ಕೇವಲ 49 ರನ್ಗೆ ಆಲೌಟ್: 243 ರನ್ಗಳ ಅಮೋಘ ಜಯ
United Arab Emirates vs United States of America: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಯುಎಸ್ಎ ತಂಡ ಸಾಯಿತೇಜ ಅಜೇಯ 137 ರನ್ ಬಾರಿಸಿದರೆ, ಮಿಲಿಂದ್ ಕುಮಾರ್ ಅಜೇಯ 123 ರನ್ ಸಿಡಿಸಿದರು. ಈ ಭರ್ಜರಿ ಶತಕಗಳ ನೆರವಿನೊಂದಿಗೆ ಯುಎಸ್ಎ ತಂಡ 50 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 292 ರನ್ ಕಲೆಹಾಕಿದ್ದರು.
ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ 2027 ಲೀಗ್-2 ಪಂದ್ಯದಲ್ಲಿ ಯುಎಇ ತಂಡ ಹೀನಾಯವಾಗಿ ಸೋಲನುಭವಿಸಿದೆ. ಹೀಗೆ ಯುಎಇ ಪಡೆಗೆ ಸೋಲುಣಿಸಿದ್ದು ಯುಎಸ್ಎ ತಂಡ. ಈ ಪಂದ್ಯದಲ್ಲಿ ಟಾಸ್ ಗೆದ್ದ ಯುಎಇ ತಂಡದ ನಾಯಕ ಅಲಿಶಾನ್ ಶರಫು ಬೌಲಿಂಗ್ ಆಯ್ದುಕೊಂಡಿದ್ದರು.
ಅದರಂತೆ ಮೊದಲು ಬ್ಯಾಟ್ ಮಾಡಿದ ಯುಎಸ್ಎ ತಂಡ ಸಾಯಿತೇಜ ಅಜೇಯ 137 ರನ್ ಬಾರಿಸಿದರೆ, ಮಿಲಿಂದ್ ಕುಮಾರ್ ಅಜೇಯ 123 ರನ್ ಸಿಡಿಸಿದರು. ಈ ಭರ್ಜರಿ ಶತಕಗಳ ನೆರವಿನೊಂದಿಗೆ ಯುಎಸ್ಎ ತಂಡ 50 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 292 ರನ್ ಕಲೆಹಾಕಿದ್ದರು.
293 ರನ್ಗಳ ಗುರಿ ಬೆನ್ನತ್ತಿದ ಯುಎಇ ತಂಡವು ಕೇವಲ 12 ರನ್ಗಳಿಸುವಷ್ಟಲರಲ್ಲಿ 5 ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ 8 ರನ್ ಬಾರಿಸಿ ಮುಹಮ್ಮದ್ ವಾಸಿಂ ಕೆಲ ಹೊತ್ತು ತಂಡಕ್ಕೆ ಆಸರೆಯಾದರು. ಇನ್ನು ಬೌಲರ್ ಜುನೈದ್ ಸಿದ್ದಿಕಿ 10 ರನ್ಗಳಿಸಿದರು. ಇದಾಗ್ಯೂ 22.1 ಓವರ್ಗಳಲ್ಲಿ ಯುಎಇ ತಂಡವನ್ನು 49 ರನ್ಗಳಿಗೆ ಆಲೌಟ್ ಮಾಡುವಲ್ಲಿ ಯುಎಸ್ಎ ತಂಡ ಯಶಸ್ವಿಯಾಗಿದೆ.
ಈ ಮೂಲಕ ಯುಎಸ್ಎ ತಂಡವು 243 ರನ್ಗಳ ಅಮೋಘ ಜಯ ಸಾಧಿಸಿದೆ. ಇನ್ನು ಯುಎಸ್ಎ ಪರ 8.1 ಓವರ್ಗಳನ್ನು ಎಸೆದ ರುಶಿಲ್ ಉಗರ್ಕರ್ ಕೇವಲ 22 ರನ್ ನೀಡಿ 5 ವಿಕೆಟ್ ಕಬಳಿಸಿ ಮಿಂಚಿದ್ದಾರೆ.
