ನುಸುಳಲು ಉಗ್ರರ ಯತ್ನ, ಗುಂಡಿನ ಚಕಮಕಿ, ಸೈನಿಕ ಹುತಾತ್ಮ
ಈ ದಾಳಿಗೆ ಕಾರಣರಾದವರನ್ನು ಪತ್ತೆಹಚ್ಚಲು ಭದ್ರತಾ ಪಡೆಗಳು ಈಗ ಶೋಧ ಆರಂಭಿಸಿವೆ. ಈ ಘಟನೆಯ ಬಗ್ಗೆ ಮಣಿಪುರದ ಮಾಜಿ ಮುಖ್ಯಮಂತ್ರಿ ಬಿರೇನ್ ಸಿಂಗ್ ದುಃಖ ವ್ಯಕ್ತಪಡಿಸಿದ್ದಾರೆ. ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.
I am deeply shaken to hear about the ambush on our brave 33 Assam Rifles personnel at Nambol Sabal Leikai. The loss of two jawans and injuries to several others is a cruel blow to us all. My deepest condolences to the families of the fallen and prayers for the quick recovery of…
— N. Biren Singh (@NBirenSingh) September 19, 2025
ಇದನ್ನೂ ಓದಿ: ಮತ್ತೆ ಬಾಲ ಬಿಚ್ಚಿದ ಪಾಕಿಸ್ತಾನ; ಕದನ ವಿರಾಮ ಉಲ್ಲಂಘಿಸಿ ಭಾರತದ ಗಡಿಯಲ್ಲಿ ಗುಂಡಿನ ದಾಳಿ
“ಇಂದು ಸಂಜೆ ನಡೆದ ದಾಳಿಯಲ್ಲಿ ಕನಿಷ್ಠ ಇಬ್ಬರು ಜವಾನರು ಸಾವನ್ನಪ್ಪಿದ್ದು, ಇತರ ಹಲವರು ಗಾಯಗೊಂಡಿದ್ದಾರೆ. ಅಸ್ಸಾಂ ರೈಫಲ್ಸ್ ಸಿಬ್ಬಂದಿ ಇಂಫಾಲ್‌ನಿಂದ 407 ಟಾಟಾ ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ ಸಂಜೆ 6 ಗಂಟೆ ಸುಮಾರಿಗೆ ನಂಬೋಲ್ ಪೊಲೀಸ್ ಠಾಣೆ ಪ್ರದೇಶದಲ್ಲಿ ದಾಳಿ ನಡೆದಿದೆ. ದಾಳಿಗೊಳಗಾದ ಸ್ಥಳ ಇಂಫಾಲ್ ವಿಮಾನ ನಿಲ್ದಾಣದಿಂದ ಸುಮಾರು 8 ಕಿಲೋಮೀಟರ್ ದೂರದಲ್ಲಿದೆ. ಇಂಫಾಲ್‌ನಿಂದ ಬಿಷ್ಣುಪುರ ಜಿಲ್ಲೆಯ ಕಡೆಗೆ ಅಸ್ಸಾಂ ರೈಫಲ್ಸ್ ಸಿಬ್ಬಂದಿ ಪ್ರಯಾಣಿಸುತ್ತಿದ್ದ ವಾಹನದ ಮೇಲೆ ಬಂದೂಕುಧಾರಿಗಳ ಗುಂಪೊಂದು ಹೊಂಚು ಹಾಕಿ ದಾಳಿ ನಡೆಸಿದೆ” ಎಂದು ಪಿಟಿಐ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:21 pm, Fri, 19 September 25




