2 ಪಾನಿಪುರಿ ಕಡಿಮೆ ಕೊಟ್ಟಿದ್ದಕ್ಕೆ ಅಳುತ್ತಾ ರಸ್ತೆ ಮಧ್ಯೆ ಪ್ರತಿಭಟನೆಗೆ ಕುಳಿತ ಮಹಿಳೆ!
ಎರಡು ಪಾನಿ ಪುರಿ ಕಡಿಮೆ ನೀಡಿದ್ದರಿಂದ ಬೇಸರಗೊಂಡ ವಡೋದರಾದ ಮಹಿಳೆ ಜನನಿಬಿಡ ರಸ್ತೆಯ ಮಧ್ಯದಲ್ಲಿ ಪ್ರತಿಭಟನೆ ನಡೆಸಿದರು. ಈ ವಿಡಿಯೋ ವೈರಲ್ ಆಗಿದೆ. ವಡೋದರಾದಲ್ಲಿ, 20 ರೂ.ಗೆ 6 ಪಾನಿ ಪುರಿಯ ಬದಲು ಕೇವಲ 4 ಪಾನಿ ಪುರಿಗಳನ್ನು ನೀಡಿದ್ದಕ್ಕಾಗಿ ಮಹಿಳೆಯೊಬ್ಬರು ಆಕ್ಷೇಪ ವ್ಯಕ್ತಪಡಿಸಿದರು. ಇದನ್ನು ವಿರೋಧಿಸಿ ಅವರು ಬೀದಿಯಲ್ಲಿ ಪ್ರತಿಭಟನೆ ನಡೆಸಿದರು. ಪೊಲೀಸರು ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ಪ್ರತಿಭಟನೆಯನ್ನು ನಿಲ್ಲಿಸಬೇಕಾಯಿತು.
ವಡೋದರಾ, ಸೆಪ್ಟೆಂಬರ್ 19: ಗುಜರಾತ್ನ ವಡೋದರಾದಲ್ಲಿ (Vadodara) ವಿಚಿತ್ರವಾದ ಘಟನೆಯೊಂದು ನಡೆದಿದೆ. ಮಹಿಳೆಯೊಬ್ಬರು ಪಾನಿಪುರಿ ಮೇಲಿನ ಅತಿಯಾದ ಪ್ರೀತಿಯಿಂದ ಟ್ರಾಫಿಕ್ ಜಾಮ್ ಮಾಡಿದ್ದಾರೆ! ಹೌದು, ವಡೋದರಾದಲ್ಲಿ ಮಹಿಳೆಯೊಬ್ಬರು 20 ರೂ.ಗೆ 6 ಪಾನಿ ಪುರಿ ನೀಡುವ ಬದಲು ಕೇವಲ 4 ಪಾನಿ ಪುರಿಗಳನ್ನು ನೀಡಿದ್ದಕ್ಕಾಗಿ ಬೇಸರಗೊಂಡು, ತಮಗೆ 2 ಪಾನಿಪುರಿ ಬೇಕೇಬೇಕೆಂದು ವಾಹನಗಳ ಮಧ್ಯೆ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು. ವಡೋದರಾದ ರಸ್ತೆಯ ಮಧ್ಯದಲ್ಲಿ ಕುಳಿತು ಪಾನಿ ಪುರಿ ಮಾರಾಟಗಾರನ ವಿರುದ್ಧ ಪ್ರತಿಭಟಿಸುತ್ತಿರುವ ಅವರ ವಿಡಿಯೋ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದ್ದು, ಕೊನೆಗೆ ಪೊಲೀಸರು ಬಂದು ಆಕೆಯನ್ನು ರಸ್ತೆಯಿಂದ ಎಬ್ಬಿಸಬೇಕಾಯಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Latest Videos
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

